ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರಸಂಹಿತೆ ಜಾರಿ?

ಮೈಸೂರು, ಅ.28: ನಾಡಿನ ಧಾರ್ಮಿಕ ಹಾಗೂ ಶಕ್ತಿ ಕೇಂದ್ರ ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಹಾಗೂ ಕೊಡಗಿನ ತಲಕಾವೇರಿ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಪ್ರವಾಸಿಗರು, ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

ಇಂದಿನ ಯುವಕ-ಯುವತಿಯರು ಸೇರಿದಂತೆ ಹಲವರು ಮಂದಿ ಧರಿಸುವ ತುಂಡು ಚಡ್ಡಿ, ಹಾಫ್ ಪ್ಯಾಂಟ್, ಸ್ಲೀವ್ ಲೆಸ್ ಬನಿಯನ್ ಟೀ ಶರ್ಟ್ ಇನ್ನಿತರ ವಸ್ತ್ರಗಳನ್ನು ಧರಿಸಿ ಬರುವವರು ಇತರರಿಗೂ ಮುಜುಗರ ಉಂಟುಮಾಡುತ್ತದೆ. [ಜೀನ್ಸ್ ಧಾರಿಗಳಿಗೆ ಕೊಡಗಿನ ದೇಗುಲಕ್ಕೆ ಪ್ರವೇಶ ನಿಷೇಧ]

ಧಾರ್ಮಿಕ ಕ್ಷೇತ್ರದ ಘನತೆ, ಗಂಭೀರತೆಗೆ ತಕ್ಕುದಾದ ವಸ್ತ್ರಗಳನ್ನು ಮಾತ್ರ ತೊಡಬೇಕು. ಈ ರೀತಿಯ ವಸ್ತ್ರಗಳನ್ನು ದೇವಸ್ಥಾನಕ್ಕೆ ಹಾಕಿಕೊಂಡು ಬರದಂತೆ ಅಕ್ಟೋಬರ್ 30 ರಿಂದ ಈ ವಸ್ತ್ರ ಸಂಹಿತೆ ಜಾರಿಗೆ ತರಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.

Chamundi Hills Temple Dress Code impose on Tourists

ಮೊದಲಿಗೆ ಪುರುಷರಿಗೆ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದ್ದು, ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಇದರ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಬಾಬು ಹೇಳಿದ್ದಾರೆ.

ಸದ್ಯಕ್ಕೆ ಈ ವಸ್ತ್ರ ಸಂಹಿತೆ ಜಾರಿಗೊಳಿಸುತ್ತಿರುವುದರಿಂದ ಇಲ್ಲಿಗೆ ತಿಳಿಯದೆ ಬಂದವರಿಗೆ ಅನುಕೂಲವಾಗಲಿ ಎಂದು ಪಂಚೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಂತ ಹಂತವಾಗಿ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸುವಂತೆ ಕ್ರಮ ವಹಿಸಲಾಗುತ್ತದೆ.[ಮೈಸೂರಿನ ಚರ್ಚಲ್ಲಿ ವಿದೇಶಿಯರಿಗೆ ಡ್ರೆಸ್ ಕೋಡ್]

ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಸಹ ಈ ವಸ್ತ್ರ ಸಂಹಿತೆ ಪಾಲಿಸಬೇಕಾಗುತ್ತದೆ. ವಿದೇಶದಿಂದ ಬರುವ ಪ್ರವಾಸಿಗರು ತುಂಡು ಚೆಡ್ಡಿ ಧರಿಸಿ ದೇವಾಲಯದೊಳಕ್ಕೆ ಪ್ರವೇಶಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಪುರುಷರಿಗೆ ಪಂಚೆ ಧರಿಸಿ ಬರಲು ಸೂಚಿಸಲಾಗುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+