ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಗೆ ನಾಲ್ಕು ವರ್ಷದವರೆಗೆ ಆದಾಯ ತೆರಿಗೆ ವಿನಾಯಿತಿ

|
Google Oneindia Kannada News

ಮೈಸೂರು, ಏಪ್ರಿಲ್ 26: ಮೈಸೂರು ಅರಮನೆ ತೆರಿಗೆ ಭಾರದಿಂದ ಮುಕ್ತವಾಗಿದೆ. ಆದಾಯ ತೆರಿಗೆ ಇಲಾಖೆ ಅರಮನೆ ಮಂಡಳಿಗೆ ನಾಲ್ಕು ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಈ ಹಿಂದೆ ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಅರಮನೆ ಆಡಳಿತ ಮಂಡಳಿಗೆ ನೋಟಿಸ್ ನೀಡಿತ್ತು. ಇದರಿಂದ ಅರಮನೆ ಆಡಳಿತ ಮಂಡಳಿ ಕಂಗಲಾಗಿತ್ತು. ಅರಮನೆ ಮಂಡಳಿ ಅಧ್ಯಕ್ಷರೂ ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ , ಕಳೆದ ಸೆಪ್ಟೆಂಬರ್ ನಲ್ಲಿ ತೆರಿಗೆ ವಿನಾಯಿತಿ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದಿದ್ದರು.

ವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವ

ಅರಮನೆ ಐತಿಹಾಸಿಕ ಕುರುಹು. ಅಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ.ನಾಡಹಬ್ಬ ಮೈಸೂರು ಮಹೋತ್ಸವದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಆಗ ಅರಮನೆ ಆವರಣಕ್ಕೆ ಮುಕ್ತ ಪ್ರವೇಶ ನೀಡಲಾಗುತ್ತಿದೆ. ಅರಮನೆಯ ದೀಪಾಲಂಕಾರ ವೀಕ್ಷಿಸಲು ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆದ್ದರಿಂದ ಆದಾಯ ತೆರಿಗೆಯಿಂದ ಮೈಸೂರು ಅರಮನೆ ಮಂಡಳಿಗೆ ವಿನಾಯಿತಿ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ 2019-20ರಿಂದ ನಾಲ್ಕು ವರ್ಷದವರೆಗೆ ತೆರಿಗೆ ವಿನಾಯಿತಿ ನೀಡಿದೆ.

Mysuru Ambalivasa Palace got a tax free exemption up to 4 years

ಆದಾಯ ತೆರಿಗೆ ಇಲಾಖೆಯ ಕಾಯಿದೆ 1961ರ ಪ್ರಕಾರ 10(46)ರ ಅನ್ವಯ ಈ ತೆರಿಗೆ ವಿನಾಯಿತಿ ಸಿಕ್ಕಿದೆ. ಅರಮನೆ ವೀಕ್ಷಣೆಗೆ ಪ್ರತಿ ವರ್ಷ 35 ಲಕ್ಷ ಮಂದಿ ಭೇಟಿ ನೀಡುತ್ತಾರೆ. ಇದರಿಂದ ಪ್ರವೇಶ ಶುಲ್ಕವಾಗಿ ಅರಮನೆಗೆ ವಾರ್ಷಿಕ 15 ಕೋಟಿ ಆದಾಯ ಬರುತ್ತಿದೆ. ಅರಮನೆ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಿದೆ. ಅರಮನೆ ಮಂಡಳಿಯು ಹಣವನ್ನು ಬ್ಯಾಂಕ್ ಗಳಲ್ಲಿ ಠೇವಣಿಯಾಗಿ ಇಟ್ಟಿದ್ದು, ಲಕ್ಷಾಂತರ ರೂಪಾಯಿ ಬಡ್ಡಿಯೂ ಬರುತ್ತದೆ. ಹೀಗೆ ಒಟ್ಟು ವಾರ್ಷಿಕ ಸುಮಾರು 22 ಕೋಟಿ ರೂ ಆದಾಯ ಮಂಡಳಿಗಿದೆ. ಆದ್ದರಿಂದ ಈ ಆದಾಯಕ್ಕೆ ತೆರಿಗೆ ಪಾವತಿಸಲು ಆದಾಯ ತೆರಿಗೆಯು ಈ ಹಿಂದೆ ಆಡಳಿತ ಮಂಡಳಿಗೆ ನೋಟಿಸ್ ನೀಡಿತ್ತು.

English summary
Income Tax Department has given to Mysuru Ambalivasa Palace tax free exemption up to 4 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X