ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಕಲಾಮಂದಿರದಲ್ಲಿ ಅ.6 ರಿಂದ 3 ದಿನಗಳ ನಾಟಕೋತ್ಸವ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ಕಳೆದ ಹನ್ನೊಂದು ವರ್ಷಗಳಿಂದ ಮೈಸೂರು ರಂಗಭೂಮಿಯಲ್ಲಿ ನಿರಂತರ ರಂಗಚಟುವಟಿಕೆಯಿಂದ ರಂಗಾಸಕ್ತರ ಗಮನ ಸೆಳೆದಿರುವ ರಂಗವಲ್ಲಿ ತಂಡ ಮೈಸೂರಿನ ಕಲಾಮಂದಿರದಲ್ಲಿ ಅಕ್ಟೋಬರ್ 6ರಿಂದ 8ರವರೆಗೆ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಂಡಿದೆ.

ನಾಟಕೋತ್ಸವದ ಜೊತೆಗೆ ರಾಕ್ ಸಂಗೀತ, ಜುಗಲ್ ಬಂದಿ, ವರ್ಣಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಇಂದು( ಅಕ್ಟೋಬರ್ 6) ಸಂಜೆ 4.30 ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ರಂಗವಲ್ಲಿ ರಂಗಸಂಭ್ರಮ-2017 ಉದ್ಘಾಟನಾ ಸಮಾರಂಭ ನಡೆಯಲಿದೆ.

ಅ.7 ರಂದು ಉಪಾಸನಾದಿಂದ ಅ.7 ರಂದು ಉಪಾಸನಾದಿಂದ "ಮನೆಯಂಗಳದಲ್ಲಿ ಕವಿತಾಗಾಯನ"

ಹಿರಿಯ ರಂಗಕರ್ಮಿ ಡಾ. ವಿಜಯಮ್ಮ ನಾಟಕೋತ್ಸವ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ಸಾಹಿತಿ ಹಾಗೂ ಅಂಕಣಕಾರ ಬಿ. ಚಂದ್ರೇಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಹೆಚ್.ಚನ್ನಪ್ಪ, ರಂಗವಲ್ಲಿ ತಂಡದ ಸಂಸ್ಥಾಪಕ ಸದಸ್ಯ ರವಿಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

ಮೂರು ದಿನಗಳಲ್ಲಿ ನಡೆಯಲಿರುವ ಚಿತ್ರಪಟ, ವಾಲಿವಧೆ, ಮಾರೀಕಾಡು ನಾಟಕಗಳಲ್ಲಿ ತಜ್ಞ, ಯುವ, ಉದಯೋನ್ಮುಖ ನಟರು ನಟಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮಗಳ ಕುರಿತು ವಿವರ ಇಲ್ಲಿದೆ.

ಚಿತ್ರಪಟ ನಾಟಕದ ಬಗ್ಗೆ

ಚಿತ್ರಪಟ ನಾಟಕದ ಬಗ್ಗೆ

ಅಕ್ಟೋಬರ್ 6 ರಂದು ಸಂಜೆ 7 ಗಂಟೆಗೆ ಮಂಜುನಾಥ ಎಲ್.ಬಡಿಗೇರ್ ಅವರ ನಿರ್ದೇಶನದಲ್ಲಿ 'ಚಿತ್ರಪಟ' ನಾಟಕ ಪ್ರದರ್ಶನಗೊಳ್ಳಲಿದ್ದು, ಇದನ್ನು ಬೆಂಗಳೂರಿನ ಸಮಷ್ಟಿ ತಂಡ ಪ್ರಸ್ತುತಪಡಿಸಲಿದೆ. ಪ್ರಸ್ತುತ ನಾಟಕ ಅಯೋಧ್ಯೆಯಲ್ಲಿ ರಾಮ ಪಟ್ಟಾಭಿಷೇಕದ ನಂತರದ ಒಂದು ಕಾಲ್ಪನಿಕ ಸನ್ನಿವೇಶವನ್ನು ಚಿತ್ರಿಸುತ್ತದೆ. ಇಲ್ಲಿ ಸೀತೆಯ ಅಂತಃಪುರದಲ್ಲಿ ಚಂದ್ರನಖಿಯ ಕುಟಿಲತೆಯಿಂದ ರಾವಣ ಕಾಣಿಸಿಕೊಳ್ಳುತ್ತಾನೆ. ಅವನು ಅಲ್ಲಿ ಹೇಗೆ ಕಾಣಿಸಿಕೊಂಡ? ಈ ಚಂದ್ರನಖಿ ಯಾರು? ರಾಮ ರಾವಣರ ನಡುವೆ ಮತ್ತೆ ಯುದ್ಧ ನಡೆಯುತ್ತದೆಯೇ? ಇವೇ ಮುಂತಾದ ಪ್ರಶ್ನೆಗಳನ್ನು ಈ ಪ್ರಯೋಗ ರಂಗದ ಮೇಲೆ ಬಿಡಿಸುತ್ತಾ ಹೋಗುತ್ತದೆ.

ಕತ್ತಲ ಹರಿಸಿ ಬೆಳಕ ತರಿಸೋದಾ ಕಥೀ ಗುರಿ ಆಗ್ತದಾ?

ಕತ್ತಲ ಹರಿಸಿ ಬೆಳಕ ತರಿಸೋದಾ ಕಥೀ ಗುರಿ ಆಗ್ತದಾ?

ಸ್ತ್ರೀಯರ ಮೇಲೆ ಪ್ರತಿದಿನ ನಡೆಯುವ ಅತ್ಯಾಚಾರದ ಹಿನ್ನೆಲೆಯಲ್ಲಿ ಪುರುಷನನ್ನು ಸ್ತ್ರೀಯು ನೋಡುವ ದೃಷ್ಟಿ, ಸ್ತ್ರೀಯನ್ನು ಪುರುಷ ನೋಡಬೇಕಾದ ದೃಷ್ಟಿ, ಸ್ತ್ರೀ-ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಮತ್ತು ಮಗುವಿನ ಸಂಬಂಧವನ್ನು ಅವಲೋಕಿಸುವ ಹಾಗೆ ಈ ರಂಗಕೃತಿ ಪ್ರೇಕ್ಷಕನನ್ನು ಪ್ರೇರೇಪಿಸುತ್ತದೆ. ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿಯವರ ನಾಟಕ 'ಚಿತ್ರಪಟ ರಾಮಾಯಣ' ವಾಲ್ಮೀಕಿ ರಾಮಾಯಣದ ಕತೆಯಲ್ಲ. ಇದೊಂದು ಜಾನಪದೀಯ ರಾಮಾಯಣ. ಹೆಳವನಕಟ್ಟೆ ಗಿರಿಯಮ್ಮನ ಕಾವ್ಯವೊಂದರಲ್ಲಿ ಇದರ ಕೆಲವು ಮೂಲ ರೇಖೆಗಳಿವೆ. ಎಲ್ಲಮ್ಮ ದೇವಿಯ ಭಕ್ತರಾದ ಭೂತೆಯರು, ಚಿತ್ರಪಟಗಳನ್ನು ತೋರಿಸಿ ಜಾನಪದ ಶೈಲಿಯ ನೃತ್ಯಗೀತೆಗಳ ಮೂಲಕ ಕತೆಯನ್ನು ಪ್ರದರ್ಶಿಸುವ ಶೈಲಿಯನ್ನು ಈ ನಾಟಕದಲ್ಲಿ ಲೇಖಕರು ಅಳವಡಿಸಿಕೊಂಡಿದ್ದಾರೆ.

ರಾಕ್ ಫ್ಯೂಷನ್

ರಾಕ್ ಫ್ಯೂಷನ್

ಮೈಸೂರಿನ ನಾವು ತಂಡದಿಂದ ಕಲಾಮಂದಿರದ ಕಿಂದರಜೋಗಿ ಆವರಣದಲ್ಲಿ ರಾಕ್ ಫ್ಯೂಷನ್ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕಾವ್ಯ ಆಧಾರಿತ ನಾಟಕ ವಾಲಿವಧೆ ಪ್ರದರ್ಶನಗೊಳ್ಳಲಿದೆ. ಎಂ.ಗಣೇಶ್ ನಾಟಕವನ್ನು ನಿರ್ದೇಶಿಸಿದ್ದು, ಹಾವೇರಿ ಜಿಲ್ಲೆಯ ಶ್ರೀ ಗಜಾನನ ಯುವಕ ಮಂಡಳ ನಾಟಕವನ್ನು ಪ್ರಸ್ತುತಪಡಿಸಲಿದೆ.

ವಾಲಿವಧೆ ಕುರಿತು

ವಾಲಿವಧೆ ಕುರಿತು

ಕುವೆಂಪು ಅವರ ರಾಮಾಯಣ ದರ್ಶನಂ ಇದರ ಪೂಣ್ದೆನಗ್ನಿಯೆ ಸಾಕ್ಷಿ ಮತ್ತು ನೀ ಸತ್ಯವ್ರತನೇ ದಿಟಂ ಎಂಬೆರೆಡು ಕಾವ್ಯ ಭಾಗದಿಂದ ಆರಿಸಿ ಈ ವಾಲಿವಧೆ ನಾಟಕವನ್ನು ಸಿದ್ಧಪಡಿಸಲಾಗಿದೆ. ಮೂಲ ರಾಮಾಯಣದಲ್ಲಿನ ಪಾತ್ರಗಳನ್ನು ಕುವೆಂಪು ಮಾನವೀಯ ನೆಲೆಯಲ್ಲಿ ವಿಮರ್ಶಿಸಿ ಮರುಸೃಷ್ಟಿಸಿದ್ದಾರೆ. ಅಂಥ ಒಂದು ವಿಭಿನ್ನ ಮರುಸೃಷ್ಟಿ ಈ ವಾಲಿ. ಇದೊಂದು ಸಂಗೀತ ಪ್ರಧಾನ ನಾಟಕ. ವೈಚಾರಿಕನು-ಭಾವಕನೊಳಗೆ, ಭಾವಕನು-ವೈಚಾರಕನೊಳಗೆ ಕುಳಿತು ತಳಮಳಿಸುತ್ತಿರುವಾಗ ಇಂಡಿಯಾದ ಹಳೇ ಕಥೆಯೊಂದು ಕೇವಲ ಆಳದ ಪ್ರೀತಿಯ ಸಲುವಾಗಿ ಇಲ್ಲಿ ನಾಟಕವಾಗಿದೆ.

ಇಂದಿನ ತಲೆಮಾರಿಗೆ ಕನ್ನಡ ಘಟ್ಟಕಾವ್ಯದ ರುಚಿ ತಿಳಿಸುವ ಯತ್ನ

ಇಂದಿನ ತಲೆಮಾರಿಗೆ ಕನ್ನಡ ಘಟ್ಟಕಾವ್ಯದ ರುಚಿ ತಿಳಿಸುವ ಯತ್ನ

ಇಂಗ್ಲೀಷ್ ಮುಖ್ಯವಾಹಿನಿಯಾಗಿ ಹರಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಘಟ್ಟಕಾವ್ಯ ಒಂದರ ರುಚಿಯನ್ನು ಇಂದಿನ ತಲೆಮಾರಿಗೆ ಮುಟ್ಟಿಸುವುದಕ್ಕಾಗಿ ಮತ್ತು ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯ ರೂಪಕವಾಗಿ 'ವಾಲಿವಧೆ' ಒದಗಿ ಬಂದಿದೆ. ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಇಲ್ಲಿ ಅವನ ಸಾಯುವ ಕೊನೆಯ ಘಟ್ಟದಲ್ಲಿ ಪ್ರೀತಿಗಾಗಿ ಹಂಬಲಿಸಿ ತುಡಿಯುವ, ತನ್ನ ಅಹಂಕಾರಕ್ಕೆ ತಾನೇ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮದ ಬದುಕನ್ನು ಇಚ್ಛಿಸುವ ಅಣ್ಣ ವಾಲಿಯಾಗಿ ಚಿತ್ರಿಸಿದ್ದಾರೆ. ಯಕ್ಷಗಾನ, ಕಳರಿ ಮತ್ತು ಮಣಿಪುರಿ ಕಲೆಯ ಕೆಲ ಪಟ್ಟುಗಳನ್ನು ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಜುಗಲ್‍ಬಂದಿ

ಜುಗಲ್‍ಬಂದಿ

ಅಕ್ಟೋಬರ್ 8, ಭಾನುವಾರ ಸಂಜೆ 4.30 ಗಂಟೆಗೆ ವಿದ್ವಾನ್ ರಾಕೇಶ್ ಸುಧೀರ್(ಕೊಳಲು), ವಿದ್ವಾನ್ ಸಿ. ವಿಶ್ವನಾಥ್(ಮ್ಯಾಂಡಲಿನ್), ವಿದ್ವಾನ್ ತುಮಕೂರು ಬಿ. ಶಶಿಶಂಕರ್(ಮೃದಂಗ), ವಿದ್ವಾನ್ ಶರತ್ ಕೌಶಿಕ್ (ಘಟಂ) ರ ಜುಗಲ್ಬಂದಿ ಕಾರ್ಯಕ್ರಮ ಕಿಂದರಜೋಗಿ ಆವರಣದಲ್ಲಿ ನಡೆಯಲಿದೆ. ಅಂದು ಸಂಜೆ ಸಂಜೆ 7 ಗಂಟೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ 'ಮಾರೀಕಾಡು' ನಾಟಕ ಪ್ರದರ್ಶನ ನಡೆಯಲಿದೆ. ನಾಟಕವನ್ನು ಶಾ>ಶ್ರೀಪಾದ್ ಭಟ್ ನಿರ್ದೇಶಿಸಿದ್ದರೆ, ಉಡುಪಿ ಜಿಲ್ಲೆಯ ಭೂಮಿಕಾ(ರಿ.) ಪ್ರಸ್ತುತಪಡಿಸಲಿದ್ದಾರೆ.

ಮಾರೀಕಾಡು ಬಗ್ಗೆ...

ಮಾರೀಕಾಡು ಬಗ್ಗೆ...

ಕನಸಿನ ಒತ್ತಡಗಳಿಗೆ ಒಳಗಾಗಿ ಏನೇನೋ ಮಾಡ್ತೀವಿ. ಮಾಡಿದ್ದನ್ನು ಮುಚ್ಚಿಕೊಳ್ಳುವುದಕ್ಕೆ ಇನ್ನೇನೋ ಮಾಡ್ತೀವಿ. ಕೈಗೆ ಕತ್ತಿಗಳನ್ನು ತೆಗೆದುಕೊಳ್ಳುತ್ತೇವೆ. ಆಗ್ಲೆ ನಮ್ಮೆ ಸಿಹಿಕನಸುಗಳಿಗೆ ರಕ್ತ ಅಂಟಿಕೊಳ್ಳುತ್ತದೆ. ಗಾಯಗಳಾಗುತ್ತವೆ. ಗಾಯಗಳೆಲ್ಲಾ ಕೀವು ತುಂಬಿಕೊಂಡು ವಿಕಾರರೂಪ ತಾಳಿ, ಮೈಮೇಲೇರಿ ಬರುತ್ತವೆ. ಇವೆಲ್ಲ ಈ ಕಾಡಿನ ಮಾಯೆಗೆ ಒಳಗಾಗಿ ನಾವೇ ಮಾಡಿಕೊಂಡ ಗಾಯಗಳು. ಮೂಲ ಶೇಕ್‍ಸ್ಪಿಯರ್ ನ ಮ್ಯಾಕ್‍ಬೆತ್ ನಾಟಕವನ್ನು ಕನ್ನಡದ ಮಣ್ಣಿಗೆ ತಂದವರು ಡಾ.ಚಂದ್ರಶೇಖರ ಕಂಬಾರರು.

ಮಾರಿಕೊಂಡವರ ಕಾಡು

ಮಾರಿಕೊಂಡವರ ಕಾಡು

ಮಾರೀಕಾಡು. ಇದು ಮಾರಿಕೊಂಡವರ ಕಾಡು. ಮಾರುವ ಕಾಡು. ಮನುಷ್ಯನನ್ನು, ಮನುಷ್ಯತ್ವವನ್ನು ಶತ-ಶತಮಾನಗಳಿಂದಲೂ ಅಧಿಕಾರದ ಮದವೆಂಬ ಮಾರಿ ಆಪೋಷನ ತೆಗೆದುಕೊಂಡು ಎಷ್ಟೆಲ್ಲ ಕದನಗಳಿಗೆ ದಾರಿ ಮಾಡಿಕೊಟ್ಟಿತು. ಇದರಿಂದ ಹರಿದ ನೆತ್ತರ ಕೋಡಿ, ಉರುಳಿದ ತಲೆಗಳೆಷ್ಟೋ... ಇಷ್ಟಾದರೂ ನಾವಿನ್ನು ಯುದ್ದದೆಡೆಗೆ ಮತ್ತೆ ಮತ್ತೆ ಆಕರ್ಷಿತರಾಗುತ್ತಲೇ ಇದ್ದೇವೆ. ಪ್ರಸ್ತುತ ಹಿಂಸೆ, ಕ್ರೌರ್ಯ ರಾರಾಜಿಸುತ್ತಿರುವ ಸಂದರ್ಭದಲ್ಲಿ ಈ ನಾಟಕ ನಮ್ಮನ್ನು ಎಚ್ಚರಿಸುವ ಕರೆಗಂಟೆಯಾಗಲಿ.

English summary
Rangavalli a team which is always busy in organising different cultural has now organised a 3 days Drama programme from Oct 6th to 8th in Kalamandir, Mysuru. Interested are requested to come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X