Mysore yuva dasara 2023: ಶಿವಣ್ಣ, ಶರಣ್ ಹಾಡುಗಳಿಗೆ ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ ಯುವ ಸಮೂಹ
ಮೈಸೂರು, ಅಕ್ಟೋಬರ್, 19: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಬುಧುವಾರ ವಿಧ್ತುಕ್ತ ಚಾಲನೆ ದೊರೆಕಿತು. ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಅಕ್ಟೋಬರ್ 18) ಆರಂಭವಾದ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ನವರಾತ್ರಿ ಶುರುವಾಗಿದೆ. ಎಲ್ಲರೂ ಖುಷಿಪಡಿ. ಘೋಸ್ಟ್ ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಓದುವಾಗ ಓದಿ, ಜಾಲಿ ಆಗಿರುವಾಗ ಜಾಲಿ ಆಗಿರಿ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಬಳಿಕ ಶಿವರಾಜ್ ಕುಮಾರ್ ಅವರು " ಕಾಲ್‌ಮಿ ಓಜಿ ಒರಿಜಿನಲ್ ಗ್ಯಾಂಗ್ ಸ್ಟಾರ್" ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿದರು. "ಆಕಾಶವೇ ಬೀಳಲಿ ಎಂದು ನಾನೆಂದು ನಿನ್ನವನು" ಗೀತೆ ಹಾಡಿ ರಂಜಿಸಿದರು. ನಂತರ ಆನಂದ ಸಿನಿಮಾದ "ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ" ಎಂಬ ಗೀತೆ ಹಾಡಿದರು.
ಇದಕ್ಕೂ ಮುನ್ನ ನಟ ಶರಣ್ ಗೀತಾ ಸಿನಿಮಾದ ಜೊತೆಯಲಿ ಜೊತೆಜೊತೆಯಲಿ ಹಾಗೂ ಅಧ್ಯಕ್ಷ ಸಿನಿಮಾ ಟೈಟಲ್ ಸಾಂಗ್ ಮತ್ತು ರ‍್ಯಾಂಬೋ ಸಿನಿಮಾದ ಚುಟು ಚುಟು ಗೀತೆ ಹಾಡಿದರು. ಈ ವೇಳೆ ನಟರಾದ ಅಜಯ್ ರಾವ್, ರಿಷಿ ಭಾಗವಹಸಿದ್ದರು.

ಗಾಯಕಿ ಐಶ್ವರ್ಯ ರಂಗರಾಜನ್ ಅವರು ಏಕ್ ಲವ್ ಏ ಸಿನಿಮಾದಿಂದ "ಡೇಟ್ ಮಾಡೋಣ ಮೀಟ್ ಮಾಡೋಣ" ಹಾಡು ಆಡಿ ಸಭಿಕರನ್ನು ರಂಜಿಸಿದರು. ದಿವ್ಯ ರಾಮಚಂದ್ರನ್ ಅವರು 'ಜೋಕೆ ನಾನು ಬಳ್ಳಿಯ ಮಿಂಚು' ಗೀತೆ ಹಾಡಿದರು. ಗಾಯಕ ವ್ಯಾಸರಾಜ್ ಸೋಸಲೆ ಬಂದ ಚಕ್ರವರ್ತಿ' ಗೀತೆಗೆ ಯುವಸಮೂಹ ಹುಚ್ಚೆದ್ದು ಕುಣಿದರು. ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಸಾಧುಕೋಕಿಲ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ನಗೆಯ ಕಚಕುಳಿ ಇಟ್ಟರು.
ರಾಧಿಕಾ ನಾರಾಯಣ್ ತಂಡದಿಂದ ಪುಷ್ಪಕ ವಿಮಾನ ಸಿನಿಮಾದ "ಜಿಲ್ಕ ಜಿಲ್ಕ" ಗೀತೆಗೆ ನೃತ್ಯ ಪ್ರದರ್ಶನ ನೀಡಿ ಧೂಳೆಬ್ಬಿಸಿತು. ನಾನು ವಿದ್ಯಾವಿಕಾಸ ಕಾಲೇಜಿನಲ್ಲಿ ಓದಿರುವ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಕಾಂತಾರ, ಜೇಮ್ಸ್, ಯುವರತ್ನ ಸಿನಿಮಾಗಳ ವಿವಿಧ ಗೀತೆಗಳಿಗೆ ನೃತ್ಯ ನೀಡಿ ಸಭಿಕರನ್ನು ಕುಣಿಯುವಂತೆ ಮಾಡಿದರು. ಬಳಿಕ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಪ್ರದರ್ಶಿಸಿ ಗೊಂಬೆ ಹೇಳುತ್ತೈತೆ ಗೀತೆಗೆ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.
ತೆರೆದ ಆಸನ ವ್ಯವಸ್ಥೆ
ಬರ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ ಬಿಟ್ಟರೆ ಸಾರ್ವಜನಿಕರು ಕೂರಲು ತೆರೆದ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. 6 ಗಂಟೆಯಿಂದ ಉದ್ಘಾಟನೆ ಕಾರ್ಯಕ್ರಮದವರೆಗೂ ಶೇಕಡಾ ಅರ್ಧದಷ್ಟು ಆಸನಗಳು ಭರ್ತಿಯಾಗಿರಲಿಲ್ಲ. ಆದರೆ, ಸಾಧುಕೋಕಿಲ ತಂಡದ ಕಾರ್ಯಕ್ರಮ ಆರಂಭಗೊಂಡಾಗ ಆಸನಗಳು ಸಂಪೂರ್ಣ ಭರ್ತಿಯಾಗಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಯುವಶಕ್ತಿ ದೇಶದ ದೊಡ್ಡ ಶಕ್ತಿ. ಯುವಸಮೂಹದ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ. ಅದನ್ನು ಅರಿತುಕೊಳ್ಳಬೇಕು. ಸೌಹಾರ್ದತೆ ಹಾಗೂ ಬಹುತ್ವ ಉಳಿವಿಗೆ ಯುವಜನತೆ ಶ್ರಮಿಬೇಕು ಎಂದರು. ಈ ವೇಳೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್, ಮೇಯರ್ ಶಿವಕುಮಾರ್, ಡಿಸಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಇತರರು ಇದ್ದರು.












Click it and Unblock the Notifications