ಮೈಸೂರು ಪಾಲಿಕೆ ಚುನಾವಣೆ: ಮತದಾರರಿಂದ ನೀರಸ ಪ್ರತಿಕ್ರಿಯೆ
ಮೈಸೂರು, ಆಗಸ್ಟ್ 31 : ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಇಂದು ಬೆಳಗ್ಗಿನಿಂದಲೇ ಶಾಂತಿಯುತವಾಗಿ ನಡೆಯಿತು. ಬೆಳಗ್ಗಿನಿಂದಲೇ ಮತದಾನ ಕೇಂದ್ರದ ಕಡೆ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಈ ಬಾರಿ ನೀರಸವಾಗಿತ್ತು.
ಇನ್ನು ಎಲ್ಲಿಯೂ ಕೂಡ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟು ವರದಿ ಆಗಿಲ್ಲ. ಅತ್ಯಂತ ಯಶಸ್ವಿಯಾಗಿ ಇವಿಎಂ ಯಂತ್ರಗಳು ಕೆಲಸ ಮಾಡಿದೆ. ನಗರದ ಎಲ್ಲಾ ಮತಗಟ್ಟೆಗಳಲ್ಲಿಯೂ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂದು ಆಯುಕ್ತ ಜಗದೀಶ್ ಮಾಹಿತಿ ನೀಡಿದ್ದಾರೆ.
ಇತ್ತ ಮತದಾನಕ್ಕೆ ಸುತ್ತೂರು ಶ್ರೀಗಳು ಹಾಗೂ ಸಾಹಿತಿ ಎಸ್ ಎಲ್ ಭೈರಪ್ಪ ಗೈರಾಗಿದ್ದರು. ಸುತ್ತೂರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರು ಅಮೆರಿಕ ಪ್ರವಾಸದಲ್ಲಿದ್ದರೇ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಇಂಗ್ಲೆಂಡ್ ನಲ್ಲಿದ್ದಾರೆ ಹಾಗಾಗಿ ಇವರಿಬ್ಬರೂ ಮತ ಚಲಾಯಿಸಿಲ್ಲ.

ಇನ್ನು ಕೆ.ಆರ್ ಕ್ಷೇತ್ರದಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಕೂಡ ಚಾಮರಾಜ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಸಚಿವ ತನ್ವೀರ್ ಸೇಠ್ ಕೂಡ ತಮ್ಮ ಕುಟುಂಬಿಕರೊಂದಿಗೆ ತಮ್ಮ ಹಕ್ಕು ಚಲಾಯಿಸಿದರು.

ರಾಜಮಾತೆ ಪ್ರಮೋದಾದೇವಿ ಅವರು ವಾರ್ಡ್ ನಂಬರ್ 51 ರ ಮತಗಟ್ಟೆ ಸಂಖ್ಯೆ 546ರಲ್ಲಿ ಮತದಾನ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ಗೆದ್ದರು ತಮ್ಮ ವಾರ್ಡ್ಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.












Click it and Unblock the Notifications