• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಜಾಗೃತಿಗೆ ಮೈಸೂರಿನಲ್ಲಿ ಕಲಾವಿದನ "ಕೊರೊನಾ" ವೇಷ

By ಮೈಸೂರು ಸುದ್ದಿ
|

ಮೈಸೂರು, ಮಾರ್ಚ್ 22: ಜಗತ್ತನ್ನೇ ನಡುಗಿಸಿರುವ ಕೊರೊನಾ ವೈರಸ್ ಅನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಮೈಸೂರಿನಲ್ಲಿ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಮೈಸೂರಿನ ಜನರಲ್ಲೂ ಆತಂಕ ಉಂಟಾಗಿದೆ. ಆದರೆ ಈ ಸಮಯದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವುದೂ ಅಷ್ಟೇ ಪ್ರಮುಖ ಕೆಲಸವಾಗಿದೆ. ಹೀಗಾಗಿ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಕಲಾವಿದರೊಬ್ಬರು ಭಿನ್ನ ಪ್ರಯತ್ನವನ್ನು ಮಾಡಿದ್ದಾರೆ.

ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?

ಕೊರೊನಾ ವೈರಸ್ ರೀತಿ ವೇಷ ತೊಟ್ಟು ಜನಜಾಗೃತಿಗೆ ಮುಂದಾಗಿದ್ದಾರೆ. ಚಿತ್ರಕಲಾವಿದ ಯೋಗಾನಂದ್ ಈ ರೀತಿ ವೇಷ ತೊಟ್ಟವರು. ಮುಖಕ್ಕೆ ಮಾಸ್ಕ್ ತೊಟ್ಟು ತಲೆ ಸುತ್ತ ಕೊರೊನಾ ಚಿತ್ರ ಬರೆದುಕೊಂಡು ನಗರದಲ್ಲಿ ಓಡಾಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಮೈಸೂರಿನ ಜನ ನಿಬಿಡ ರಸ್ತೆಗಳು, ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ಮಾಡಿದ್ದಾರೆ. ಸ್ವಚ್ಛತೆ ಕಾಪಾಡಿ, ವ್ಯಕ್ತಿಗಳಿಂದ ವ್ಯಕ್ತಿಗಳ ನಡುವೆ ಅಂತರ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಕೈಯಲ್ಲಿ ಫಲಕ ಹಿಡಿದುಕೊಂಡು ಕೊರೊನಾ ತಡೆಗಟ್ಟುವ ಸಂದೇಶ ಸಾರುತ್ತಿದ್ದಾರೆ.

English summary
An artist in mysuru tries to create awareness among people by wearing coronavirus disguise
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X