ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಾಚ್ಯ ಶಬ್ದ ಬಳಕೆ: ಹುಣಸೂರು ಶಾಸಕ ಮಂಜುನಾಥ್ ರಿಂದ ಸ್ಪಷ್ಟನೆ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 1: ಸಾರ್ವಜನಿಕ ಭಾಷಣದ ವೇಳೆ ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ವೇದಿಕೆಯಲ್ಲಿ ಬಯಲಾಯ್ತು ಹುಣಸೂರು ಶಾಸಕನ ದರ್ಪ!ವೇದಿಕೆಯಲ್ಲಿ ಬಯಲಾಯ್ತು ಹುಣಸೂರು ಶಾಸಕನ ದರ್ಪ!

ಭಾಷಣದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯೆಗೆ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಶಾಸಕ ಮುಂಜುನಾಥ್, ಸಾಮಾಜಿಕ ಜಾಲತಾಣಗಳಿಂದ ನಾನು ಬಲಿಪಶುವಾಗಿದ್ದೇನೆ. ಸಾರ್ವಜನಿಕ ಜೀವನಲ್ಲಿ ಇನ್ಮುಂದೆ ಎಚ್ಚರಿಕೆಯಿಂದ ಇರುತ್ತೇನೆ. ಸಮಾರಂಭದಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿ ಹರಿಬಿಡುವ ಮೂಲಕ ನನ್ನ ಮೇಲೆ ತೇಜೋವಧೆ ನಡೆಸಿ ರಾಜಕೀಯ ಜೀವನ ಮುಗಿಸುವ ಹುನ್ನಾರ ಅಡಗಿದ್ದು ನಾನು ಯಾವುದೇ ರೀತಿಯಾ ಅವಾಚ್ಯ ಪದ ಬಳಸಿಲ್ಲವೆಂದು ಸ್ಪಷ್ಟೀಕರಣ ನೀಡಿದರು.

My speech is completely altered by some one: Hunsar MLA Manjunath

ತಾಲೂಕಿನ ಜನರ ಒಡನಾಟ ಹೋಗು ಬಾ ಎಂಬಂತಿದೆ. ಹೀಗಾಗಿ ನಾನು ಅವರ ಜೊತೆ ಏಕ ವಚನದಲ್ಲಿಯೇ ಮಾತನಾಡಿದ್ದೇನೆ. ಆದರೆ ದೃಶ್ಯಮಾದ್ಯಮದವರು ನನ್ನ ಮಾತುಗಳನ್ನು ತಿರುಚಿ ಪ್ರಸಾರ ಮಾಡಿದ್ದಾರೆ. 'ವಿಷಲ್' ಅನ್ನೊ ಪದವನ್ನು ಬೇರೆ ಪದವಾಗಿ ತಿರುಚಿದ್ದು, ನಾನು ಯಾವುದೇ ಅವಾಚ್ಯಶಬ್ದಗಳನ್ನು ಬಳಸಿಲ್ಲ. ನನ್ನ ಭಾಷಣವನ್ನ ತಿರುಚಿ 46 ನಿಮಿಷದ ಕಾರ್ಯಕ್ರಮವನ್ನ ಕೇವಲ 29 ಸೆಕೆಂಡ್ ಗೆ ಇಳಿಸಲಾಗಿದೆ. ವಿಕೃತ ಮನಸ್ಸಿದ್ದವ್ರಿಗೆ ಮಾತ್ರ ಕೆಟ್ಟ ಪದ ಕೇಳಿಸುತ್ತೆ. ಒಳ್ಳೆಯ ಮನಸ್ಸಿದ್ದವ್ರಿಗೆ ಒಳ್ಳೆ ಪದ ಕೇಳಿಸುತ್ತದೆ. ನಾನು ಎಲ್ಲಿಯೂ ಅವಹೇಳನಕಾರಿಯಾಗಿ ಮಾತಾಡಿಲ್ಲ. ಗ್ರಾಮ ಪಂಚಾಯ್ತಿ ಸದಸ್ಯೆ ಅಗೌರವ ತೋರಿದ್ರು. ನಾನು ಹಾಗೇ ಮಾತಾಡಿಲ್ಲ ಎಂದು ಹೇಳಿದರು.

ರಾಜ್ಯವ್ಯಾಪಿ ನನ್ನ ಮಾನ ಹೋಗಿದೆ. ಸಾಮಾಜಿಕ ಜಾಲತಾಣಗಳಿಗೆ ನಾನು ಬಲಿಯಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿ ಮಂಜುನಾಥ್, ಮಾಧ್ಯಮಗಳ ಮುಂದೆ ನನ್ನದು ತಪ್ಪಿಲ್ಲ ಅಂತಾ ಹೇಳಲು ಬಂದಿದ್ದೇನೆ.ಕಾರ್ಯಕ್ರಮದ ವೇದಿಕೆಯಲ್ಲಿ ನಿಮ್ಮ ಸ್ವಾಭಿಮಾನವನ್ನ ಎಚ್ಚರಿಸಲು ವಿಷುವಲ್ಸ್ ಹೋಡಿಬೇಕಾಯ್ತಾ ಅಂದೆ ಅಷ್ಟೇ. ಆದ್ರೆ ವಿಡಿಯೋ ತಿರುಚಿ ವಿಷುವಲ್ಸ್ ಬದಲಿಗೆ ಮಿಷನ್ ಎಂದು ತಿರುಚಲಾಗಿದೆ. ವಿಡಿಯೋ ತಿರುಚಿರೋ ಬಗ್ಗೆ ಕ್ರಮ ಆಗ್ಬೇಕು ಎಂದು ಆಗ್ರಹಿಸಿದರು.

ಕಳೆದ ಆ.26ರಂದು ಹುಣಸೂರು ತಾಲ್ಲೂಕಿನ ಮಂಚಬಾಯನ ಹಳ್ಳಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆಯನ್ನು ಉದ್ದೇಶ ಪೂರ್ವಕವಾಗಿಯೇ ಬಳಸಲಾಗಿದ್ದು ನನ್ನನು ಬಲಿಪಶು ಮಾಡುವ ಹುನ್ನಾರವಾಗಿದೆ, ಅಲ್ಲದೇ ಗ್ರಾಪಂ ಅಧ್ಯಕ್ಷೆ ಕವಿತಾಕುಮಾರ್ ಅವರನ್ನು ಯಾವುದೇ ಅಶ್ಲೀಲ ಪದಗಳಿಂದ ನಿಂದಿಸಿಲ್ಲವೆಂದು ಸ್ಪಷ್ಟಪಡಿಸಿದರು.

English summary
My speech is completely altered by some one, Hunsur MLA Manjunath told to media on Sep 1 in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X