• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking; ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹೆಸರು ಬದಲಿಸಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 02; ನಾಗರಹೊಳೆಯ 'ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ' ಎಂಬ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

'ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ' ಎಂಬ ಹೆಸರು ಬದಲಾವಣೆ ಮಾಡಿ 'ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನ & ಹುಲಿ ಸಂರಕ್ಷಿತ ಪ್ರದೇಶ' ಎಂದು ನಾಮಕರಣ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ಕೊರೊನಾ ಸೋಂಕಿನಿಂದ ನಿಧನ ರಾಜೀವ್ ಗಾಂಧಿ ಹತ್ಯೆ ಪ್ರಕರಣ ತನಿಖೆ ನಡೆಸಿದ್ದ ಮಾಜಿ ಸಿಬಿಐ ಅಧಿಕಾರಿ ಕೊರೊನಾ ಸೋಂಕಿನಿಂದ ನಿಧನ

30/8/2021ರಂದು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಶುಕ್ರವಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಪತ್ರವನ್ನು ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.

ಸುಳ್ಳು ಹೇಳಬಾರದು ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು! ಸುಳ್ಳು ಹೇಳಬಾರದು ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು!

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿರುವ ರಾಷ್ಟ್ರೀಯ ಉದ್ಯಾನ ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1955ರಲ್ಲಿ ಉದ್ಯಾನ ನಿರ್ಮಾಣ ಮಾಡಿದಾಗ 258 ಚದರ ಕಿ. ಮೀ. ಇತ್ತು. ನಂತರ ಮೈಸೂರು ಜಿಲ್ಲೆಯ ವಿವಿಧ ಪ್ರದೇಶಗಳನ್ನು ಸೇರಿಸಿಕೊಂಡಿದೆ. ಪ್ರಸ್ತುತ ಉದ್ಯಾನ 643.39 ಚದರ ಕಿ. ಮೀ. ಇದ್ದು 1983ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಘೋಷಣೆ ಮಾಡಲಾಯಿತು.

ಸುಳ್ಳು ಹೇಳಬಾರದು ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು! ಸುಳ್ಳು ಹೇಳಬಾರದು ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು!

'ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ' ಎಂಬ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಆನ್‌ಲೈನ್ ಸಂಗ್ರಹ ಅಭಿಯಾನವೂ ಆರಂಭವಾಗಿದೆ. ಕೊಡಗಿನ ನವೀನ್ ಮಾದಪ್ಪ ಮತ್ತು ವಿನಯ್ ಕಾಯಪಂಡ ಎಂಬುವವರು ಸಹ ಅಭಿಯಾನ ಬೆಂಬಲಿಸಿದ್ದಾರೆ. ಭಾನುವಾರ ರಾತ್ರಿಯ ತನಕ 6,400 ಜನರು ಸಹಿ ಮಾಡಿದ್ದಾರೆ.

'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಯನ್ನು ಹೆಸರನ್ನು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಬದಲಾಯಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ನ ಹೆಸರು ಬದಲಿಸುವ ಚರ್ಚೆಗಳು ನಡೆಯುತ್ತಿವೆ.

English summary
Mysuru MP Prathap Simha Writes letter to CM Basavaraj Bommai to rename Rajiv Gandhi Nagarahole National Park and Tiger Reserve as KM Cariappa Nagarahole National Park and Tiger Reserve. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X