ಹೆದ್ದಾರಿ ಶ್ರೇಯಸ್ಸು ಸಿಂಹಕ್ಕೆ ಸಲ್ಲಬೇಕು ನರಿಗಳಿಗಲ್ಲ: ಪ್ರತಾಪ್ ಸಿಂಹ ಟ್ವೀಟ್ ವೈರಲ್
ಮೈಸೂರು, ಮಾರ್ಚ್ 10: ಮೈಸೂರು-ಬೆಂಗಳೂರು ದಶಪಥ ಕಾಮಗಾರಿ ಕ್ರೆಡಿಟ್ ವಾರ್ ಜೋರಾಗಿದ್ದು, ಇದೀಗ ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬರೇ ಒಬ್ಬರಿಗೆ ಇದರ ಶ್ರೇಯಸ್ಸು ಸಲ್ಲಬೇಕು, ಅದು ಮೋದೀಜಿಗೆ @narendramodi ji. ಅವರಿಲ್ಲದಿದ್ದರೆ ನಾನು ಎಂಪಿನೂ ಆಗ್ತಿರಲಿಲ್ಲ, ಗಡ್ಕರಿ ಸರ್ ಮಂತ್ರಿನೂ ಆಗ್ತಿರಲಿಲ್ಲ. ಎಂಡ್! pic.twitter.com/veNE9nbVBU
— Pratap Simha (@mepratap) March 9, 2023
ಇತ್ತೀಚಿಗೆ ಮಾಜಿ ಸಿಎಂ ಸಿದ್ದರಾಮಯ್ಯ ದಶಪಥ ಕಾಮಗಾರಿ ಶ್ರೇಯಸ್ಸು ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಇದರಲ್ಲಿ ಸಂಸದ ಪ್ರತಾಪ್ ಸಿಂಹನದ್ದಾಗಲಿ, ಬಿಜೆಪಿ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ ಎಂದು ಹೇಳಿದ್ದರು. ಪ್ರತಾಪ್ ಸಿಂಹನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೆಲವೇ ಕಿಲೋ ಮೀಟರ್ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಇದರಲ್ಲಿ ಪ್ರತಾಪ್ ಸಿಂಹನ ಪಾತ್ರ ಏನು ಇಲ್ಲ ಎಂದಿದ್ದರು.

ಅಲ್ಲದೇ ಮಹದೇವಪ್ಪನಿಗೆ ಈ ರಸ್ತೆಯ ಎಲ್ಲಾ ಮಾಹಿತಿಯೂ ಗೊತ್ತಿದೆ. ಮಹದೇವಪ್ಪನೇ ಮುಂದೆ ನಿಂತು ಈ ರಸ್ತೆ ಮಾಡಿಸಿದ್ದರು. ಆಗ ನಾನೂ ಇದ್ದೆ, ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದರು. ಅವರ ಕಾಲದಲ್ಲೇ ಅಪ್ರೂವಲ್ ಆಗಿತ್ತು. ಈಗ ಆಸ್ಕರ್ ಫರ್ನಾಂಡಿಸ್ ಬದುಕಿಲ್ಲ, ಎಲ್ಲವೂ ಮಹದೇವಪ್ಪನ ಕಾಲದಲ್ಲಿ ಆಗಿದೆ. ದಶಪಥ ರಸ್ತೆ ನಮ್ಮ ಸರ್ಕಾರದ ಕೊಡುಗೆ ಎಂದು ಹೇಳಿದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ 'ದಶಪಥದ ಹೆದ್ದಾರಿಯ ಶ್ರೇಯಸ್ಸು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಅವರಿಲ್ಲದಿದ್ದರೆ ನಾನು ಎಂಪಿಯೂ ಆಗುತ್ತಿರಲಿಲ್ಲ. ಗಡ್ಕರಿಯವರು ಹೆದ್ದಾರಿ ಸಚಿವರೂ ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ. ಅಲ್ಲದೇ, ಜನರ ಅಭಿಪ್ರಾಯ ಪಡೆದ ಗ್ರಾಫಿಕ್ಸ್ ಕಾರ್ಡ್‌ವೊಂದನ್ನು ಹಾಕಿದ್ದಾರೆ.
'ಎಪ್ಪತ್ತು ವರ್ಷದ ಹಿಂದೆ ಕಲ್ಲಿ ನೆಟ್ಟ ಯಾವುದೇ ಯೋಜನೆಗಳು ನೆಟ್ಟ ಕಲ್ಲಿನ ಜೊತೆಯೇ ಮಲಗಿತ್ತು. ಮುಕ್ತಿಯನ್ನು ಕಾಣಿಸಿದ ವ್ಯಕ್ತಿಗೆ ಸರ್ಕಾರಕ್ಕೆ ಕ್ರೆಡಿಟ್ ಸಲ್ಲಬೇಕು. ಹಾಗಾಗಿ ಹೆದ್ದಾರಿ ಕ್ರೆಡಿಟ್ ಮೋದಿಜೀ, ಗಡ್ಕರಿ ಹಾಗೂ ಪ್ರತಾಪ್ ಸಿಂಹಗೆ ಸಲ್ಲಬೇಕು. ಸಿಂಹಕ್ಕೆ ಸಲ್ಲಬೇಕೇ ಹೊರತು ನರಿಗಲ್ಲ,'' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅಲ್ಲದೇ, ಜನರೇ ಕೊಟ್ಟ ಉತ್ತರವನ್ನು ನೀವೂ ಒಪ್ಪುವುದಾದರೆ ನೀವೂ ಈ ಪೋಸ್ಟ್ ಶೇರ್ ಮಾಡಿ ಎಂದು ಮನವಿ ಮಾಡಿದ್ದಾರೆ.

ಹೆದ್ದಾರಿ ಕ್ರೆಡಿಟ್ ವಾರ್‌ನಲ್ಲಿ ಜೆಡಿಎಸ್ ಶಾಸಕ ಪುಟ್ಟಸ್ವಾಮಿ ಕೂಡ ಮಾತನಾಡಿದ್ದರು. ಈ ಯೋಜನೆಯ ಶ್ರೇಯಸ್ಸು ಜೆಡಿಎಸ್‌ಗೆ ಸಲ್ಲಬೇಕು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.












Click it and Unblock the Notifications