'ದಿ ಕಾಶ್ಮೀರ್ ಫೈಲ್ಸ್‌‌' ಚಿತ್ರ ನೋಡಲು ಎದೆಗಾರಿಕೆ ಬೇಕು: ಸಂಸದ ಪ್ರತಾಪ ಸಿಂಹ ಟಾಂಗ್

ಮೈಸೂರು, ಮಾರ್ಚ್ 20: 'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾದ ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಇದು ಕಾಂಗ್ರೆಸ್‌ನವರೇ ಮಾಡಿದ ಅಪರಾಧ, ಅದನ್ನು ಅವರೇ ನೋಡಲು ಹೇಗೆ ಸಾಧ್ಯ?," ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರು ಚಿತ್ರವನ್ನು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. ದಿ ಕಾಶ್ಮೀರ್ ಫೈಲ್ಸ್‌ನಲ್ಲಿರುವ ಒಂದೊಂದು ದೃಶ್ಯವೂ ಸತ್ಯ. ಆದರೆ, ಕಾಂಗ್ರೆಸ್‌ನವರಿಗೆ ಈ ಚಿತ್ರವನ್ನು ನೋಡಲು ಆಗುವುದಿಲ್ಲ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯ? ಈ ಸಿನಿಮಾವನ್ನು ಕಾಂಗ್ರೆಸ್‌ನವರು ನೋಡೋದಕ್ಕೆ ಎದೆಗಾರಿಕೆ ಬೇಕು ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

Recommended Video

      ಭಗವದ್ಗೀತೆಯನ್ನು ಖುರಾನ್ ಮತ್ತು ಬೈಬಲ್ ಗೆ ಕಂಪೇರ್ ಮಾಡೋಕೆ ಆಗಲ್ಲ | Oneindia Kannada

      ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಿದರೆ ಬೆಂಬಲಿಸುತ್ತೇನೆ. ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಲ್ಲ. ಅದರಲ್ಲಿ ಜೀವನದ ನೀತಿ ಪಾಠವಿದೆ. ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ ಅದು. ಒಂದೇ ದೇವರನ್ನು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ. "ಧರ್ಮ ಅಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತ ಅಲ್ಲ. ಹಿಂದೂ ಧರ್ಮವೇ ಜೀವನ ಶೈಲಿ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯ," ಎಂದರು.

      MP Pratap Simha Slams congress over The Kashmir Files Movie Critic

      ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವುದಕ್ಕೆ ಅಭ್ಯಂತರವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, "ಅಂತಃಕರಣದಿಂದ ನೈಜವಾಗಿ ಹೇಳಿದ್ದರೆ ಸ್ವಾಗತಿಸುತ್ತೇನೆ. ಜತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನೂ ಪಠ್ಯಕ್ರಮಕ್ಕೆ ಸೇರಿಸುವಂತೆ ಒತ್ತಾಯಿಸಲಿ," ಎಂದರು.

      "ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆಯನ್ನಲ್ಲ, ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ," ಎಂದು ಟಾಂಗ್ ನೀಡಿದರು. (ಒನ್‌ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+