ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇದಿಕೆಯಲ್ಲಿ ಬಯಲಾಯ್ತು ಹುಣಸೂರು ಶಾಸಕನ ದರ್ಪ!

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 30 : ಚುನಾವಣೆಯಲ್ಲಿ ಗೆಲ್ಲುವವರೆಗೂ ಅಷ್ಟೇ ಮತದಾರ ನಮ್ಮ ರಾಜಕಾರಣಿಗೆ ದೈವ. ಅದಾದ ಬಳಿಕ ದೈವ ಪ್ರಶ್ನೆ ಮಾಡುವಂತಿಲ್ಲ. ಅಕಸ್ಮಾತ್ ಪ್ರಶ್ನೆ ಮಾಡಿದರು, ಮನಸೋಇಚ್ಛೆ ಜನಸಂದಣಿಯ ಸಭೆಯಲ್ಲಿ ಮನಬಂದಂತೆ ಹೇಳಿಕೆ ಕೊಡುತ್ತಾರೆ ಜನಪ್ರತಿನಿಧಿಗಳು. ಅಂತಹ ವೇದಿಕೆಗೆ ಸಾಕ್ಷಿಯಾಗಿದ್ದು, ಮೈಸೂರಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಸಂಭ್ರಮ ಕಾರ್ಯಕ್ರಮದಲ್ಲಿ.

ಹೌದು, ಜನನಾಯಕ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್, ಶಾಸಕರು ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ ಹಿನ್ನೆಲೆ ಶಾಸಕರು ಆತನಿಗೆ ನೀಡಿದ್ದಲ್ಲದೇ ಏಕವಚನದಲ್ಲಿ ಬೈದಿದ್ದಾರೆ.

MLA of Hunsur constituency in Mysuru H P Manjunath

ಕೇವಲ ಪ್ರಶ್ನೆ ಮಾಡಿದ ಎಂಬ ಒಂದೇ ಕಾರಣಕ್ಕೆ, 'ಬಾರೋ ನೀನೇ ಮೈಕ್ ಮುಂದೆ ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ವಿಷಲ್ ಊದಬೇಕಿತ್ತೇನೋ? ನೀನು ದೊಡ್ಡ ಸ್ವಾಭಿಮಾನಿ, ಸುಮ್ನೆ ನಿಂತುಕೋ' ಎಂದು ದರ್ಪದಿಂದ ಮಾತಾಡಿದ್ದಾರೆ

ಹಾಗಾದರೆ ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ? ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕವಚನದಲ್ಲೆ ಗದರುವುದು ಶಾಸಕರ ಸುಸಂಸ್ಕೃತ ವರ್ತನೆಯಾ? ಜನಸೇವೆ ಮಾಡುವುದು ಬಿಟ್ಟು, ಇಂತಹ ಮನಬಂದಂತಹ ಹೇಳಿಕೆ ನೀಡುವುದು ನಿಮ್ಮ ವರ್ತನೆಯೇ..? ಇನ್ನಾದರೂ ಉತ್ತರಿಸಿ.

English summary
Hunsur Member of Legislative Assembly H P Manjunath blames a man who quetioned him in a public place. MLA uses slang language and scolded the man for questioning him. The incident took place in Biligere village in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X