Get Updates
Get notified of breaking news, exclusive insights, and must-see stories!

ಶಾಸಕ ತನ್ವೀರ್ ಸೇಠ್ ಗೆ ತಿರುಗೇಟು ನೀಡಿದ ಸಚಿವ ಸಾ.ರಾ.ಮಹೇಶ್

ಮೈಸೂರು, ಅಕ್ಟೋಬರ್. 22: ಕಾಂಗ್ರೆಸ್ 5 ವರ್ಷದ ಅಧಿಕಾರವಧಿಯಲ್ಲಿ ಯಾವ ರೀತಿ ದಸರಾ ಆಚರಿಸಿ, ಪಾಸ್ ಗಳನ್ನು ವಿತರಿಸಿದ್ದರೋ ಅದೇ ರೀತಿ ನಾವೂ ಮಾಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಶಾಸಕ ತನ್ವೀರ್ ಸೇಠ್ ಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರೆಲ್ಲಾ ಹೇಗೆ ದಸರಾ ಮಾಡಿದ್ದರು? ಈಗ ಹೇಗೆ ಆಗಿದೆ? ಎಂಬುದು ಎಲ್ಲರಿಗೂ ಗೊತ್ತಿದೆ. ಈ ವರ್ಷ ಜನರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದು ದಸರಾ ಯಶಸ್ಸನ್ನು ತೋರಿಸುತ್ತದೆ ಎಂದರು.

ದಸರಾ ಪಾಸ್ ಕಡಿಮೆ ಆಗಿದೆ ಎಂಬುದು ತನ್ವೀರ್ ಸೇಠ್ ಅವರ ಆರೋಪ. ಅವರು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಶಾಸಕರುಗಳಿಗೆ ಯಾವ ರೀತಿ ಪಾಸ್ ಕಳುಹಿಸುತ್ತಿದ್ದರೋ ಅದೇ ರೀತಿ ಅಧಿಕಾರಿಗಳು ಕಳುಹಿಸಿದ್ದಾರೆ. ಅವರ ಸಂಪ್ರದಾಯವನ್ನೇ ನಾವು ಮುಂದುವರಿಸಿದ್ದೇವೆ.

Minister SA RA Mahesh Reacted to the MLA Tanveer Sait statement

ಅವರಿಗೆ ಕಳುಹಿಸಿದ್ದ ಪಾಸ್ ಗಳನ್ನು ಸ್ವೀಕರಿಸಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಪಕ್ಷದ ವಿಷಯ ಬಂದಾಗ ನಮ್ಮ ವರಿಷ್ಠರು, ಅವರ ಪಕ್ಷದ ವರಿಷ್ಠರು ಕುಳಿತು ಮಾತನಾಡುತ್ತಾರೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ದಸರಾ ಆಚರಿಸಿದ್ದಾರೆ. ಕಳೆದ 5 ವರ್ಷವೂ ಅವರೇ ದಸರಾ ಆಚರಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರು ಯಾವ ರೀತಿ ಶ್ವೇತಪತ್ರ ಹೊರಡಿಸಿದ್ದರೋ ಅದೇ ರೀತಿ ನಾವೂ ಶ್ವೇತಪತ್ರ ಹೊರಡಿಸಿದ್ದೇವೆ ಎಂದು ತನ್ವೀರ್ ಸೇಠ್ ಅವರಿಗೆ ಟಾಂಗ್ ನೀಡಿದರು.

ದಸರಾ ಗಜಪಡೆ ಬಂದಾಗ ಅವರೂ ಬಂದಿದ್ದರು. ಕೆಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಸಹಕಾರ ನೀಡಿದ್ದಾರೆ. ಪಾಸ್ ವಿಷಯದಲ್ಲಿ ಅಸಮಾಧಾನ ಆಗಿರಬಹುದು ಎಂದು ಸಾ.ರಾ.ಮಹೇಶ್ ತಿಳಿಸಿದರು.

ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಜನರು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮಾಧ್ಯಮದವರ ಸಹಕಾರ ಕಾರಣ. ದಸರಾ, ಪ್ರವಾಸೋದ್ಯಮದ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲರಿಗೂ ಕ್ರತಜ್ಞತೆ ಸಲ್ಲಿಸುತ್ತೇನೆ ಎಂದರು.

ಜಂಬೂಸವಾರಿ ಮೆರವಣಿಗೆಯಲ್ಲಿ ಸ್ವಲ್ಪ ವ್ಯತ್ಯಾಸ ಆಯಿತು. ಅದು ಬಿಟ್ಟರೆ ಉಳಿದಂತೆ ಯಾವುದೇ ಲೋಪವಾಗಿಲ್ಲ. ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ನಾಡಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ. ಜಿ ಶಂಕರ್, ಜಂಬೂಸವಾರಿಯ ಎಲ್ಲ ಕಾರ್ಯವೂ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಯಾವುದೇ ಗೊಂದಲ ಆಗಿಲ್ಲ. ಜಂಬೂ ಸವಾರಿ ಮೆರವಣಿಗೆಯಲ್ಲಿ ಶುಭ ಮುಹೂರ್ತದಲ್ಲೇ ಪುಷ್ಪಾರ್ಚನೆ ಆಗಬೇಕೆಂಬ ಕಾರಣದಿಂದ ಮಧ್ಯದಲ್ಲಿ ಪುಷ್ಪಾರ್ಚನೆ ಮಾಡಲಾಯಿತು.

ಮೆರವಣಿಗೆ ಉದ್ಘಾಟನೆ ಹಾಗೂ ಪುಷ್ಪಾರ್ಚನೆ ನಡುವೆ 1 ಗಂಟೆ ಅವಧಿ ಮಾತ್ರ ಇದ್ದ ಹಿನ್ನೆಲೆಯಲ್ಲಿ ಹೀಗೆ ಮಾಡಬೇಕಾಯಿತು. ನಂತರ ಆನೆ ಅಂಬಾರಿ ಹೊತ್ತು ಹೆಚ್ಚು ಹೊತ್ತು ನಿಂತರೆ ಅದಕ್ಕೆ ಆಯಾಸ ಆಗುತ್ತದೆ ಎಂದು ಮಧ್ಯದಲ್ಲೇ ಹೊರಡಿಸಲಾಯಿತು. ಅಂಬಾರಿ ತೆರಳಿದಾಗ ಜನರು ನುಗ್ಗಿದ್ದರಿಂದ ಸ್ವಲ್ಪ ಗೊಂದಲವಾಯಿತು ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+