ದಸರಾ ಹಿನ್ನೆಲೆಯಲ್ಲಿ ರೋಡಿಗಿಳಿದ ಮೊರಿಸ್, ಫಿಯಟ್, ಜಾವಾ...
ಮೈಸೂರು, ಅಕ್ಟೋಬರ್.01: ನಾಡಹಬ್ಬದ ಹಿನ್ನೆಲೆಯಲ್ಲಿ ನಡೆದ ವಿಂಟೇಜ್ ಕಾರು ರಾಲಿಯಲ್ಲಿ ಭಾರೀ ಆಕರ್ಷಣೆ ಮತ್ತು ಬೇಡಿಕೆಯಲ್ಲಿದ್ದ, ಆಧುನಿಕ ತಂತ್ರಜ್ಞಾನದ ಫಲವಾಗಿ ನೇಪಥ್ಯದಲ್ಲಿ ಉಳಿದುಕೊಂಡಿದ್ದ ಹಳೆ ಕಾರು, ಜೀಪು, ಮೋಟಾರ್ ಬೈಕ್ ಗಳು ಜನಾಕರ್ಷಣೆ ಕೇಂದ್ರ ಬಿಂದುವಾದವು.
ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ವಿಂಟೆಜ್ ಕಾರು ರಾಲಿಯನ್ನು ಉದ್ಘಾಟಿಸಿದರು. ಅದರಂತೆ ನಗರದ ಲಲಿತ್ ಮಹಲ್ ಹೋಟೆಲ್ ಬಳಿ ವಿಂಟೇಜ್ ಕಾರ್ ಫೆಸ್ಟಿವಲ್ ಅನ್ನು ಸಚಿವ ಜಿಟಿ ದೇವೇಗೌಡ ಭಾನುವಾರ (ಸೆಪ್ಟೆಂಬರ್ 31) ಉದ್ಘಾಟಿಸಿದರು.

ವಿವಿಧ ಕಂಪೆನಿಗಳ ಹಳೆಯ ಕಾರುಗಳು, ಜೀಪುಗಳು ಸಹಿತ ಸುಮಾರು 50ಕ್ಕೂ ಅಧಿಕ ಹಳೆಯ ವಾಹನಗಳು ರಾಲಿಯಲ್ಲಿ ಭಾಗವಹಿಸಿದ್ದವು. ವಿಲ್ಲಿಸ್ ಜೀಪುಗಳು, ಮೊರಿಸ್, ಫಿಯಟ್, ಯಜ್ಡಿ , ಜಾವಾ ಮುಂತಾದ ವಾಹನಗಳು ಇದರಲ್ಲಿ ಭಾಗವಹಿಸಿದ್ದವು.

ಫ್ರಾನ್ಸ್, ಶ್ರೀಲಂಕಾ, ಇಂಗ್ಲೆಂಡ್ ಸೇರಿದಂತೆ ದೇಶವಿದೇಶಗಳಿಂದ ಬಂದಿರುವ ನೂರಾರು ವರ್ಷಗಳ ಇತಿಹಾಸವುಳ್ಳ ಕಾರುಗಳ ಪ್ರದರ್ಶನಗೊಂಡಿದ್ದು ವಿಶೇಷ.

ವಾಹನ ಜಾಥಾದಲ್ಲಿ ಭಾಗವಹಿಸಿದ ಹತ್ತಾರು ಕಾರುಗಳಲ್ಲಿ ಸ್ವಾತಂತ್ರ್ಯಪೂರ್ವದ ಕಾರು ನೋಡುಗರನ್ನು ಸೆಳೆಯುತ್ತಿತ್ತು. ವರ್ಷ 90 ಆದರೂ ಅದೇ ಹಳೆಯ ಕಾಲದ ಶಬ್ದ ಹೊಂದಿದ್ದ ಕಾರಿನ ಎದುರು ಅನೇಕರು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.












Click it and Unblock the Notifications