• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನ್ಮದಿನವೆಂದು ಚಾಮುಂಡಿ ಬೆಟ್ಟ ಹತ್ತುವಾಗಲೇ ಸಾವಿಗೀಡಾದ ವ್ಯಕ್ತಿ

|

ಮೈಸೂರು, ಆಗಸ್ಟ್ 1: ತನ್ನ ಜನ್ಮದಿನದಂದು ದೇವರ ದರ್ಶನ ಪಡೆಯಲು ಚಾಮುಂಡಿ ಬೆಟ್ಟ ಹತ್ತುತ್ತಿದ್ದ ಸಂದರ್ಭವೇ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

 ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ ಪ್ರವೇಶ ಶುಲ್ಕದಿಂದ ಬಂತು 1.50 ಕೋಟಿ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ ಪ್ರವೇಶ ಶುಲ್ಕದಿಂದ ಬಂತು 1.50 ಕೋಟಿ

ಜೆ.ಪಿ.ನಗರ ನಿವಾಸಿ ಸಜಿತ್ (40) ಮೃತ ದುರ್ದೈವಿ. ಚಾಮುಂಡಿ ಬೆಟ್ಟದ 1,060ನೇ ಮೆಟ್ಟಿಲಿನ ಬಳಿ ಕುಸಿದು ಸಜಿತ್ ಮೃತಪಟ್ಟಿದ್ದಾರೆ. ಬೆಟ್ಟದ ಮೇಲೆ ತಲುಪಲು ಇನ್ನು 40 ಮೆಟ್ಟಿಲುಗಳು ಮಾತ್ರ ಬಾಕಿ ಇದ್ದವು. ಆಗಲೇ ಅವರು ಕುಸಿದುಬಿದ್ದಿದ್ದಾರೆ. ಅವರು ಅಧಿಕ ತೂಕ ಹೊಂದಿದ್ದರಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸಜಿತ್ ಜೇಬಿನಲ್ಲಿ ದೊರೆತ ಕೀಯನ್ನು ಕೆ.ಆರ್.ಠಾಣೆಯ ಪೊಲೀಸರು ಬೆಟ್ಟದ ಕೆಳಗೆ ನಿಲ್ಲಿಸಿದ್ದ ಸ್ಕೂಟರ್ ‌ಗಳಿಗೆ ಹಾಕಿ ನೋಡಿ, ಆ ಸ್ಕೂಟರ್ ನಂಬರಿನ ಆಧಾರದ ಮೇಲೆ ಇವರ ಗುರುತು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

English summary
A 40 years old JP Nagar resident sajith died when he was climbing chamundi hill to seek the darshan of god on his birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X