ಮೈಸೂರು ಜನತೆಗೆ ಸಿಹಿಸುದ್ದಿ: ದೂರು ಸ್ವೀಕರಿಸಲು 'ಮೇಯರ್ ಆನ್‌ಲೈನ್ ಅದಾಲತ್' ಆರಂಭಿಸಿದ ಪಾಲಿಕೆ
ಕೆಲಸದೊತ್ತಡ ಸೇರಿದಂತೆ ನಾನಾ ಕಾರಣಗಳಿಂದ ಪಾಲಿಕೆ ಕಚೇರಿಗೆ ಬಾರಲು ಸಾಧ್ಯವಾಗದೇ ಇರುವ ಸಾರ್ವಜನಿಕರನ್ನು ದೃಷ್ಟಿಯಲ್ಲಿರಿಸಿಕೊಂಡು ಮೈಸೂರು ನಗರಪಾಲಿಕೆ 'ಮೇಯರ್ ಆನ್‌ಲೈನ್ ಅದಾಲತ್' ಆರಂಭಿಸಿದೆ.
ಮೈಸೂರು, ಫೆಬ್ರವರಿ 8: ತಂತ್ರಜ್ಞಾನ ನಮ್ಮ ಬದುಕನ್ನು ಬದಲಾಯಿಸಿದೆ. ಅಂಗೈ ಅಗಲದ ಮೊಬೈಲ್ ಇದ್ದರೆ ಸಾಕು ಜಗತ್ತಿನ ದರ್ಶನ ಆಗುತ್ತದೆ. ಮೈಸೂರು ನಗರ ಪಾಲಿಕೆ ಇದೀಗ ಸಾರ್ವಜನಿಕರ ದೂರುಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸುವ ವಿನೂತನ ಕಾರ್ಯಕ್ಕೆ ಮುಂದಾಗಿದೆ.
ಸಾಮಾನ್ಯವಾಗಿ ಕ್ಯೂ ಆರ್ ಕೋಡ್ ಇದ್ದರೆ ಸಾಕು ಎಲ್ಲಿ ಬೇಕಾದರೂ ಹಣ ಸಂದಾಯ ಮಾಡಬಹುದು. ಡಿಜಿಟಲೀಕರಣ ಆದ ಮೇಲೆ ಜನ ಇ ಪೇಟೆಂಟ್ ಹೆಚ್ಚು ಮಾಡುತ್ತಿದ್ದಾರೆ. ಇದನ್ನು ಮನಗಂಡ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಸಾರ್ವಜನಿಕರಿಂದ ವಿನೂತನ ರೀತಿಯ ದೂರು ಸ್ವೀಕರಿಸಲು ಮುಂದಾಗಿದ್ದಾರೆ. ಜನರು ಇನ್ನುಮುಂದೆ ದೂರುಗಳನ್ನು ನೀಡಲಿ ಸರ್ಕಾರಿ ಕಚೇರಿಗಳಿಗೆಅಲೆಯಬೇಕಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು.
ಸಾರ್ವಜನಿಕರ ಕಷ್ಟ ಸುಖ ವಿಚಾರಿಸಲು ಮೈಸೂರು ನಗರಪಾಲಿಕೆ ಅದಾಲತ್ ನಡೆಸುತ್ತಿತ್ತು. ಜನರು ತಮ್ಮ ಕುಂದುಕೊರತೆಗಳನ್ನು ಅಧಿಕಾರಿಗಳ ಮುಂದೆ ಹರವಿಕೊಳ್ಳುತ್ತಿದ್ದರು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿ ಪರಿಹಾರವಾಗದೇ ಇರುವ ಸಮಸ್ಯೆಗಳಿಗೆ ಪಾಲಿಕೆ ಅದಾಲತ್‌ನಲ್ಲಿ ಪರಿಹಾರ ಸಿಗುತ್ತಿತ್ತು. ಆದರೆ, ಸಾರ್ವಜನಿಕರಿಗೊಂದು ಸಿಹಿ ಸುದ್ದಿ ಸಿಕ್ಕಿದೆ. ಮೈಸೂರು ನಗರಪಾಲಿಕೆಯ ಕಚೇರಿಗೆ ಬಾರದೆ ಆನ್‌ಲೈನ್ ಮೂಲಕವೂ ಸಹ ದೂರು ನೀಡಲು ನಗರಪಾಲಿಕೆ ಅವಕಾಶ ಮಾಡಿಕೊಟ್ಟಿದೆ.

ಕೆಲಸದೊತ್ತಡ ಸೇರಿದಂತೆ ನಾನಾ ಕಾರಣಗಳಿಂದ ಪಾಲಿಕೆ ಕಚೇರಿಗೆ ಬಾರಲು ಸಾಧ್ಯವಾಗದೇ ಇರುವ ಸಾರ್ವಜನಿಕರನ್ನು ದೃಷ್ಟಿಯಲ್ಲಿರಿಸಿಕೊಂಡು ಪಾಲಿಕೆಯ ಮೇಯರ್ ಶಿವಕುಮಾರ್ ಅವರು ಆನ್‌ಲೈನ್ ಮೂಲಕವೂ ಸಹ ದೂರು ನೀಡುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಇಂದಿನಿಂದ ''ಮೇಯರ್ ಆನ್‌ಲೈನ್ ಅದಾಲತ್'' ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಆನ್‌ಲೈನ್ ತಮ್ಮ ಬಗಹರಿಯದ ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಪ್ರತ್ಯೇಕವಾಗಿ ವೆಬ್‌ಸೈಟ್ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications