ಮೈಸೂರಿನಲ್ಲಿ ಮಾವಿನ ಹಣ್ಣಿನ ಮೇಳ; ಯಾವ ಮಾವು ಸಿಗಲಿವೆ?
ಮೈಸೂರು, ಏಪ್ರಲ್ 25: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂದಿನ ತಿಂಗಳು ಮೇನಲ್ಲಿ ವಿಷೇಶವಾಗಿ ಮಾವಿನ ಹಣ್ಣಿನ ಮೇಳ ನಡೆಯಲಿದೆ ಎಂದು ಮೈಸೂರಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು ಶೀಘ್ರದಲ್ಲೇ ಮೈಸೂರು ಮಾವು ಮೇಳದ ದಿನಾಂಕವನ್ನು ಘೋಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷವಾಗಿ ಮಾವು ಮೇಳ ಪ್ರದರ್ಶನದಲ್ಲಿ ಬರುವ ಮಾವಿನ ಹಣ್ಣಿನ ತಳಿಯು ಯಾವುದು ಎಂಬುವುದು ಪ್ರದರ್ಶನವಾಗಲಿದೆ ಬೇಸಿಗೆಯ ಸೀಜನನಲ್ಲಿ ಸಿಗುವ ಎಲ್ಲ ತರಹದ ಮಾವಿನ ಹಣ್ಣುಗಳು ಈ ವರ್ಷದ ಆಯೋಜಿಸಲಾಗುವ ಮೇಳದಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳು ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಬಹುದು.
ಜನಪ್ರೀಯ ಮಾವು, ಮಾವಿನ ಹಣ್ಣು, ಹುಳಿ ಮಾವು, ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಮಾವುಗಳು ಮೇಳದಲ್ಲಿ ಲಭ್ಯವಿರಲಿವೆ. ಮಾವು ಮೇಳಕ್ಕೆ ಭೇಟಿ ನೀಡುವ ಗ್ರಾಹಕರು ಖರೀದಿ ಮಾಡಬಹುದು. ವ್ಯಾಪಾರಸ್ಥರಿಗೂ ಮಾವಿನ ವ್ಯವಹಾರ ಮಾಡಲು ನೇರವಾಗಿ ಮಾವು ಬೆಳೆಗಾರರಾದ ರೈತರನ್ನು ನೇರವಾಗಿ ಸಂಪರ್ಕಿಸಿ ಹೆಚ್ಚಿನ ವ್ಯವಹಾರ ಮಾಡಿಕೊಳ್ಳಬಹುದು ಹೀಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಈ ವರ್ಷದ ಮೈಸೂರಿನ ಮ್ಯಾಂಗೋ ಮೇಳ ಸಾಕ್ಷಿಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷದಿಂದ ಮ್ಯಾಂಗೋ ಮೇಳ ನಡೆಯದ ಮೈಸೂರು ಜಿಲ್ಲೆಯಲ್ಲಿ ಜನರು ಗ್ರಾಹಕರು ನಿರಾಶೆ ಪಟ್ಟಿದ್ದರು. ಆದರೆ ಆ ನಿರಾಶೆಯನ್ನು ಹೋಗಲಾಡಿಸಲು ಈ ವರ್ಷವು ಮೈಸೂರಿನಲ್ಲಿ ಮ್ಯಾಂಗೋ ಮೇಳವು 2 ವರ್ಷದ ನಂತರ ನಡೆಯುತ್ತಿರುವುದು ಮೈಸೂರಿನ ಜನತೆಗೆ ಸಂತಸ ತಂದಿದೆ.

ಮೇಳದಲ್ಲಿ ಯಾವ-ಯಾವ ಮಾವು ಸಿಗಲಿವೆ?
ಮಾವು ಮೇಳದಲ್ಲಿ ಹೆಚ್ಚಾಗಿ ಬೇನಿಶಾ, ತೋತಾಪುರಿ, ರಸಪೂರಿ, ಕೇಸರ್, ಮಲ್ಲಿಕಾ, ಮಲ್ಗೋವಾ, ಆಪೂಸು, ಖಾದರ, ಪುನಾಸ್, ಆಮ್ಲೆಟ್, ಸುವರ್ಣರೇಖಾ, ಚಿನ್ನರಸ, ಪೆದ್ದರಸ, ಲಡ್ಡು ಮುಂತಾದ ತಳಿಯ ಹಣ್ಣುಗಳು ಲಭ್ಯವಾಗಲಿವೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳು ಖರೀದಿ ಮಾಡಬಹುದು.. ದೇಶದ ಬೇರೆ-ಬೇರೆ ರಾಜ್ಯದ ಮಾವುಗಳು ಮೇಳದಲ್ಲಿ ಸಿಗಲಿದ್ದು ವೆರೈಟಿ-ವೆರೈಟಿ ಮಾವಿನ ಹಣ್ಣಗಳನ್ನುಗ್ರಾಹಕರು ಮಾವು ಬೆಳೆದ ರೈತರಿಂದ ನೇರವಾಗಿ ಖರೀದಿ ಮಾಡಬಹುದು.
Recommended Video
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications