ಮೈಸೂರು: ನಟನ ತಾಯಿಗೆ ಹಣ ವಂಚನೆ, ದೂರು ದಾಖಲು
ಮೈಸೂರು, ಆಗಸ್ಟ್ 07 : ಕನ್ನಡದ 'ಮಂಡ್ಯ ಟು ಮುಂಬೈ' ಎಂಬ ಚಿತ್ರದಲ್ಲಿ ನಟಿಸಿದ್ದ ನಟ ಶೇಖರ್ ಅವರ ತಾಯಿಗೆ ದಿನೇಶ್ ಎಂಬುವವರು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಟ ಶೇಖರ್ ಅವರ ತಾಯಿ ಮಂಜುಳ ಮಗನ 'ಮಂಡ್ಯ ಟು ಮುಂಬೈ' ಚಿತ್ರಕ್ಕಾಗಿ ಸಾಲ ಮಾಡಿದ್ದರು. ಆ ಚಿತ್ರ ಸೋತ ಮೇಲೆ ಸಾಲ ತೀರಿಸಲು ತಮ್ಮ ಮನೆ ಮಾರಾಟ ಮಾಡಿದ್ದರು. ಬಂದ 13 ಲಕ್ಷ ಹಣವನ್ನು ಸಂಬಂಧಿ ದಿನೇಶ್ ಎಂಬಾತನ ಮೂಲಕ ಸಾಲಗಾರರಿಗೆ ಹಿಂದಿರುಗಿಸಲು ಮುಂದಾಗಿದ್ದರು. ಆದರೆ ಈಗ ದಿನೇಶ್ 13 ಲಕ್ಷ ಹಣವನ್ನು ವಂಚಿಸಿದ್ದಾರೆ ಎಂದು ಮಂಜುಳ ಆರೋಪ ಮಾಡಿದ್ದಾರೆ.

ಸದ್ಯಕ್ಕೆ ನಟ ಶೇಖರ್ ತಾಯಿ ಮಂಜುಳ ಪ್ರಕರಣದ ಕುರಿತಂತೆ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದದ್ದು, ವಿಚಾರಣೆ ಬಳಿಕ ಸತ್ಯ ಏನೆಂಬುದು ತಿಳಿಯಲಿದೆ.












Click it and Unblock the Notifications