ಅಂಗಾಂಗ ದಾನ ಮಾಡಿ ಮಾದರಿಯಾದ ಮಂಡ್ಯದ ರೈತ
ಮೈಸೂರು, ಜೂನ್ 29; ರಸ್ತೆ ಅಪಘಾದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ರೈತನೊಬ್ಬನ ಅಂಗಾಂಗಳನ್ನು ದಾನ ಮಾಡಲಾಗಿದೆ. ಅಂಗಾಂಗ ದಾನ ಮಾಡುವ ಮೂಲಕ ರೈತ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಜ್ಜಹಳ್ಳಿ ನಿವಾಸಿ ರಾಮಕೃಷ್ಣ (50) ಎಂಬುವವರೇ ಅಂಗಾಂಗ ದಾನ ಮಾಡಿದ ರೈತ. ರಾಮಕೃಷ್ಣ ಶ್ರೀರಂಗಪಟ್ಟಣದ ಬಳಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯವಾದ ವಿಷಯವನ್ನ ವೈದ್ಯರು ಕುಟುಂಬದವರಿಗೆ ತಿಳಿಸಿದ್ದರು. ಈ ವೇಳೆ ರಾಮಕೃಷ್ಣರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಲಾಯಿತು.

ವಿಶೇಷ ಅಂಬ್ಯುಲೆನ್ಸ್ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಕಳುಹಿಸಲಾಯಿತು. ಬಿಜಿಎಸ್ ಆಸ್ಪತ್ರೆ ವೈದ್ಯರು ಮೈಸೂರಿಗೆ ಆಗಮಿಸಿ, ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಿದರು.
ಮೈಸೂರಿನಿಂದ ಬೆಂಗಳೂರಿನವರಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಅಂಬ್ಯುಲೆನ್ಸ್ ಅನ್ನು ದರ್ಶನ್ ಓಡಿಸಿದರು. ಹಲವಾರು ವರ್ಷಗಳಿಂದ ಅಂಬ್ಯಲೆನ್ಸ್ ಚಾಲನೆ ಮಾಡುತ್ತಿರುವ ದರ್ಶನ್ ಎರಡನೇ ಬಾರಿಗೆ ಮೈಸೂರಿನಿಂದ ಬೆಂಗಳೂರಿಗೆ ಅಂಗಾಂಗ ದಾನಕ್ಕಾಗಿ ಅಂಬ್ಯುಲೆನ್ಸ್ ಓಡಿಸಿದರು.












Click it and Unblock the Notifications