ಇದೇ ಲಾಡ್ಜ್‌ಗೆ ಹೋಗಿ ಇಲ್ಲಂದ್ರೆ ಸಾವಿರ ಕೊಡಿ- ಮೈಸೂರಿನಲ್ಲಿ ಲಾಡ್ಜ್ ಸ್ಕ್ಯಾಮ್ ವಿಡಿಯೋ ವೈರಲ್
ಮೈಸೂರು ಆಗಸ್ಟ್ 20: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಕ್ಕೆ ಹೋದಾಗ ಪ್ರವಾಸಿಗರಿಗೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೈಸೂರಿನಲ್ಲಿ ಪ್ರವಾಸಿಗರಿಗೆ ಲಾಡ್ಜ್ ಕೊಡಿಸುವುದಾಗಿ ಹೇಳಿ ರೋಪ್ ಹಾಕುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ದೃಶ್ಯದಲ್ಲಿ ಕಂಡು ಬಂದ ಆಟೋ ಚಾಲಕ ರೂಂ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಪ್ರವಾಸಿಗರಿಗೆ ಬಲವಂತ ಮಾಡಿದ್ದಾನೆ. ರೂಮ್ ತೆಗೆದುಕೊಳ್ಳಿ, ಇಲ್ಲಾ ನನಗೆ ದುಡ್ಡು ಕೊಡಿ ಎಂದು ಬೆದರಿಕೆ ಹಾಕಿದ್ದು ದೃಶ್ಯದಲ್ಲಿ ಸೆರೆಯಾಗಿದೆ.

ದೃಶ್ಯದಲ್ಲಿ ಗಾರ್ಡನ್ ಸಿಟಿ ಟೂರಿಸ್ಟ್ ಹೋಮ್ ಎಂಬ ಹೆಸರಿನ ಲಾಡ್ಜ್‌ವೊಂದನ್ನು ನೋಡಬಹುದು. ಅದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ರೂಂ ತೆಗೆದುಕೊಳ್ಳಲು ಬಲವಂತ ಮಾಡುತ್ತಿದ್ದಾನೆ. ಪ್ರವಾಸಿಗರು ಇಷ್ಟ ಇಲ್ಲ, ನಮಗೆ ರೂಮ್ ಬೇಡ ಅಂದರೂ ವ್ಯಕ್ತಿ ಕೇಳುತ್ತಿಲ್ಲ.
'ಇಲ್ಲಿವರೆಗೂ ಬಂದಿದ್ದೀರಾ. ಇಷ್ಟ ಇಲ್ಲ ಅಂತ ಹೇಗೆ ಹೇಳ್ತೀರಾ. ನೀವು ರೂಂ ತೆಗೆದುಕೊಳ್ಳಬೇಕು' ಎಂದು ಬಲವಂತ ಮಾಡಿದ್ದಾನೆ. 'ರೂಂ ಬೇಡ ಅಂತಾದರೆ ಒಂದು ಸಾವಿರ ರೂಪಾಯಿ ಕೊಡಿ. ಇಲ್ಲದಿದ್ದರೆ ನಾನು ನಿಮ್ಮನ್ನ ಬಿಡುವುದಿಲ್ಲ' ಅಂತ ಕಾರಿಗೆ ಆಟೋ ಅಡ್ಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 'ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರಲ್ಲಿ ಇದೆಂಥ ಗುಂಡಾಗಿರಿ, ಕರ್ನಾಟಕದ ಪ್ರವಾಸಿಗರಿಗೆ ಈ ತರಹ ಆದರೆ ಬೇರೆ ರಾಜ್ಯದ ಪ್ರವಾಸಿಗರ ಗತಿ ಏನು, ಇಂತಹ ರೌಡಿಗಳನ್ನ ಯಾಕೆ ಬೆಳೆಸುತ್ತಿದ್ದೀರಾ' ಎಂದು ಪ್ರಶ್ನೆ ಮಾಡುವ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ದಸರಾಗೂ ಮುನ್ನ ಮೈಸೂರಿನಲ್ಲಿ ಲಾಡ್ಜ್ ದಂಧೆ
ಮೈಸೂರಿನಲ್ಲಿ ಲಾಡ್ಜ್ ದಂಧೆ ನಡೆಯುತ್ತಿದೆ ಎಂದು ಈ ವಿಡಿಯೋ ಮೂಲಕ ಆರೋಪಿಸಲಾಗಿದೆ. ಈ ಕೂಡಲೇ ಇಂಥಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇಲ್ಲದಿದ್ದರೆ ನಮ್ಮ ರಾಜ್ಯದಲ್ಲಿ ನಮಗೇ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.
ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರಲ್ಲಿ ಇದೆಂಥ ಗುಂಡಾಗಿರಿ, ಕರ್ನಾಟಕದ ಪ್ರವಾಸಿಗರಿಗೆ ಈ ತರಹ ಆದರೆ ಬೇರೆ ರಾಜ್ಯದ ಪ್ರವಾಸಿಗರ ಗತಿ ಏನು, ಇಂತಹ ರೌಡಿಗಳನ್ನ ಯಾಕೆ ಬೆಳೆಸುತ್ತಿದ್ದೀರಾ @SPmysuru @CPMysuru.. @mepratap pic.twitter.com/JS14g3TsRa
— Accidental Bhakth (@accidental_cmo) August 20, 2024
ವಿಡಿಯೋ ವೈರಲ್ ಆದಾಗಿನಿಂದಲೂ ಸಾಕಷ್ಟು ಜನ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇಂಥಹ ಜನರೊಂದಿಗೆ ಎಚ್ಚರಿಕೆಯಿಂದ ವರ್ತಿಸಬೇಕು. ನಮ್ಮಲ್ಲೇ ನಮಗೆ ರಕ್ಷಣೆ ಇಲ್ಲ. ಇವರು ಹೀಗೆ ಬೆದರಿಕೆ ಹಾಕುವುದು ಗೂಂಡಾ ವರ್ತನೆಯನ್ನು ಪ್ರತಿಬಿಂಬಿಸುತ್ತದೆ. ಇಂಥಹವರ ವಿರುದ್ಧ ಪೊಲೀಸ್ ದೂರು ನೀಡಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಇನ್ನೇನು ಮೈಸೂರು ದಸರಾ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಮೈಸೂರಿನಲ್ಲಿ ರೂಮ್‌ಗಳು ಬುಕ್ಕಿಂಗ್ ಜೋರಾಗಿದೆ. ಆದರೆ ಕೆಲ ಜನ ಇಲ್ಲಿ ಲಾಡ್ಜ್ ದಂಧೆಗೆ ಇಳಿದಿದ್ದಾರೆ. ಬಸ್ ನಿಲ್ದಾಣ, ರೈಲು ನಿಲ್ದಾಣದಿಂದ ಬರುವ ಪ್ರವಾಸಿಗರನ್ನು ರೂಮ್ ಕೊಡಿಸುವುದಾಗಿ ಕರೆತಂದು, ತಾವು ತೋರಿಸಿದ ರೂಮ್ ನಲ್ಲೇ ಇರುವಂತೆ ಬಲವಂತ ಮಾಡುತ್ತಿದ್ದಾರೆ.
ಹೀಗೆ ಬಲವಂತ ಮಾಡುತ್ತಿರುವ ಆ ರೂಮ್‌ಗಳು ಹೇಗಿದೆ. ಸಭ್ಯರು ಇರುವ ಸ್ಥಳಗಳೇ ಎನ್ನುವ ಪ್ರಶ್ನೆಗಳು ಮೂಡಿವೆ. ಇಂತಹ ರೂಮ್‌ಗಳ ಬಗ್ಗೆ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ನಿಗಾ ವಹಿಸಬೇಕು ಎಂದು ಜನ ಮನವಿ ಮಾಡುತ್ತಿದ್ದಾರೆ.
ಮೈಸೂರು ದಸರಾವನ್ನು ಈ ಬಾರಿ ಅಕ್ಟೋಬರ್ 3ರಿಂದ 12ರವರೆಗೆ ನಡೆಸಲು ದಿನಾಂಕ ನಿಗಧಿಪಡಿಸಲಾಗಿದೆ. ಇದಕ್ಕಾಗಿ ವಿಶ್ವದೆಲ್ಲೆಡೆಯಿಂದ ಜನ ಮೈಸೂರಿಗೆ ಆಗಮಿಸುತ್ತಾರೆ. ಈಗಾಗಲೇ ಮೈಸೂರಿನಲ್ಲಿ ರೂಮ್‌ಗಳ ಬುಕ್ಕಿಂಗ್ ಶುರುವಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಸ್ಥಳೀಯರು ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲು ಸಂಚು ರೂಪಿಸುತ್ತಿದ್ದಾರೆ.
ಹೌದು... ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ವಿಶ್ವದೆಲ್ಲೆಡೆಯಿಂದ ಜನ ಮೈಸೂರಿಗೆ ಆಗಮಿಸುತ್ತಾರೆ. ಒಂಬತ್ತು ದಿನಗಳವರೆಗೆ ನಡೆಯುವ ಮೈಸೂರು ದಸರಾವನ್ನು ನೋಡಲು ಹೊರ ರಾಜ್ಯಗಳಿಂದ ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರನ್ನು ಆಟೋದಲ್ಲಿ ಹತ್ತಿಸಿಕೊಂಡು ಸುತ್ತಾಡುವ ಕೆಲ ಚಾಲಕರು ಇಂಥದ್ದೇ ಲಾಡ್ಜ್‌ನಲ್ಲಿ ವಾಸ್ತವ್ಯವಿರಲು ಒತ್ತಾಯಿಸುತ್ತಾರೆ. ಆ ಮೂಲಕ ತಾವೂ ಕೂಡ ಕಮೀಷನ್ ರೂಪದಲ್ಲಿ ಸಾವಿರಾರು ರೂಪಾಯಿ ಹಣವನ್ನು ಪ್ರವಾಸಿಗರಿಂದ ಪಡೆಯುತ್ತಾರೆ. ಇಂಥಹ ಘಟನೆಗಳನ್ನು ತಪ್ಪಿಸಲು ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪ್ರವಾಸಿಗರು ಮನವಿ ಮಾಡುತ್ತಿದ್ದಾರೆ.












Click it and Unblock the Notifications