ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ
Recommended Video

ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ | Oneindia Kannada
ಮೈಸೂರು, ಜುಲೈ 07: ಮೈಸೂರಿನ ಅಪೋಲೊ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬೆಂಗಳೂರಿನ ಆಸ್ಪತ್ರೆಗೆ ಇಂದು ರವಾನಿಸಲಾಯಿತು. ಹೃದಯ ರವಾನೆಗೆ ಸಂಚಾರಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.
ಚಾಮುಂಡಿ ಬೆಟ್ಟದಲ್ಲಿ ಮೊನ್ನೆ ನಡೆದಿದ್ದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಸವಾರ ಸ್ಥಳದಲ್ಲೆ ಸಾವನಪ್ಪಿದ್ದರು. ಹಿಂದೆ ಇದ್ದ ಯುವತಿಗೆ ತೀವ್ರಗಾಯಗಳಾಗಿದ್ದವು ಆಕೆ ಬದುಕುವುದು ಕಷ್ಟವೆಂದು ವೈದ್ಯರು ಕೈಚೆಲ್ಲಿದ್ದರು ಆದ್ದರಿಂದ ಆಕೆಯ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿದ್ದರು.
ಯುವತಿಯ ಹೃದಯವನ್ನು ಬೆಂಗಳೂರಿನ ಕಂಗೇರಿಯ ಬಿಜಿಎಸ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದ್ದು, ಇಲ್ಲಿ ಹೃದಯ ಅವಶ್ಯಕತೆ ಇರುವ ವ್ಯಕ್ತಿಗೆ ಜೋಡಣೆ ಮಾಡಲಾಗುತ್ತದೆ.

ಆಂಬುಲೆನ್ಸ್‌ನಲ್ಲಿ ಹೃದಯವನ್ನು ರವಾನೆ ಮಾಡಲಾಗುತ್ತಿದ್ದು, ವೇಗವಾಗಿ ಸಾಗಲೆಂದು ಆಂಬುಲೆನ್ಸ್ ಹೋಗುವ ದಾರಿಯಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.












Click it and Unblock the Notifications