ಎಕ್ಸ್ ಚೇಂಜ್ ಆಫರ್ ನಲ್ಲಿ ಮೈಸೂರು ಮೃಗಾಲಯಕ್ಕೆ ಬಂತು ಸಿಂಹ

ಮೈಸೂರು, ಮಾರ್ಚ್, 07 : ಮೊನ್ನೆ ಅಷ್ಟೇ ಚೆನ್ನೈನ ಅರಿಗ್ನಾರ್ ಅಣ್ಣ ಮೃಗಾಲಯದಿಂದ 2 ಹೆಣ್ಣು ಕಡವೆ, 4 ರೀಸಸ್ ಕೋತಿ. 1 ರೇಟಿಕ್ಯೂಲೇಟೆಡ್ ಪೈತಾನ್ ಹಾವಿನ ಆಗಮನದ ಬೆನ್ನಲ್ಲಿಯೇ ಸೋಮವಾರ ರಾತ್ರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಮತ್ತೊಂದು ಅತಿಥಿಯ ಆಗಮನವಾಗಿದೆ.

ಪ್ರಾಣಿ ವಿನಿಮಯ ಯೋಜನೆಯಡಿ 'ಶೌರ್'ಎಂಬ ಹೆಸರಿನ ಮೂರು ವರ್ಷದ ಗಂಡು ಸಿಂಹ ಗುಜರಾತಿನ ಜುನಾಘಡ್ ದ ಸಕ್ಕರಬಾಗ್ ಮೃಗಾಲಯದಿಂದ ಆಗಮನವಾಗಿದ್ದು ಕ್ರೇನ್ ಮೂಲಕ ರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.[ಮೈಸೂರು ಮೃಗಾಲಯಕ್ಕೆ ಬಂದ ಹೊಸ ಅತಿಥಿಗಳು]

Lion Shourya arrived in Sri Chamarajendra Zoo Mysuru from Sakkarbaug zoo Gujarat

ಸಧ್ಯ ಆರೋಗ್ಯ ತಪಾಸಣೆ ಮಾಡುತ್ತಿರುವುದರಿಂದ ಈ ಶೌರ್ಯ ಸಿಂಹದ ಘರ್ಜನೆ ಕೇಳಲು ಪ್ರವಾಸಿಗರು ಇನ್ನೂ ಹತ್ತು ದಿನ ಕಾಯಬೇಕಾಗಿದೆ. ಕಳೆದ ವರ್ಷ ಶಂಕರ ಎಂಬ ಸಿಂಹ ವಯೋಸಹಜತೆಯಿಂದ ಮೃತಪಟ್ಟಿತ್ತು.

ಇದರಿಂದ ಮೃಗಾಲಯಕ್ಕೆ ಸಿಂಹಗಳ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲದೇ ಗುಜರಾತ್‌ನ ಜುನಾಘಡ್ ನಿಂದ 'ರೆನಿಕಾ' ಎಂದ ಸಿಂಹಿಣಿ ತರಲಾಗಿತ್ತು. ಸಿಂಹಗಳ ಸಂತತಿ ಅಭಿವೃದ್ಧಿಯಾಗಲೆಂದು ಅದೇ ಮೃಗಾಲಯದಿಂದ 'ಶೌರ್ಯ' ನನ್ನು ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+