• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಹೆರಿಗೆ ಆಸ್ಪತ್ರೆ ಎದುರು ಜನವೋ ಜನ?

|

ಮೈಸೂರು, ಮೇ 5: ಮೈಸೂರಿನ ಚೆಲುವಾಂಬ ಹೆರಿಗೆ ಆಸ್ಪತ್ರೆ ಎದುರು ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದು, ಕೊರೊನಾ ಆತಂಕದ ಈ ಸಂದರ್ಭದಲ್ಲಿ ಮತ್ತೆ ಯಾವ ಆತಂಕ ತಂದೊಡ್ಡುತ್ತೋ ಗೊತ್ತಿಲ್ಲದಂತಾಗಿದೆ.

   ಇಷ್ಟು ದಿನ ಮನೆಯಲ್ಲಿ ಸುಮ್ಮನಿದ್ದವರೆಲ್ಲ ಈಗ ಕುಡಿದು ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ | oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಮೈಸೂರಿನಲ್ಲಿ ಹೆರಿಗೆಗಾಗಿ ಮೀಸಲಿರುವ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಪ್ರಮಾನದ ಜನ ಬಿಡಾರ ಹೂಡಿದ್ದಾರೆ. ಹೆರಿಗೆ ಆಸ್ಪತ್ರೆ ಆರಂಭವಾಗುತ್ತಿದೆ ಎಂದು ಜಿಲ್ಲೆಯ ನಾನಾ ಭಾಗಗಳಿಂದ ಜನರು ಬಂದು ವಾಸ್ತವ್ಯ ಹೂಡಿದ್ದಾರೆ.

   ಜನರು ಗುಂಪು ಗುಂಪಾಗಿ ಕುಳಿತು ಮಾತುಕತೆಯಲ್ಲಿ ತೊಡಗಿದ್ದು, ಬಹುತೇಕರ ಮುಖದಲ್ಲಿ ಮಾಸ್ಕ್ ಇಲ್ಲದಂತಾಗಿದೆ. ಆಸ್ಪತ್ರೆಗೆ ಬಂದಿರುವ ಜನರು ಆವರಣದಲ್ಲಯೇ ಚಾಪರ ಹಾಕಿ ನಿದ್ರೆಗೆ ಜಾರುತ್ತಿದ್ದಾರೆ.

   ಜನರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಈ ಶೋಚನೀಯ ಪರಿಸ್ಥಿತಿ ಎದುರಾಗಿದೆ. ಕೊರೊನಾ ವೈರಸ್ ಆತಂಕದ ಪರಿಸ್ಥಿತಿ ವೇಳೆ ಜನರು ಮತ್ತು ಆಸ್ಪತ್ರೆ ಸಿಬ್ಬಂದಿ ಗಂಭೀರತೆಯನ್ನು ಅರಿಯುತ್ತಿಲ್ಲದಿರುವುದು ಆತಂಕದ ವಿಷಯವಾಗಿದೆ.

   ಸಾಮಾಜಿಕ ಅಂತರ, ರೋಗದ ಬಗೆಗಿನ ಜಾಗೃತಿ ಇಲ್ಲದೇ ಪುಟ್ಟ ಮಕ್ಕಳು, ವಯಸ್ಕರು, ವೃದ್ಧರಾದಿಯಾಗಿ ಗುಂಪಿನಲ್ಲಿ ಕುಳಿತು ಮಾತನಾಡುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲದಿರುವುದು ಆತಂಕಕ್ಕೆ ದೂಡಿದೆ.

   English summary
   A large number of people are in front of the Cheluwamba Maternity Hospital in Mysuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X