ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿರಿಯಾಪಟ್ಟಣ ಕ್ರೀಡಾಂಗಣವೀಗ ಕುರಿ, ದನಗಳಿಗೆ ಹುಲ್ಲುಗಾವಲು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 14: ಕಲ್ಲು ಮುಳ್ಳುಗಳಿಂದ, ಗಿಡಗಂಟಿಗಳಿಂದ ಕೂಡಿದ ಮೈದಾನ. ಮುರಿದ ಕಬ್ಬಿಣದ ಸರಳುಗಳು. ಅಪೂರ್ಣಗೊಂಡ ಸ್ಟೇಡಿಯಂ ಕಟ್ಟಡ. ಶೌಚಾಲಯವಿಲ್ಲದೆ ಬಯಲಿಗೆ ತೆರಳಬೇಕಾದ ಅನಿವಾರ್ಯತೆ. ಹೀಗೆ ಹಲವು ಮೂಲಭೂತ ಸೌಲಭ್ಯದ ಕೊರತೆಯಿಂದ ನಿರ್ವಹಣೆಯಿಲ್ಲದೆ ಕ್ರೀಡಾಪಟುಗಳ ಪಾಲಿಗೆ ಇದ್ದೂ ಇಲ್ಲವಾಗಿರುವ ಕ್ರೀಡಾಂಗಣ ಪಿರಿಯಾಪಟ್ಟಣದ ಹರವೆ-ಮಲ್ಲರಾಜಪಟ್ಟಣದಲ್ಲಿದೆ.

ಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳುಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳು

ಈ ಕ್ರೀಡಾಂಗಣವು ಯುವಜನ ಸೇವೆ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ಸೇರಿದ್ದು, ಒಂದು ಅತ್ಯುತ್ತಮ ಕ್ರೀಡಾಂಗಣವಾಗಬೇಕಾಗಿದ್ದ ಇದು ಇವತ್ತು ನಿರ್ಲಕ್ಷ್ಯಕ್ಕೊಳಗಾಗಿ, ಕುರಿ, ದನಗಳಿಗೆ ಹುಲ್ಲುಗಾವಲಾಗಿ ಪರಿಣಮಿಸಿದೆ.

Lack of maintenance, Piriyapattan ground damaged

ಪಿರಿಯಾಪಟ್ಟಣಕ್ಕೆ ಹೊಂದಿಕೊಂಡಿರುವ ಹರವೆ-ಮಲ್ಲರಾಜಪಟ್ಟಣದ ಈ ಕ್ರೀಡಾಂಗಣ ಕ್ರೀಡಾಪಟುಗಳಿಗೆ ಉಪಯುಕ್ತವಾಗಬೇಕಾಗಿತ್ತು. ಆದರೆ ಇದರ ನಿರ್ವಹಣೆ ಮಾಡಬೇಕಾದ ಇಲಾಖೆ ಕೈಕಟ್ಟಿ ಕುಳಿತಿರುವುದರಿಂದ ಅಭಿವೃದ್ಧಿ ಕಾಣದೆ ಪಾಳುಬೀಳುವಂತಾಗಿದೆ. ಆದರೂ ಬೇರೆ ದಾರಿಯಿಲ್ಲದೆ ಮೈದಾನದ ಒಂದು ಬದಿಯಲ್ಲಿ ಮಾತ್ರ ಶಿಕ್ಷಣ ಇಲಾಖೆ ಸೇರಿದಂತೆ ಸಂಘಸಂಸ್ಥೆಗಳು ಪದೇ ಪದೇ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುತ್ತವೆ.

Lack of maintenance, Piriyapattan ground damaged

ಕ್ರೀಡಾಂಗಣದ ಫೆವಿಲಿಯನ್ ನಲ್ಲಿ ಕಬ್ಬಿಣದ ಸಲಾಕೆಗಳು ಎಲ್ಲೆಂದರಲ್ಲಿ ಚಾಚಿಕೊಂಡಿವೆ. ಕೆಲವು ವಿದ್ಯಾರ್ಥಿಗಳು ಇದನ್ನು ಹಿಡಿದುಕೊಂಡು ಕಸರತ್ತು ಮಾಡುತ್ತಾರೆ. ಹೀಗೆ ಮಾಡುವಾಗ ಅಥವಾ ಇಲ್ಲಿ ನಡೆದಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಬ್ಬಿಣದ ಸರಳುಗಳು ಚುಚ್ಚುವ ಅಪಾಯವಿದೆ.
ಇನ್ನೊಂದು ಬೇಸರದ ಸಂಗತಿ ಎಂದರೆ ಈ ಕ್ರೀಡಾಂಗಣದಲ್ಲಿ ಶೌಚಾಲಯವೇ ಇಲ್ಲವಾಗಿದೆ. ಕ್ರೀಡಾಕೂಟಕ್ಕೆ ಬರುವ ವಿದ್ಯಾರ್ಥಿನಿಯರೂ ಶೌಚಕ್ಕೆ ಬಯಲಿಗೇ ಹೋಗಬೇಕಾದ ಹಿನಾಯ ಸ್ಥಿತಿ ಇಲ್ಲಿದೆ.

English summary
A ground in Piriyapattan in Mysuru district, which belongs to Karnataka state government's youth affairs and sports department is damaged because of less mentainence and lack of facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X