ಮೈಸೂರು : ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ವಿವರಗಳು

ಮೈಸೂರು, ಜುಲೈ 13 : ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ವಿಶೇಷ ಪ್ರವಾಸಿ ಪ್ಯಾಕೇಜ್ ಆರಂಭಿಸಲಾಗಿದೆ. 6 ಹವಾನಿಯಂತ್ರಿತ ಸುವಿಹಾರಿ ಬಸ್ಸುಗಳು ಈ ಪ್ಯಾಕೇಜ್‌ ಅಡಿ ಕಾರ್ಯ ನಿರ್ವಹಿಸಲಿವೆ.

ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನೂತನ ಸೇವೆಗೆ ಶನಿವಾರ ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕೆಎಸ್‌ಟಿಡಿಸಿ ಈ ಪ್ಯಾಕೇಜ್‌ ನಿರ್ವಹಣೆ ಮಾಡಲಿದ್ದು, 40 ಆಸನಗಳ 6 ಬಸ್ಸುಗಳು ಸಂಚಾರ ನಡೆಸಲಿವೆ. [kstdc ವೆಬ್ ಸೈಟ್]

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಅಕ್ಕ-ಪಕ್ಕದ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ನೋಡಲು ಅನುಕೂಲವಾಗುವಂತೆ ಈ ಪ್ಯಾಕೇಜ್ ಸಿದ್ಧಪಡಿಲಾಗಿದೆ. ಒಂದು, ಎರಡು, ಮೂರು ಮತ್ತು ಐದು ದಿನದ ಪ್ರವಾಸವನ್ನು ಈ ಪ್ಯಾಕೇಜ್ ಒಳಗೊಂಡಿದೆ. [ರೈಲ್ವೆ ಸ್ಪೆಷಲ್ : 12 ದಿನಗಳ ಯಾತ್ರೆಗೆ 9,900 ರೂ.]

ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ ಕಲಬುರಗಿ, ರಾಯಚೂರು ಭಾಗದಲ್ಲಿಯೂ ಇದೇ ರೀತಿಯ ಪ್ಯಾಕೇಜ್‌ ಹೊಂದಿರುವ ಮೂರು ಬಸ್ಸುಗಳ ಸಂಚಾರವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪ್ಯಾಕೇಜ್ ವಿವರಗಳು ಚಿತ್ರಗಳಲ್ಲಿವೆ...

ಪ್ರಾಯೋಗಿಕವಾಗಿ ಚಾಲನೆ

ಪ್ರಾಯೋಗಿಕವಾಗಿ ಚಾಲನೆ

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್ ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ ಕಲಬುರಗಿ, ರಾಯಚೂರು ಭಾಗದಲ್ಲಿಯೂ ಇದೇ ಸೇವೆ ಆರಂಭವಾಗಲಿದೆ.

ಎಲ್ಲೆಲ್ಲಿಗೆ ಹೋಗಬಹುದು ಈ ಪ್ಯಾಕೇಜ್‌ ಟೂರ್‌ನಲ್ಲಿ

ಎಲ್ಲೆಲ್ಲಿಗೆ ಹೋಗಬಹುದು ಈ ಪ್ಯಾಕೇಜ್‌ ಟೂರ್‌ನಲ್ಲಿ

ಒಂದು ದಿನದ ಪ್ಯಾಕೇಜ್ ಮೂಲಕ ಮೈಸೂರು ನಗರ-ಶ್ರೀರಂಗಪಟ್ಟಣ-ಕೆಆರ್‌ಎಸ್, ಬೈಲುಕುಪ್ಪೆ-ದುಬಾರೆ-ಭಾಗಮಂಡಲ- ತಲಕಾವೇರಿ- ಮಡಿಕೇರಿ, ನಂಜನಗೂಡು- ಹಿಮವದ್‌ ಗೋಪಾಲಸ್ವಾಮಿ ಬೆಟ್ಟ- ಬಂಡಿಪುರ, ಮೇಲುಕೋಟೆ- ಶ್ರವಣಬೆಳಗೊಳ-ಹಳೇಬೀಡು-ಬೇಲೂರು ನೋಡಬಹುದು.

ಎರಡು ಮತ್ತು ಮೂರು ದಿನದ ಪ್ಯಾಕೇಜ್

ಎರಡು ಮತ್ತು ಮೂರು ದಿನದ ಪ್ಯಾಕೇಜ್

* ಎರಡು ದಿನದ ಪ್ಯಾಕೇಜ್ : ನಂಜನಗೂಡು- ಹಿಮವದ್‌ ಗೋಪಾಲಸ್ವಾಮಿ ಬೆಟ್ಟ-ಬಂಡೀಪುರ-ಶಿವನಸಮುದ್ರ- ತಲಕಾಡು-ಸೋಮನಾಥಪುರ- ಮೇಲುಕೋಟೆ- ಶ್ರೀರಂಗಪಟ್ಟಣ- ಕೆಆರ್‌ಎಸ್‌, ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ

* ಮೂರು ದಿನಗಳ ಪ್ಯಾಕ್ಯೇಜ್ ಮೂಲಕ ತಿರುಪತಿ-ಮಂಗಾಪುರ-ಕಾಳಹಸ್ತಿಗಳಿಗೆ ಭೇಟಿ ನೀಡಬಹುದು.

ಐದು ದಿನದ ಪ್ಯಾಕೇಜ್ ವಿವರ

ಐದು ದಿನದ ಪ್ಯಾಕೇಜ್ ವಿವರ

ಐದು ದಿನಗಳ ಪ್ಯಾಕೇಜ್‌ನಲ್ಲಿ ಚಿತ್ರದುರ್ಗ-ಹಂಪಿ-ಬಾದಾಮಿ-ಬನಶಂಕರಿ-ಪಟ್ಟದಕಲ್ಲು-ಐಹೊಳೆ-ಕೂಡಲಸಂಗಮ-ವಿಜಯಪುರ, ಹೊರನಾಡು- ಕಳಸ-ಶೃಂಗೇರಿ-ಕೊಲ್ಲೂರು- ಮುರುಡೇಶ್ವರ- ಉಡುಪಿ- ಮಂಗಳೂರು-ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯಗಳನ್ನು ನೋಡಬಹುದಾಗಿದೆ.

ಜುಲೈ 16ರಂದು ಪ್ರವಾಸೋದ್ಯಮ ನೀತಿ ಬಿಡುಗಡೆ

ಜುಲೈ 16ರಂದು ಪ್ರವಾಸೋದ್ಯಮ ನೀತಿ ಬಿಡುಗಡೆ

ಕರ್ನಾಟಕ ಸರ್ಕಾರ 2015ರಿಂದ 2020ರ ವರೆಗಿನ ಪ್ರವಾಸೋದ್ಯಮ ನೀತಿಯನ್ನು ಜುಲೈ 16ರಂದು ಬಿಡುಗಡೆ ಮಾಡಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ನೀಡಿ ಬಿಡುಗಡೆ ಮಾಡಲಿದ್ದಾರೆ.

ಖಾಸಗಿ ಅವರಿಗೆ ಪ್ರವಾಸಿ ತಾಣ ದತ್ತು

ಖಾಸಗಿ ಅವರಿಗೆ ಪ್ರವಾಸಿ ತಾಣ ದತ್ತು

ಕರ್ನಾಟಕದಲ್ಲಿ 319 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಏಕಕಾಲಕ್ಕೆ ಎಲ್ಲವನ್ನೂ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿಯವರಿಗೆ ಪ್ರವಾಸಿ ತಾಣಗಳನ್ನು ದತ್ತು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ. ರಂಗನತಿಟ್ಟು ಪಕ್ಷಿಧಾಮವನ್ನು ದತ್ತು ಪಡೆಯಲು ಖಾಸಗಿ ಸಂಸ್ಥೆ ಮುಂದೆ ಬಂದಿದ್ದು ಜುಲೈ 14ರಂದು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+