ತಲಕಾಡು; ಐತಿಹಾಸಿಕ ಪಂಚಲಿಂಗದರ್ಶನದ ವಿಶೇಷತೆಗಳು

ಮೈಸೂರು, ಡಿಸೆಂಬರ್ 10 : ಏಳು ವರ್ಷಗಳ ಬಳಿಕ ನಡೆಯುತ್ತಿರುವ ತಲಕಾಡಿನ ಐತಿಹಾಸಿಕ ಪಂಚಲಿಂಗದರ್ಶನ ಮಹೋತ್ಸವಕ್ಕೆ ಗುರುವಾರ ಸಂಜೆ ಚಾಲನೆ ಸಿಗಲಿದೆ. ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯಲಿದ್ದು, 10 ದಿನಗಳ ಕಾಲ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶವಿದೆ.

ಗುರುವಾರ ಸಂಜೆ 6 ಗಂಟೆಗೆ ವೈದ್ಯನಾಥೇಶ್ವರ ದೇವಾಲಯದಲ್ಲಿ ದೀಪ ಬೆಳಗುವ ಹಾಗೂ ಸಂಕಲ್ಪ ಪೂಜೆ ಮಾಡುವ ಮೂಲಕ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆಯಲಿವೆ.

ಮೈಸೂರು ಜಿಲ್ಲೆಯ ತಲಕಾಡಿನ ಪುಣ್ಯಕ್ಷೇತ್ರದಲ್ಲಿ ಪಂಚಲಿಂಗದರ್ಶನ ನಡೆಯಲಿದ್ದು, ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಲ್ಲಿರುವ ಪಂಚಲಿಂಗಗಳ ದರ್ಶನ ಪಡೆದರೆ ಶಿವಸಾಯುಜ್ಯ ಲಭ್ಯವಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಡಿಸೆಂಬರ್ 14ರಂದು (ಅಮಾವಾಸ್ಯೆ) ಮುಂಜಾನೆ 4.30ಕ್ಕೆ ನಡೆಯಲಿರುವ ವಿಶೇಷ ಪೂಜೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಲಕಾಡು ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿಗಳು ಹೇಳಿದ್ದಾರೆ.

ಕಾರ್ತಿಕ ಮಾಸದಲ್ಲಿ ಪಂಚಲಿಂಗ ದರ್ಶನ

ಕಾರ್ತಿಕ ಮಾಸದಲ್ಲಿ ಪಂಚಲಿಂಗ ದರ್ಶನ

ಕಾರ್ತೀಕ ಮಾಸದಲ್ಲಿ 5 ಸೋಮವಾರಗಳು ಬಂದು, ಕೊನೆಯ ಸೋಮವಾರ ಅಮಾವಾಸ್ಯೆಯ ಜೊತೆಗೆ ಅನುರಾಧ, ಜೇಷ್ಠಾ ಅಥವಾ ವಿಶಾಖಾ ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರವಿದ್ದು, ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ ಆ ದಿನದ ಉಷಾಃಕಾಲದಲ್ಲಿ ಬರುವ ಪದ್ಮಕ ಯೋಗವು ಅತ್ಯಂತ ಫಲಪ್ರದವಾದ ಪರ್ವಕಾಲವಾಗಿದ್ದು ಈ ವೇಳೆ ಪಂಚಲಿಂಗ ದರ್ಶನಕ್ಕೆ ಪಡೆದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.

10 ತಂಡಗಳು ರಚನೆ

10 ತಂಡಗಳು ರಚನೆ

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸರಳವಾಗಿ ಪಂಚಲಿಂಗ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಪ್ರತಿ ದಿನ 1000 ಜನರಿಗೆ ಮಾತ್ರ ಪ್ರವೇಶ. ಪಂಚಲಿಂಗ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರಬೇಕು. ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡಗಳ ನಿಯೋಜನೆ ಮಾಡಲಾಗಿದೆ. ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಸಚಿವ ಸೋಮಶೇಖರ್ ಭಾಗಿ

ಸಚಿವ ಸೋಮಶೇಖರ್ ಭಾಗಿ

ಪಂಚಲಿಂಗ ದರ್ಶನದ ಭದ್ರತೆಗಾಗಿ 9 ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಪಂಚಲಿಂಗ ದರ್ಶನಕ್ಕೆ ಸಂಜೆ ಚಾಲನೆ ಸಿಗಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ್‌ ಅವರು ಪ್ರಥಮ ದಿನದ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಂಚಲಿಂಗ ದರ್ಶನ 11 ಬಾರಿ ನಡೆದಿದೆ

ಪಂಚಲಿಂಗ ದರ್ಶನ 11 ಬಾರಿ ನಡೆದಿದೆ

ಮೈಸೂರಿನ ತಲಕಾಡಿನಲ್ಲಿ ಇದುವರೆಗೂ 11 ಬಾರಿ ಪಂಚಲಿಂಗ ದರ್ಶನ ಕಾರ್ಯಕ್ರಮ ನಡೆದಿದೆ. ಈ ಬಾರಿ ನಡೆಯುತ್ತಿರುವುದು 12ನೇಯ ದರ್ಶನವಾಗಿದೆ. 1911, 1924, 1938, 1952, 1965, 1979, 1986, 1993, 2006, 2009 ಮತ್ತು 2013ರಲ್ಲಿಈ ಹಿಂದೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+