ಮೈಸೂರಿನಲ್ಲಿ ಸಿದ್ದರಾಮಯ್ಯ ಪರ ಹಿಂದಿ ನಟ ರಾಜ್ ಬಬ್ಬರ್ ಪ್ರಚಾರ
ಮೈಸೂರು, ಮೇ 04: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬಾಲಿವುಡ್ ನಟ ರಾಜ್ ಬಬ್ಬರ್ ಮೈಸೂರಿನಲ್ಲಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಚಾಮುಂಡೇಶ್ವರಿ ಸಿದ್ದರಾಮಯ್ಯ ಕ್ಷೇತ್ರವಲ್ಲ. ಇದು ಕುಟುಂಬ ಇದ್ದ ಹಾಗೆ. ಇಲ್ಲಿನ ಜನರು ಸಿದ್ದರಾಮಯ್ಯರ ಕುಟುಂಬಸ್ಥರ ಹಾಗೇ ಇದ್ದಾರೆ. ಸಿದ್ದರಾಮಯ್ಯರ ಅನ್ನಭಾಗ್ಯ,ಕ್ಷೀರಭಾಗ್ಯ, ಹಾಗೂ ಇತರೆ ಭಾಗ್ಯಗಳು ಜನರನ್ನ ತಲುಪಿದೆ" ಎಂದು ಸಿದ್ದರಾಮಯ್ಯ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
"ಪತ್ರಿಕೆಯಲ್ಲಿ ದೇವೆಗೌಡರ ವರದಿಯೊಂದನ್ನ ಓದಿದೆ. ಅವರು ಬಿಜೆಪಿ ಕಾಲೆಳೆದರೆ, ಬಿಜೆಪಿಯವರು ಜೆಡಿಎಸ್ ಕಾಲೆಳೆದಿದ್ದಾರೆ. ಬಿಜೆಪಿ ಸ್ಟಾರ್ ಕ್ಯಾಂಪೈನರ್ ಯೋಗಿ ಇಲ್ಲಿಗೆ ಬಂದಿದ್ದಾರೆ. ಅವರನ್ನ ನೋಡಿದ್ರೆ ಯಾರೂ ಮತ ಹಾಕೋಲ್ಲ. ಈ ರಾಜ್ಯಕ್ಕೆ ಸಿದ್ದರಾಮಯ್ಯರ ಅವಶ್ಯಕತೆ ಇದೆ. ಹೀಗಾಗಿ ಜನ ಇಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸಿ ಕಳುಹಿಸುತ್ತಾರೆ ಎಂದು ರಾಜ್ ಬಬ್ಬರ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಭಾರತ್ ನಗರದಲ್ಲಿ ಪ್ರಚಾರ ಮಾಡಿದ ರಾಜ್ ಬಬ್ಬರ್ ಅವರಿಗೆ ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷೀಕಾ ಸಿಂಗ್ ಸಾಥ್ ನೀದಿದರು.
ನಟ ಮದನ್ ಪಟೇಲ್ ಸಹ ರೋಡ್ ಶೋ ನಡೆಸಿ ಸಿದ್ದರಾಮಯ್ಯ ಪರ ಮತಯಾಚಿಸಿದರು.











Click it and Unblock the Notifications