ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!

ಮೈಸೂರು, ಏಪ್ರಿಲ್ 25 : ಇದೇ ಮೇ.12ರಂದು ನಡೆಯಲಿರುವ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗಡುವು ನಿನ್ನೆ ಕೊನೆಗೊಂಡಿದೆ. ಹೈ ವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಟ್ಟು ಬರೋಬ್ಬರಿ 197 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಏ.17ರಂದು ಚಾಲನೆ ದೊರೆತಿತ್ತು. ಕೊನೆಯ ದಿನವಾದ ಮಂಗಳವಾರವೂ ಕೆಲವು ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಜೋರಾಗಿಯೇ ನಡೆಯಿತು. ಸುಮಾರು 100ಕ್ಕೂ ಅಧಿಕ ಮಂದಿ ಅಂತಿಮ ದಿನ ನಾಮಪತ್ರ ಸಲ್ಲಿಸಿದರು. ಏ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್‌ ಪಡೆಯಲು ಏ.27 ಕಡೆಯ ದಿನವಾಗಿದೆ.
ಕೊನೆಯ ದಿನ ವರುಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ 25 ನಾಮಪತ್ರಗಳು ಸಲ್ಲಿಕೆಯಾದವು. ಕೃಷ್ಣರಾಜ ಕ್ಷೇತ್ರದಲ್ಲಿ 16, ಚಾಮುಂಡೇಶ್ವರಿಯಲ್ಲಿ 13, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ತಲಾ ಒಂಬತ್ತು ನಾಮಪತ್ರಗಳು ಸಲ್ಲಿಕೆಯಾದವು. ಜಿಲ್ಲೆಯಲ್ಲಿ ಅತಿ ಹೆಚ್ಚು ನಾಮಪತ್ರ ಸಲ್ಲಿಕೆ ವರುಣಾ ಕ್ಷೇತ್ರದಲ್ಲಿ ನಡೆದಿದೆ. ಇಲ್ಲಿ ಒಟ್ಟು 37 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

Karnataka Elections: 11 assembly constituencies and 197 nominations!

ಪಟ್ಟಿ
ನಾಮಪತ್ರ ಸಲ್ಲಿಕೆಯ ವಿವರ
ಪಿರಿಯಾಪಟ್ಟಣ 11
ಕೆ.ಆರ್‌.ನಗರ 09
ಹುಣಸೂರು 17
ಎಚ್‌.ಡಿ.ಕೋಟೆ 08
ನಂಜನಗೂಡು 10
ಚಾಮುಂಡೇಶ್ವರಿ 25
ಕೃಷ್ಣರಾಜ 27
ಚಾಮರಾಜ 18
ನರಸಿಂಹರಾಜ 18
ವರುಣಾ 37
ತಿ.ನರಸೀಪುರ 17
ಒಟ್ಟು 197
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+