ಬಿಜೆಪಿಯವರ ಮೀಸಲಾತಿ ಮೋಸದಾಟ ಬಟಾ ಬಯಲಾಗಿದೆ: ಡಿ.ಕೆ.ಶಿವಕುಮಾರ್‌

ಮೈಸೂರು, ಏಪ್ರಿಲ್‌, 26: ಮೀಸಲಾತಿ ವಿಚಾರವಾಗಿ ಬಿಜೆಪಿಯ ಮೋಸದಾಟ ಬಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಗುಡುಗಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಡಬಲ್‌ ಇಂಜಿನ್ ಸರ್ಕಾರದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು. ಒಕ್ಕಲಿಗ ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದು ಇವರ ಉದ್ದೇಶವಾಗಿತ್ತು. ಆದರೆ ಇದು ಸುಪ್ರೀಂಕೋರ್ಟ್‌ನಲ್ಲಿ ಬಯಲಾಗಿದೆ ಎಂದು ದೂರಿದರು.

Karnataka election 2023: Reservation fraud by BJP government: DK Shivakumar

ನಂತರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, 7 ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಶೇಕಡಾ 2 ರಷ್ಟು ಲಿಂಗಾಯತ ಮೀಸಲಾತಿ ರದ್ದಾಗಲಿದೆ. ಒಕ್ಕಲಿಗರ ಮೀಸಲಾತಿ 2ಸಿ ಮತ್ತೆ 3Aಗೆ ಹೋಗಲಿದೆ.

ಹಾಗೂ 2% ಹೆಚ್ಚುವರಿ ಮೀಸಲಾತಿ ರದ್ದಾಗಲಿದೆ. ಅಂತಿಮವಾಗಿ ಯಾರಿಗೂ ಮೀಸಲಾತಿ ಸಿಗುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಏಕೆ ಮೋಸದಾಟ ಆಡಿದ್ದೀರು? ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥನೆ ಮಾಡಿಕೊಳ್ಳಲಿಲ್ಲ. ಅಫಿಡೆವಿಟ್ ಹಾಕಲು ಏಕೆ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು.

ಎರಡೂ ಕ್ಷೇತ್ರಗಳಲ್ಲೀ ಸೋಲುವ ಆತಂಕ

ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್‌ ಆಗಿದೆ. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ ನಾಮಪತ್ರ ವಾಪಸ್‌ ತಗೋ ಎಂದಿದ್ದಾರೆ. ಮಾತ್ರವಲ್ಲದೆ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡಿಸಿ ಪದವಿ ನೀಡುವ ಆಮಿಷವನ್ನು ಒಡಿದ್ದಾರೆ.

ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ನಂತರ ತನ್ನದೆ ಆದ ಇಮೇಜ್‌ ಹೊಂದಿರುವ ಲಿಂಗಾಯತ ಸಮುದಾಯದ ನಾಯಕನಿಗೆ ಇಷ್ಟವಿಲ್ಲದಿದ್ದರೂ ಬಿಜೆಪಿ ಹೈಕಮಾಂಡ್‌ ಸಿದ್ದರಾಮಯ್ಯಗೆ ಪ್ರಬಲ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರನ್ನು ನಿಲ್ಲಿಸಿದೆ. ಆದರೆ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಇಲ್ಲಿ ಸೋಮಣ್ಣ ಅವರಿಗೆ ಅಷ್ಟೋಂದು ಹೋಲ್ಡ್‌ ಇಲ್ಲ ಎನ್ನವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ನಿನ್ನ ಕೈಮುಗಿತಿನಿ ಕಣಯ್ಯ

ಬಹಿರಂಗವಾಗಿರುವ ಆಡಿಯೋದಲ್ಲಿ ವಿ ಸೋಮಣ್ಣ ಅವರು ಜೆಡಿಎಸ್‌ ಅಭ್ಯರ್ಥಿಯಾದ ಮಲ್ಲಿಕಾರ್ಜುನ (ಆಲೂರು ಮಲ್ಲು) ಎಂಬುವವರ ಬಳಿ ನಿನ್ನ ಕೈಮುಗಿತಿನಿ ಕಣಯ್ಯ ನಾಮಪತ್ರ ವಾಪಸ್‌ ತಗೋ. ಜಿಟಿಜಿ ಅವರೊಂದಿಗೆ ನಾನು ಮಾತನಾಡುತ್ತೇನೆ. ನಾವಿಬ್ಬರು ಬಾಲ್ಯ ಸ್ನೇಹಿತರು ಎಂದು ಬೇಡಿಕೊಳ್ಳುವಂತೆ ಕಂಡು ಬರುತ್ತದೆ.

ಅಧಿಕಾರವಿದ್ದಾಗ ವಿ.ಸೋಮಣ್ಣ ಅವರು ತಮ್ಮದೇ ಬಿಜೆಪಿಯಲ್ಲಿ ಆಲೂರು ಮಲ್ಲು ತರಗಹದ ನಾಯಕರನ್ನು ತನ್ನ ಬಳಿ ಬೆಂಬಲಿಗರಾಗಿ ಹೊಂದಿದ್ದರು, ಆದರೆ ಈಗ ಅಂತಹವರ ಬಳಿ ಹಿರಿಯ ನಾಯಕ ವಿ ಸೋಮಣ್ಣ ಅವರು ಕೇಳಿಕೊಳ್ಳುವುದು ಹೈಕಮಾಂಡ್‌ ಹಿರಿಯನ್ನು ಯಾವ ಮಟ್ಟದಲ್ಲಿ ನೋಡುತ್ತದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಸೋಮಣ್ಣ ಅವರಿಗೆ ವರುಣಾದಲ್ಲಿ ಈಗ ಕಣದಲ್ಲಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಪ್ರಬಲ ಅಭ್ಯರ್ಥಿ ಅವರನ್ನು ಮಣಿಸುವುದು ಕಷ್ಟಸಾಧ್ಯದ ಮಾತು. ಅದಂತೆ ಚಾಮರಾಜನಗರದಲ್ಲಿ ಸೋಮಣ್ಣ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ ಅವರು ನಿಂತಿದ್ದಾರೆ. ಒಂದು ವೇಳೆ ವರುಣಾ ಕೈತಪ್ಪಿದರೂ ಚಾಮರಾಜನಗರದಲ್ಲಿ ಸೋಮಣ್ಣ ಗೆಲ್ಲುವ ಅವಕಾಶವಿತ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನದೆ ಬಲವನ್ನು ಇಂದಿಗೂ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+