ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅವನಿಗೆ ನಿಯತ್ತಿಲ್ಲ': ಪ್ರಧಾನಿಯನ್ನು ಏಕವಚನದಲ್ಲಿ ನಿಂದಿಸಿದ ಸಿದ್ದು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 9 : "ಮುಧೋಳ ನಾಯಿಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ, ಅವನಿಗೇ ನಿಯತ್ತಿಲ್ಲ. ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ" ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ನಾಲಿಗೆ ಹರಿಬಿಟ್ಟಿದ್ದಾರೆ.

ನಗರದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಬಾಡಿ ಬಿಲ್ಡರ್ ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ. ಅದರಲ್ಲಿ ವಿಶೇಷ ಏನಿದೆ. ಆದರೆ ಆ ಎದೆಯಲ್ಲಿ ಬಡವರಿಗಾಗಿ ಮಿಡಿಯುವ ಹೃದಯ ಇರಬೇಕಷ್ಟೆ. ಅದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಆಬ್ಸೆಂಟ್ ಆಗಿದೆ ಎಂದು ಟೀಕಿಸಿದರು.

ಮೋದಿಯವರೇ, ನಿಮಗ್ ಓಟು ಹಾಕೋದು ನಾಯಿಯಲ್ರೀ, ಮನುಷ್ಯರು: ಪ್ರಕಾಶ್ ರೈ!ಮೋದಿಯವರೇ, ನಿಮಗ್ ಓಟು ಹಾಕೋದು ನಾಯಿಯಲ್ರೀ, ಮನುಷ್ಯರು: ಪ್ರಕಾಶ್ ರೈ!

ಕಾಂಗ್ರೆಸ್ ಪಕ್ಷದ ಅಲೆಯನ್ನ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ ಬದಲಾವಣೆ ಮಾಡೋಕಾಗೋಲ್ಲ. ಮೋದಿ ಕರ್ನಾಟಕಕ್ಕೆ ಕೊಡುಗೆ ಏನು ನೀಡಿದ್ದಾರೆ. ಮನ್ ಕಿ ಬಾತ್ ನೀಡಿದ್ದಾರೆ. ಅದರಿಂದ ಹೊಟ್ಟೆ ತುಂಬುವುದಿಲ್ಲ. ಬಡವರಿಗೆ ಹೊಟ್ಟೆ ತುಂಬಿಸುವಂತಹ, ರೈತರ ಸಮಸ್ಯೆಗಳನ್ನು ಮತ್ತು ನಿರುದ್ಯೋಗಿಗಳ ಕಷ್ಟವನ್ನು ಪರಿಹರಿಸುವಂತಹ ಕಾರ್ಯಕ್ರಮವನ್ನು ಮಾಡಬೇಕು ಎಂದರು.

Karnataaka Elections: Siddaramaiah blames Narendra Modi in singular words in Mysuru

ಅನಂತ್ ಕುಮಾರ್ ಹೆಗಡೆ ಬಾಯಲ್ಲಿ ಕಲಗಚ್ಚು ಇದೆ. ಆತನ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಮೋದಿ ಮುಧೋಳ ನಾಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ. ಅವನಿಗೇ ನಿಯತ್ತಿಲ್ಲ ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ. ಇವರೆಲ್ಲ ಕಾಂಗ್ರೆಸ್‍ಗೆ ಪಾಠ ಹೇಳ್ತಿದ್ದಾರೆ. ಇವರಿಬ್ಬರನ್ನ ಏನು ಮಾಡಬೇಕೆಂದು ನೀವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಚಿತ್ರ ನಟ ಸುದೀಪ್ ಚಾಮುಂಡೇಶ್ವರಿ ಪ್ರಚಾರದಿಂದ ದೂರ ಉಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸುದೀಪ್ ಪ್ರಚಾರಕ್ಕೆ ಬರಬೇಕಿತ್ತು ಅವರಿಗೆ ಬೇರೆ ಏನೇನೋ ಕೆಲಸ ಇದ್ದ ಕಾರಣಕ್ಕೆ ಪ್ರಚಾರಕ್ಕೆ ಬಂದಿಲ್ಲ. ಈ ಕುರಿತಾಗಿ ತಮಗೆ ತಿಳಿಸಿದ್ದಾರೆ ಎಂದರು.

English summary
Karnataka assembly elections 2018: Chief minsiter Siddaramaiah blames Narendra Modi in singular words in Mysuru. He was addressing people in Chamaraja constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X