ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಮತಗಳು ಕೂಡ ನನಗೆ: ಪ್ರತಾಪ್ ಸಿಂಹ
ಮೈಸೂರು, ಮೇ ೦1 : ಜೆಡಿಎಸ್ ಮತಗಳು ಬಿಜೆಪಿಗೆ ಬಂದಿದೆ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಕೇವಲ ಜೆಡಿಎಸ್ ಮತಗಳು ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಮತಗಳೂ ನನಗೇ ಬಂದಿವೆ ಎಂದು ಹೇಳಿದ್ದಾರೆ.
ಈ ಹಿಂದಿನಿಂದಲೂ ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನವರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿಯೇ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಸತತ ಗೆಲುವು ಸಾಧ್ಯವಾಗುತ್ತಿದೆ. 1990 ರಿಂದಲೂ ಮೈಸೂರಿನಲ್ಲಿ ಈ ಸಂಸ್ಕೃತಿ ಮುಂದುವರಿದಿದೆ. ಹಿಂದೆ ಎರಡು ಮತಗಳು ಇದ್ದಾಗಲೂ ಎಸ್.ಎಂ.ಕೃಷ್ಣ ಹಾಗೂ ವಾಜಪೇಯಿ ಇಬ್ಬರಿಗೂ ಜನ ಮತ ನೀಡಿದ್ದರು ಎಂದು ಹೇಳಿದ್ದಾರೆ.
ಜಿ.ಟಿ.ದೇವೇಗೌಡರ ಹೇಳಿಕೆ ಸ್ವಾಗತಾರ್ಹ. ನಮ್ಮ ಗೆಲುವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮೈತ್ರಿಯಲ್ಲಿ ಗೊಂದಲ ಇದ್ದ ಕಾರಣ, ಮೈಸೂರಿನಲ್ಲಿ ಜೆಡಿಎಸ್ ಪಕ್ಷದವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ.ಟೆ.ದೇವೇಗೌಡ ಅವರು ಹೇಳಿದ್ದರು. ಕಾಂಗ್ರೆಸ್ ಮತಗಳು ಮಾತ್ರ ಕಾಂಗ್ರೆಸ್‌ಗೆ ಹೋಗಿವೆ ಎಂದು ಅವರು ಹೇಳಿದ್ದರು.












Click it and Unblock the Notifications