ಈ ವಾರ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ ಜಯಲಲಿತಾ
ಮೈಸೂರು, ಮೇ 12 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಈ ವಾರದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸೋಮವಾರ ಜಯಾ ಅಭಿಮಾನಿಗಳು ಮೈಸೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.
ಜೆ.ಜಯಲಲಿತಾ (ಜಯಲಲಿತಾ ಜಯರಾಮ್) ಹುಟ್ಟೂರು ಮಂಡ್ಯ ಜಿಲ್ಲೆಯ ಮೇಲುಕೋಟೆ. ಮೊದಲಿನಿಂದಲೂ ಮೈಸೂರು ಚಾಮುಂಡೇಶ್ವರಿ ಭಕ್ತರಾಗಿರುವ ಅವರು ಅನೇಕ ಬಾರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 2011ರ ನಂತರ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿಲ್ಲ. ['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']

ಸದ್ಯ, ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತಗೊಂಡಿರುವುದರಿಂದ ಜಯಲಲಿತಾ ಚಾಮುಂಡೇಶ್ವರಿ ದರ್ಶನ ಪಡೆಯಲು ಮುಂದಾಗಿದ್ದು, ಈ ವಾರದಲ್ಲಿ ಅವರು ಭೇಟಿ ನೀಡುವ ಸಾಧ್ಯತೆ ಇದೆ. ಜಯಲಲಿತಾ ಅವರ ಭೇಟಿ ಬಗ್ಗೆ ಮೈಸೂರು ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. [ಜಯಲಲಿತಾ ಆರೋಪ ಮುಕ್ತ, ಬಿ.ವಿ.ಆಚಾರ್ಯ ಸಂದರ್ಶನ]
ಸೋಮವಾರ ಜಯಲಲಿತಾ ಅವರು ದೋಷಮುಕ್ತವಾಗಲಿ ಎಂದು ಅವರ ಅಭಿಮಾನಿಗಳು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಜಯಲಲಿತಾ ಅವರು ಜೈಲು ಸೇರಿದಾಗಲೂ ಜಾಮೀನು ಸಿಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿದ್ದರು.
2011ರಲ್ಲಿ ಭೇಟಿ : 2011ರ ವಿಧಾನಸಭೆ ಚುನಾವಣೆಗೂ ಮೊದಲು ಚಾಮುಂಡಿ ಬೆಟ್ಟಕ್ಕೆ ಜಯಲಲಿತಾ ಭೇಟಿ ನೀಡಿದ್ದರು. ಈಗ ಪುನಃ ಚಾಮುಂಡೇಶ್ವರಿ ದರ್ಶನ ಪಡೆಯಲು ಮುಂದಾಗಿದ್ದಾರೆ. 1991, 2003, 2004ರಲ್ಲಿ ಜಯಲಲಿತಾ ಚಾಮುಂಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು.











Click it and Unblock the Notifications