ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ಆವರಣದಲ್ಲಿ ಜಂಬೂ ಸವಾರಿ ಆನೆಗಳಿಗೆ ತಾಲೀಮು

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 26 : ವಿಜಯ ದಶಮಿ ಮೆರವಣಿಗೆಗೆ ದಿನಗಣನೆ ನಡೆದಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿಗೆ ಇನ್ನು ಕೇವಲ ನಾಲ್ಕು ದಿನ ಮಾತ್ರ ಬಾಕಿ ಉಳಿದಿದ್ದು, ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಸೆಪ್ಟಂಬರ್ 30 ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ನಾಲ್ಕು ದಿನ ಮುಂಚಿತವಾಗಿ ಪುಷ್ಪಾರ್ಚನೆ ತಾಲೀಮು ನಡೆಯಿತು. ತಾಲೀಮಿನಲ್ಲಿ ಅರ್ಜುನ ನೇತೃತ್ವದ ಎಲ್ಲ ಆನೆಗಳೂ ಭಾಗಿಯಾಗಿದ್ದವು. ಆನೆಗಳ ಸರತಿ ಸಾಲು ಪೂರ್ವನಿಗದಿಗಾಗಿ ಮರದ ಅಂಬಾರಿ ಹೊರುವ ತಾಲೀಮು ರದ್ದು ಮಾಡಲಾಗಿತ್ತು. ಇನ್ನು ಪುಷ್ಪಾರ್ಚನೆ ತಾಲೀಮಿನ ವೇಳೆ ಕೆ.ಎಸ್.ಆರ್.ಪಿ., ಡಿ.ಎ.ಆರ್., ಸಿ.ಎ.ಆರ್., ಅಶ್ವಾರೋಹಿ ದಳ, ಹೋಮ್ ಗಾರ್ಡ್ ಸಿಬ್ಬಂದಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು.

Jamboo Savari rehearsal takes place in Mysuru palace

ಡಿವೈಎಸ್ಪಿ ಶಿವರಾಜ್ ನೇತೃತ್ವದಲ್ಲಿ ನಡೆದ ತಾಲೀಮಿಗೆ ಪೊಲೀಸ್ ಬ್ಯಾಂಡ್ ಹಿಮ್ಮೇಳ ಸಾಥ್ ನೀಡಿತು. ಈ ಸಮಯದಲ್ಲಿ ಡಿವೈಎಸ್ಪಿ ಶಿವರಾಜ್, ಎಸಿಪಿ ಶೈಲೇಂದ್ರ, ಇನ್ಸ್ ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Jamboo Savari rehearsal takes place in Mysuru palace

ಸೆಪ್ಟಂಬರ್ 30 ರಂದು ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿಲಿದ್ದಾರೆ.

English summary
As Jamboo Savari is just 4 days away, the rehearsal to offering floral tributes to Goddess Chamundeshwari, prior to the Dasara procession on Vijayadashami, was held at the Mysuru Palace premise on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X