ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಯೋಗ ದಿನಾಚರಣೆಯ ಮ್ಯಾಪಿಂಗ್ ಮಾಡಲಿದೆ ಇಸ್ರೋ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್.11 : ಕಳೆದ ಬಾರಿ ನಗರದ ಅರಮನೆ ಎದುರು ನಡೆದ ಯೋಗ ದಿನಾಚರಣೆ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಗೊಂಡದ್ದು ಹಳೆ ಸುದ್ದಿ. ಆದರೆ ಈ ಬಾರಿ ನಗರದ ರೇಸ್‍ ಕೋರ್ಸ್ ಮೈದಾನದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಸಂಭ್ರಮ ಇನ್ನೊಂದು ದಾಖಲೆಗೆ ಸಾಕ್ಷಿಯಾಗಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಬಾರಿ ಯೋಗ ದಿನಾಚರಣೆಯ ಮ್ಯಾಪಿಂಗ್ ಮಾಡಲಿದ್ದು, ಉಪಗ್ರಹ ಮೂಲಕ ಈ ಮ್ಯಾಪಿಂಗ್ ನಡೆಯಲಿದೆ.

ಮತ್ತೊಂದು ದಾಖಲೆ ನಿರ್ಮಿಸಲು ಅಣಿಯಾಗುತ್ತಿದೆ ಸಾಂಸ್ಕೃತಿಕ ನಗರಿಮತ್ತೊಂದು ದಾಖಲೆ ನಿರ್ಮಿಸಲು ಅಣಿಯಾಗುತ್ತಿದೆ ಸಾಂಸ್ಕೃತಿಕ ನಗರಿ

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥಾನ ನಿರ್ದೇಶಕ ಈಶ್ವರ್ ಬಸವರೆಡ್ಡಿ ಪ್ರಕಾರ ಈ ಮ್ಯಾಪಿಂಗ್ ನ ಪ್ರಯೋಜನವೆಂದರೆ ಎಲ್ಲೆಲ್ಲಿ ಎಷ್ಟು ಜನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ದೊರೆಯಲಿದೆ.

ISRO will make a mapping of Yoga Day this time.

ಕೇಂದ್ರದ ಆಯುಶ್ ಮಂತ್ರಾಲಯ ಈ ಪ್ರಯತ್ನಕ್ಕೆ ಕೈ ಹಾಕಿದೆ. ಬೆಳಗ್ಗೆ 7ರಿಂದ 8ರ ಅವಧಿಯಲ್ಲಿ ಉಪಗ್ರಹ ಮೂಲಕ ಈ ಮ್ಯಾಪಿಂಗ್ ನಡೆಯಲಿದೆ.

ಮೂಲಗಳ ಪ್ರಕಾರ ಈ ನಾಲ್ಕನೇ ವರ್ಷದ ಯೋಗ ದಿನದ ಸಂಭ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್ ನಲ್ಲಿ ಆಚರಿಸಲಿದ್ದು, ಅಲ್ಲಿ ಕಳೆದ ಬಾರಿಯ ಮೈಸೂರು ದಾಖಲೆಯನ್ನು ಮುರಿಯಲು ಸಿದ್ಧತೆ ನಡೆದಿದೆ.

English summary
This time, Yoga Day celebration of the city's race course will witness another record. Indian Space Research Organization (ISRO) will make a mapping of Yoga Day this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X