ಮೈಸೂರು: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು
ಮೈಸೂರು, ಜೂನ್ 12: ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ವೈದ್ಯ ಇಲಾಖೆ ತಲೆ ತಗ್ಗಿಸುವಂತಹ ಹೀನ ಘಟನೆ ನಡೆದಿದೆ. ನಗರದ ಬೆಲವತ್ತ ಬಳಿ ನಿನ್ನೆ (ಜೂನ್ 11) ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ವೈದ್ಯರ ನಿರ್ಲಕ್ಷ್ಯ ದಿಂದ ಓರ್ವ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆಂದು ಸಾವಿಗೀಡಾದ ವ್ಯಕ್ತಿಯ ಪೋಷಕರು ಆರೋಪಿಸಿದ್ದಾರೆ.
ಮೃತನನ್ನು ಶಾರದಾದೇವಿನಗರದ ನಿವಾಸಿ ರಾಘವೇಂದ್ರ( 35)ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ರಾಘವೇಂದ್ರ ನನ್ನು ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆ ಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇರಲಿಲ್ಲ ಎಂದು ರಾಘವೇಂದ್ರ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

ಅಲ್ಲಿ ವೆಂಟಿಲೇಟರ್ ಇಲ್ಲವೆಂದು ವೈದ್ಯರು ಹೇಳಿಕೆ ನೀಡಿದಾಗ ಅಲ್ಲಿಂದ ಖಾಸಗಿ ಆಸ್ಪತ್ರೆಯಾದ ಸೆಂಟ್ ಜೋಸೆಫ್ ಆಸ್ಪತ್ರೆಗೆ ಸೇರಿಸಲಾಗಿದೆ. ಪೋಷಕರಿಗೆ ಚಿಕಿತ್ಸೆಗಾಗಿ ಹೆಚ್ಚಿನ ಹಣ ಕೇಳಿದ್ದರಿಂದ ಹರೀಶ್ ಸಾಂತ್ವನ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಿ ಎಂದು ರಾಘವೇಂದ್ರ ಪೋಷಕರು ಒತ್ತಾಯಿಸಿದ್ದಾರೆ.
ಆದರೆ ಇವರಿಬ್ಬರ ಮಾತಿನ ಚಕಮಕಿ ನಡೆಯುವಾಗಲೇ ರಾಘವೇಂದ್ರ ಕೊನೆಯುಸಿರು ಎಳೆದಿದ್ದಾನೆ. ಹೀಗಾಗಿ ಕೆ ಆರ್ ಆಸ್ಪತ್ರೆಯಲ್ಲಿ ವೈದ್ಯರು, ಹರೀಶ್ ಯೋಜನೆಯಡಿಯಲ್ಲಿ ಹಣ ಕಸಿದು, ಅವರವರ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುತ್ತಾರೆಂದು ಅಲ್ಲಿದ್ದ ರಾಘವೇಂದ್ರ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ನೀಡಲಾಗದೇ ಅಪಘಾತದಲ್ಲಿ ಗಾಯಗೊಂಡವರು ಸಾವನ್ನಪ್ಪಿತ್ತಿದ್ದಾರೆಂದು ಕೆ ಆರ್ ಆಸ್ಪತ್ರೆ ಮುಂಭಾಗ ರಾಘವೇಂದ್ರ ಕಡೆಯುವರು ಧರಣಿ ನಡೆಸಿದರು.












Click it and Unblock the Notifications