"ನಾನು ಎಲ್ ಬೋರ್ಡ್ ಅಲ್ಲ"; ಎಚ್ ಡಿಕೆಗೆ ಟಾಂಗ್ ಕೊಟ್ಟ ಸೋಮಣ್ಣ

ಮೈಸೂರು, ಸೆಪ್ಟೆಂಬರ್ 13: "ಇಲ್ಲಿ ಯಾರಿಗೆ ಯಾರೂ ದೊಡ್ಡವರಲ್ಲ. ಕಲಿಕೆ ನಿರಂತರ ಇರುತ್ತದೆ. ನಾನು ಎಲ್ ಬೋರ್ಡ್ ಅಲ್ಲ. ನನಗೆ ಅನುಭವ ಕಡಿಮೆ ಎನ್ನುವ ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 96ರಲ್ಲಿ, ನಾನು ರಾಜಕಾರಣಕ್ಕೆ ಬಂದಿದ್ದು 83ರಲ್ಲಿ. ಕುಮಾರಸ್ವಾಮಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ ವಸತಿ ಸಚಿವ ವಿ.ಸೋಮಣ್ಣ.

ನಗರದ ಮುಡಾ ಆವರಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಸರಾ ನಾಡ ಹಬ್ಬ.ಇದನ್ನು ಎಲ್ಲರೂ ಸೇರಿ ಮಾಡಬೇಕು. ಕೇಂದ್ರದ ನಾಯಕರಿಗೂ ದಸರಾ ಹಬ್ಬಕ್ಕೆ ಆಹ್ವಾನಿಸಲಾಗುವುದು. ಕುಮಾರಸ್ವಾಮಿ ಅವರಿಗೂ ಸಲಹೆ ಇದ್ದರೆ ಕೊಡಲಿ" ಎಂದು ಹೇಳಿದ್ದಾರೆ.

Iam Not L Board Said V Somanna To HD Kumaraswamy

"ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ತಮ್ಮ ಕಾರ್ಯ ವೈಖರಿ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ದಸರಾ ನಾಡಹಬ್ಬ. ಇದಕ್ಕಾಗಿ ನಾನು ಎಲ್ಲಾ ತಾಲೂಕುಗಳಿಗೆ ಹೋಗಿ ಎಲ್ಲರನ್ನೂ‌ ವಿಶ್ವಾಸಕ್ಕೆ ತೆಗೆದುಕೊಂಡು‌ ದಸರಾ‌ ಯಶಸ್ಸಿಗೆ ಶ್ರಮಿಸುತ್ತಿದ್ದೇನೆ" ಎಂದು ಹೇಳಿದರು.

ದಸರಾ ಮುಗಿದ ನಂತರ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ವಸತಿ ಇಲಾಖೆ ಕಾರ್ಯ ಮಾಡುವುದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+