• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ದಸರಾ: ರೋಡಿಗಿಳಿಯಲಿದೆ 12 HOHO ಬಸ್ ಗಳು

|

ಮೈಸೂರು, ಸೆಪ್ಟೆಂಬರ್.19 : ದಸರಾ ಮಹೋತ್ಸವಕ್ಕೆ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ನಗರದ ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸುವ ಹಾಪ್-ಆನ್ ಹಾಗೂ ಹಾಪ್-ಆಫ್ (ಎಚ್‍ಒಎಚ್ಒ) ಬಸ್ ಇದೇ ಮೊದಲ ಬಾರಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನಡೆಯಲಿದೆ.

ಈ ಸಲ ಡಿಫರೆಂಟ್‌ ದಸರಾ ಅಂತೆ: ಎಚ್ಡಿಕೆ ಪ್ಲ್ಯಾನ್‌ ಏನು?

ಈವರೆಗೆ ದಸರಾ ಸಂದರ್ಭದಲ್ಲಿ ಕೆಎಸ್ ಆರ್‍ಟಿಸಿಯ ಮೈಸೂರು ನಗರ ಸಾರಿಗೆ ವಿಭಾಗವೇ ಇದನ್ನು ನಿರ್ವಹಿಸುತ್ತಿತ್ತು. ಇದಕ್ಕೆ ಉತ್ತಮ ಪತಿಕ್ರಿಯೆಯೂ ಇತ್ತು. ಆದರೆ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ಮಾಡುವ ಉದ್ದೇಶದಿಂದ ಸಾರಿಗೆ ಇಲಾಖೆ ಹಾಗೂ ಪವಾಸೋದ್ಯಮ ಇಲಾಖೆ ಜಂಟಿಯಾಗಿ ನಿರ್ವಹಣೆ ಮಾಡಲಿವೆ.

ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ 2013ರಲ್ಲಿ ಮೊದಲ ಬಾರಿಗೆ ದಸರಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಹಾಪ್ ಆನ್-ಹಾಪ್ ಆಫ್' ವ್ಯವಸ್ಥೆ ಜಾರಿಗೊಳಿಸಿದ್ದು, ಅದು ಯಶಸ್ವಿಯೂ ಆಗಿತ್ತು. ಅಂದಿನಿಂದ ನಿರಂತರವಾಗಿ ದಸರಾ ಸಂದರ್ಭದಲ್ಲಿ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.

ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್

ಪ್ರವಾಸೋದ್ಯಮ ಕೇಂದ್ರೀಕರಿಸಿ ಆಯೋಜಿಸುವ ಈ ನಗರ ದರ್ಶನದ ಸಂಚಾರ ಪ್ರವಾಸಿಗರಿಗೆ ಹೆಚ್ಚಿನ ಸಮಯಾವಕಾಶ ನೀಡಲಿದೆ. 1 ದಿನ ಇದನ್ನು ಬಳಸಿಕೊಳ್ಳಬಹುದಾಗಿದೆ. ನಗರ ಸಾರಿಗೆ ನಿಲ್ದಾಣದಿಂದ ಹೊರಡುವ ಈ ಬಸ್ ಗೆ ಪ್ರವಾಸಿಗರು ನಿಗದಿತ ಹಣ ನೀಡಿ ಪಾಸ್ ಖರೀದಿಸಿದರೆ ಎಲ್ಲಿ ಬೇಕಾದರೂ ಇಳಿದು ಎಲ್ಲಿ ಬೇಕಾದರೂ ನಿರ್ಧಿಷ್ಟ ಬಸ್ ಗೆ ಹತ್ತುವ ವ್ಯವಸ್ಥೆ ಇದೆ.

12 ಬಸ್ ಗಳು ಸೇವೆಗೆ ಮೀಸಲಿದ್ದು, ಪ್ರತಿ 15 ನಿಮಿಷಕ್ಕೊಮ್ಮೆ ಬಸ್ ಸೌಲಭ್ಯ ದೊರೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದನ್ನು ನಿರ್ವಹಿಸಿದರೂ ಇದಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HOHO Bus facility available in Mysore dasara. This system will be held in association with State Tourism Development Ltd.and Karnataka State Transport Corporation for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more