ಮೈಸೂರು : ವಿದ್ಯಾರ್ಥಿ ಚಿಕಿತ್ಸಾ ವೆಚ್ಚ ಭರಿಸಿದ ಸಾರಿಗೆ ಇಲಾಖೆ

ಮೈಸೂರು, ಡಿಸೆಂಬರ್ 04 : ಮೈಸೂರಿನ ಖಾಸಗಿ ಶಾಲೆ ವಿದ್ಯಾರ್ಥಿ ಉಲ್ಲೇಖ್‌ಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ವಿತರಣೆ ಮಾಡಿದರು. ಕೆಎಸ್ಆರ್‌ಟಿಸಿ ಬಸ್ ಹತ್ತುವಾಗ ಬಿದ್ದು, ಉಲ್ಲೇಖ್ ಕಾಲು ಕಳೆದುಕೊಂಡಿದ್ದ.

ಸೋಮವಾರ ಮೈಸೂರಿನ ಅನಘಾ ಆಸ್ಪತ್ರೆಗೆ ಭೇಟಿ ನೀಡಿದ ರೇವಣ್ಣ ಅವರು, 1 ಲಕ್ಷದ 10 ಸಾವಿರ ರೂ. ಚಿಕಿತ್ಸಾ ವೆಚ್ಚವನ್ನು ನೀಡಿದರು. ವಿದ್ಯಾರ್ಥಿಯ ಮುಂದಿನ ಚಿಕಿತ್ಸಾ ವೆಚ್ಚ, ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

HM Revanna distributes medical expenses to student

ಸಾರಿಗೆ ಸಚಿವರೇ ಖುದ್ದಾಗಿ ಮೈಸೂರಿಗೆ ಆಗಮಿಸಿ ವಿದ್ಯಾರ್ಥಿಯ ಯೋಗಕ್ಷೇಮವನ್ನು ವಿಚಾರಿಸಿದರು. ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ಅಕ್ಟೋಬರ್ 25ರಂದು ಸಂಜೆ ಮೈಸೂರು ಬಸ್ ನಿಲ್ದಾಣದ ಸಮೀಪ ಕೆಎಸ್ಆರ್‌ಟಿಸಿ ಬಸ್ ಹತ್ತಲು ಹೋದಾಗ ಉಲ್ಲೇಖ್ ಆಯತಪ್ಪಿ ಬಿದ್ದಿದ್ದ. ಆಗ ಬಸ್ ಆತನ ಕಾಲ ಮೇಲೆ ಹತ್ತಿ ಎಡಗಾಲು ಕಟ್ ಆಗಿತ್ತು.

ಬಸ್ ಕಂಡಕ್ಟರ್, ಚಾಲಕರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷತನದ ಪ್ರಕರಣ ದಾಖಲಾಗಿತ್ತು. ಇಂದು ಸಚಿವರು ವಿದ್ಯಾರ್ಥಿಗೆ ಪರಿಹಾರವನ್ನು ವಿತರಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+