ಸಚಿವ ಮಹದೇವಪ್ಪ ಪುತ್ರನ ವಿರುದ್ಧದ ಸಮನ್ಸ್‌ಗೆ ಹೈಕೋರ್ಟ್ ತಡೆ

Recommended Video

      Vande Mataram compulsory in all Tamil Nadu schools, colleges: Madras HC | Oneindia Kannada

      ಬೆಂಗಳೂರು, ಸೆಪ್ಟೆಂಬರ್ 22 : ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ವಿರುದ್ಧ ನೀಡಿದ್ದ ಸಮನ್ಸ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಮೈಸೂರಿನ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

      ಅಕ್ರಮವಾಗಿ ಮರಳು ಸಾಗಣೆಗೆ ಅನುಮತಿ ನೀಡಲು ಲಂಚ ಪಡೆಯುವಂತೆ ಸರ್ಕಾರಿ ಅಧಿಕಾರಿಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಸುನೀಲ್ ಬೋಸ್ ಆರೋಪಿ. ಸುನೀಲ್ ಬೋಸ್ ಮತ್ತು ಅವರ ಸ್ನೇಹಿತ ರಾಜು ವಿಚಾರಣೆಗೆ ಹಾಜರಾಗಬೇಕು ಎಂದು ಮೈಸೂರಿನ ನ್ಯಾಯಾಲಯ ಸಮನ್ಸ್ ನೀಡಿತ್ತು.

       High court puts a stay on summons issued to Sunil Bose

      ಸುನೀಲ್ ಬೋಸ್ ಸಮನ್ಸ್ ನೀಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸಮನ್ಸ್‌ಗೆ ತಡೆ ನೀಡಿದೆ. ಮೈಸೂರು ನ್ಯಾಯಾಲಯಕ್ಕೂ ವಿಚಾರಣೆಗೆ ಗೈರು ಹಾಜರಾದ ಕಾರಣ ಸಮನ್ಸ್ ಜಾರಿಗೊಳಿಸಲಾಗಿತ್ತು.

      2010ರ ಮಾರ್ಚ್ 27ರಂದು ಲೋಕಾಯುಕ್ತ ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಲ್ಫೋನ್ಸಿಸ್ ಮನೆ ಮೇಲೆ ದಾಳಿ ನಡೆಸಿದ್ದರು. ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಲು 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.

      ವಿಚಾರಣೆ ವೇಳೆ ಅಲ್ಫೋನ್ಸಿಸ್ ಸುನೀಲ್ ಬೋಸ್ ಮತ್ತು ಅವರ ಸ್ನೇಹಿತರು ಕುಮ್ಮಕ್ಕು ನೀಡಿದ್ದರಿಂದ ಲಂಚ ಪಡೆದಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಚಾರ್ಜ್ ಶೀಟ್ ಸಲ್ಲಿಸುವಾಗ ಸುನೀಲ್ ಬೋಸ್, ರಾಜು ಹೆಸರು ಕೈಬಿಡಲಾಗಿತ್ತು. ಈ ಕುರಿತು ಬಸವರಾಜು ಅವರು ಖಾಸಗಿ ದೂರು ಸಲ್ಲಿಸಿದ್ದರು.

      ನಂತರ ಸುನೀಲ್ ಬೋಸ್ ಮತ್ತು ರಾಜು ಖುದ್ದು ಹಾಜರಾತಿಗೆ ಮೈಸೂರಿನ ಕೋರ್ಟ್ ಸೂಚಿಸಿತ್ತು. ಆದರೆ, ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+