ದಸರೆಗೆ ಕಪ್ಪುಚುಕ್ಕೆ ತರಲು ಹೈಟೆಕ್ ವೇಶ್ಯಾವಾಟಿಕೆಗೆ ಮಾಸ್ಟರ್ ಪ್ಲಾನ್!
ಮೈಸೂರು, ಆಗಸ್ಟ್ 31 : ದಸರೆ ಎಂದರೇ ಸಾಕು, ಅಲ್ಲಿನ ವೈಭವ - ಆತಿಥ್ಯಕ್ಕೆ ಮನಸೋಲದವರೇ ಇಲ್ಲ. ನಾಡಹಬ್ಬದ ವೈಭವಕ್ಕೆ ಸಾಕ್ಷಿಯಾಗುವುದು ಮೈಸೂರು ಎಂಬುದು ಸತ್ಯ. ಇಂತಹ ವಿಶ್ವವಿಖ್ಯಾತ ದಸರೆಯ ವೈಭವಕ್ಕೆ ಮಸಿ ಬೆಳೆಯುವ ಕೆಲಸವನ್ನು ಕೆಲವರು ಮಾಡಲು ಪೂರ್ವ ತಯಾರಿ ನಡೆಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ .
ಹೌದು, ಮೈಸೂರು ದಸರೆಗೆ ಕಪ್ಪು ಚುಕ್ಕೆಯನ್ನಿಡುವ ಸಲುವಾಗಿಯೇ ಒಂದು ಕ್ರೈಂ ಜಾಲ ಸ್ಕೆಚ್ ರೂಪಿಸುತ್ತಿದೆ. ಈಗಾಗಲೇ ಮೈಸೂರಿನಾದ್ಯಂತ ಹೆಸರು ಮಾಡಿ, ಸದ್ಯ ಪೊಲೀಸರ ನಿದ್ದೆಗಡಿಸಿರುವ ವೇಶ್ಯಾವಾಟಿಕೆ ಜಾಲ ದಸರೆಯ ಸಂದರ್ಭದಲ್ಲಿ ಮತ್ತಷ್ಟು ಗಿರಾಕಿಗಳನ್ನು ತನ್ನತ್ತ ಸೆಳೆಯಲು ರೆಡಿಯಾಗುತ್ತಿದೆ. ಇಂತಹ ಸ್ಫೋಟಕ ಮಾಹಿತಿ ಪೊಲೀಸ್ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಏನಿದು ಮಾಸ್ಟರ್ ಪ್ಲಾನ್?
ಮೈಸೂರಿನ ಜನತೆ ಅಷ್ಟೇ ಅಲ್ಲದೆ ರಾಜ್ಯದ ಜನರನ್ನು ಬೆಚ್ಚಿ ಬೆಳೆಸುವಂತಹ ಆಘಾತಕಾರಿ ಸಂಗತಿ ಇದು. ವಿದೇಶಗಳಲ್ಲಿ ಒಲಂಪಿಕ್, ಕ್ರಿಕೆಟ್ ಮ್ಯಾಚ್ ಗಳು ನಡೆಯುವಾಗ ಯಾವ ರೀತಿ ಹೈಟೆಕ್ ವೇಶ್ಯಾವಾಟಿಕೆ ನಡೆಸಿ ಜನರನ್ನು ಸೆಳೆಯಲಾಗುತ್ತಿತ್ತೋ ಅದೇ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಯೋಜನೆ ರೂಪಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ವೆಬ್ ಸೈಟ್ ಗಳಲ್ಲಿ ಫೋನ್ ನಂಬರನ್ನು ನೀಡುವ ಮೂಲಕ ಈ ಜಾಲ ತನ್ನ ಕೆಲಸ ಶುರುವಿಟ್ಟುಕೊಳ್ಳುತ್ತದೆ.
ವಾಟ್ಸಪ್ ಮೂಲಕವೂ ಲಲನೆಯರ ಫೋಟೋ ಕಳುಹಿಸಿ ರೇಟ್ ಫಿಕ್ಸ್ ಮಾಡಲಾಗುತ್ತದೆ!
ಬಾಡಿಗೆ ಮನೆಯೇ ಇವರ ಲೋಕಲ್ ಅಡ್ಡೆ
ಇದೊಂದು ಅಘಾತಕಾರಿ ವಿಚಾರ. ಈಗಾಗಲೇ ಮೈಸೂರಿನ ಅನೇಕ ಕಡೆ ಎಲ್ಲಿ ಬಾಡಿಗೆ ದೊರಕುತ್ತಿದೆ ಎಂಬ ಮಾಹಿತಿ ಕಲೆಹಾಕುತ್ತಿದ್ದು, ಅಂತಹ ಮನೆಗಳ ಮಾಲೀಕರ ಬಳಿ ಮಾತನಾಡಿ ಕೇವಲ ಒಂದು ಅಥವಾ 2 ತಿಂಗಳ ಅವಧಿಗೆ ದುಪ್ಪಟ್ಟು ಹಣ ನೀಡಿ ಬಾಡಿಗೆ ಪಡೆದು ಅಲ್ಲಿ ತಮ್ಮ ಕೆಲಸ ಶುರುವಿಟ್ಟುಕೊಳ್ಳುವ ಕುರಿತಾಗಿ ಈ ತಂಡ ಹೊಂಚು ಹಾಕುತ್ತಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಕಾನೂನು ಸುವ್ಯವಸ್ಥೆಯ ಡಿಸಿಪಿ ಎನ್.ವಿಷ್ಣುವರ್ಧನ್ , ದಯವಿಟ್ಟು ಯಾರೂ ಎರಡು ತಿಂಗಳು ಮನೆ ಬಾಡಿಗೆಗೆ ಕೇಳಿ ಬಂದವರಿಗೆ ನೀಡಬೇಡಿ, ಯಾವುದಾದರೂ ಅಪಾರ್ಟ್ ಮೆಂಟ್ ಅಥವಾ ಲಾಡ್ಜ್ ಗಳನ್ನು ಬಲ್ಕ್ ಗಳಲ್ಲಿ ಬುಕ್ ಮಾಡಿದ್ದರೆ ಮಾಹಿತಿ ನೀಡಿ, ಅಷ್ಟಕ್ಕೂ ಮನೆ ಬಾಡಿಗೆ ನೀಡುವುದಿದ್ದರೆ ಅವರ ಪೂರ್ವಾಪರಗಳನ್ನು ಕೂಲಂಕಷವಾಗಿ ವಿಚಾರಿಸಿ ನೀಡಿ ಎಂದು ತಿಳಿಸಿದ್ದಾರೆ.
ಜನ ಹೆಚ್ಚಾಗಿ ಬರುವುದರಿಂದಲೇ ಈ ಮಾಸ್ಟರ್ ಪ್ಲಾನ್!
ದಸರೆ ಹಿನ್ನೆಲೆ ಜನ ಹೆಚ್ಚಾಗಿ ದೇಶದಿಂದ ಮಾತ್ರವವಲ್ಲ ವಿದೇಶದಿಂದಲೂ ಬರುತ್ತಾರೆ ಎಂಬುದು ಇವರ ಪ್ಲಾನ್. ಮಂಗಳೂರು, ಬೆಂಗಳೂರಿನಿಂದ ಹುಡುಗಿಯರನ್ನು ಕರೆತಂದು ವೇಶ್ಶಾವಾಟಿಕೆ ನಡೆಸುವ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ನಿದ್ದೆಗೆಡಿಸಿದೆ. ಇದೀಗ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂಥ ಕೃತ್ಯ ನಡೆಯಬಾರದೆಂದು ಪಣ ತೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಇಲ್ಲಿನ ಜನತೆಯೂ ಅವರಿಗೆ ಸ್ಪಂದಿಸಬೇಕಿದೆ.
ಒಟ್ಟಾರೆ ಪಾರಂಪರಿಕ ನಗರಿ ಮೈಸೂರಿನ ಹೆಸರಿಗೆ ಮಸಿ ಬೆಳೆಯುವ ಕಾಯಕಕ್ಕೆ ಇವರ ಪ್ಲಾನ್ ನೆಲಸಮಗೊಳಿಸಲು ಪೊಲೀಸರು ಸಜ್ಜಾಗಿದ್ದಾರೆ.












Click it and Unblock the Notifications