ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ ತ್ರಿವೇಣಿಸಂಗಮದ ಪ್ರವಾಹ ಭೀಕರತೆ

|
Google Oneindia Kannada News

ಮೈಸೂರು, ಆಗಸ್ಟ್ 12 : ಕಪಿಲೆ ಹಾಗೂ ಕಾವೇರಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. ಟಿ ನರಸೀಪುರ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತಗೊಂಡಿದ್ದು ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ತಿರಮಕೂಡಲಿನ ಪ್ರವಾಹದ ಮಟ್ಟ ಭೀಕರತೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿರೂಪಾಪುರ; ಬೋಟ್ ಮಗುಚಿ ಅಪಾಯದಲ್ಲಿ ಸಿಲುಕಿದ ರಕ್ಷಣಾ ಸಿಬ್ಬಂದಿ
ಕೆಆರ್ ಎಸ್ ಕಬಿನಿ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಎರಡು ಹಸುಗಳು ಕೊಚ್ಚಿ ಹೋಗಿದ್ದು, ಎರಡು ಮನೆ ಸಂಪೂರ್ಣವಾಗಿ ಕುಸಿದಿದೆ. ನದಿ ನೀರು ಗುಂಜಾ ನರಸಿಂಹಸ್ವಾಮಿ ದೇವಾಲಯ ಆವರಿಸಿದೆ.

Here is the visual of Drone Triveni Sangama effected by flood

ಹಲವೆಡೆ ನಿವಾಸಿಗಳನ್ನು ತಾತ್ಕಾಲಿಕ ನೆರೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ನದಿಗಳ ವೈಭವವನ್ನು ವೀಕ್ಷಿಸಲು ದೇವಾಲಯದ ಬಳಿ ಧಾವಿಸುತ್ತಿದ್ದ ಜನರಿಗೆ ಪೊಲೀಸರು ನಿಷೇಧ ಹೇರಿದ್ದಾರೆ.

Here is the visual of Drone Triveni Sangama effected by flood
ಇನ್ನು ನದಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಐತಿಹಾಸಿಕ ಪ್ರವಾಸಿ ತಾಣಗಳು ಮುಳುಗಡೆಯಾಗಿದ್ದು, ಗಂಗರಸರ ರಾಜಧಾನಿ ತಲಕಾಡು ನೆರೆಗೆ ತುತ್ತಾಗಿದೆ. ಹೆಮ್ಮಿಗೆ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ಸಂಚಾರ ಬಂದ್ ಮಾಡಲಾಗಿದೆ. ನಿಸರ್ಗಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ. ನದಿ ನೀರಿನಿಂದ ಮಾಧವ ತಂತ್ರಿ ಅಣೆಕಟ್ಟಿಗೆ ಕಳೆ ತಂದಿದ್ದು ಅಣೆಕಟ್ಟು ವೀಕ್ಷಣೆಯನ್ನು ಸದ್ಯ ನಿಷೇಧಿಸಲಾಗಿದೆ.

Here is the visual of Drone Triveni Sangama effected by flood
ಪ್ರವಾಹದ ತೀವ್ರತೆಗೆ ಕಪಿಲಾ ನದಿಯ ತಡೆಗೋಡೆ ಕುಸಿದಿದ್ದು ನೀರಿನ ಪೈಪ್‌ಗೆ ಹಾನಿಯುಂಟಾಗಿದೆ. ಅಲ್ಲದೇ ತಾಲೂಕಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸದ್ಯ ಆದಿಚುಂಚನಗಿರಿ ಭವನದಲ್ಲಿ ಗಂಜಿ ಕೇಂದ್ರ ತೆರೆದಿದ್ದು, ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
English summary
Here is the visual of Drone Triveni Sangama effected by flood. T Narasipura is the place where 3 rivers meet - Kaveri, Kapila, Spatika.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X