ಮೈಸೂರು : ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿ, ತುರ್ತು ಭೂ ಸ್ಪರ್ಶ
ಮೈಸೂರು, ಅಕ್ಟೋಬರ್ 01 : ಹಕ್ಕಿ ಬಡಿದು ಹೆಲಿಕಾಪ್ಟರ್ ಅನ್ನು ತುರ್ತಾಗಿ ಭೂ ಸ್ಪರ್ಶ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ಹೆಲಿಕಾಪ್ಟರ್ ರೈಡ್ ವೇಳೆ ಈ ಘಟನೆ ನಡೆದಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಭಾನುವಾರ ಬೆಳಗ್ಗೆ ಹೆಲಿಕಾಪ್ಟರ್ ಗಾಜಿಗೆ ಹಕ್ಕಿ ಬಡಿದಿದ್ದು, ಗಾಜು ಪುಡಿಯಾಗಿದೆ. ಹಕ್ಕಿಯ ರಕ್ತ ಪೈಲೆಟ್ ಮೇಲೆ ಚೆಲ್ಲಿದೆ. ಸಮಯ ಪ್ರಜ್ಞೆ ಮೆರದ ಪೈಲೆಟ್ ಸುರಕ್ಷಿತವಾಗಿ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಿದ್ದಾರೆ.

ಈ ಘಟನೆ ನಡೆಯುವಾಗ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರಿದ್ದರು, ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಅಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಪ್ರಯುಕ್ತ ಜಿಲ್ಲಾಡಳಿತ ಹೆಲಿಕಾಪ್ಟರ್ ಜಾಲಿ ರೈಡ್ ವ್ಯವಸ್ಥೆ ಮಾಡಿದೆ. ಪವನ್ ಹನ್ಸ್ ಕಂಪನಿಯ ಹೆಲಿಕಾಪ್ಟರ್ ಮೂಲಕ ಈ ಸೇವೆ ಒದಗಿಸಲಾಗುತ್ತಿದೆ. ಮೈಸೂರು ದಸರಾಕ್ಕೆ ಶನಿವಾರ ವಿದ್ಯುಕ್ತವಾದ ತೆರೆ ಬಿದ್ದಿದ್ದು, ಹೆಲಿಕಾಪ್ಟರ್ ಸೇವೆ ಇಂದು ಸಂಜೆ ಅಂತ್ಯಗೊಳ್ಳಲಿದೆ.












Click it and Unblock the Notifications