ನಿರಂತರ ಮಳೆ, ಇಂದು ಮೈಸೂರಿನ 4 ತಾಲ್ಲೂಕು ಶಾಲೆಗಳಿಗೆ ರಜೆ
ಮೈಸೂರು, ಆಗಸ್ಟ್ 28: ಭಾನುವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕು ಶಾಲೆಗಳಿಗೆ ಇಂದು (ಸೋಮವಾರ) ರಜೆ ಘೋಷಿಸಲಾಗಿದೆ.
ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮೈಸೂರು, ಹುಣಸೂರು, ಎಚ್.ಡಿ.ಕೋಟೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಿರುವುದಾಗಿ ಡಿಡಿಪಿಐ ವರ್ಧನ್ ತಿಳಿಸಿದ್ದಾರೆ.

ಸೋಮವಾರ ರಜೆ ಹಿನ್ನಲೆಯಲ್ಲಿ ಮುಂದಿನ ಶನಿವಾರ ಇಡೀ ದಿನ ಶಾಲೆ ನಡೆಯಲಿದೆ ಎಂದು ಹೇಳಿದರು.












Click it and Unblock the Notifications