Get Updates
Get notified of breaking news, exclusive insights, and must-see stories!

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ; ಡಾ.ಸಿ.ಎನ್.ಮಂಜುನಾಥ್ ಹೇಳುವುದೇನು?

ಮೈಸೂರು, ಸೆಪ್ಟೆಂಬರ್ 10: ಪ್ರಸ್ತುತ ಹೃದಯಸಂಬಂಧಿಗೆ ಕಾಯಿಲೆಗೆ ಭಾರತದಲ್ಲಿ ಶೇ.30 ರಷ್ಟು ಜನ ಮೃತಪಡುತ್ತಿದ್ದಾರೆ. ಉಳಿದಂತೆ ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್, ಸ್ಟ್ರೋಕ್ ಕೂಡ ಮಾನವನನ್ನು ಕಾಡುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ 15 ವರ್ಷಗಳಿಗಿಂತ ಮುಂಚಿತವಾಗಿಯೇ ಹೃದಯ ಸಂಬಂಧಿ ಕಾಯಿಲೆ ಭಾರತೀಯರಲ್ಲಿ ಕಾಡುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತರೂ ಆದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. 45 ವರ್ಷ ಕಡಿಮೆ ಇರುವ ಶೇ.8ರಷ್ಟು ಮಹಿಳೆಯರಿಗೆ ಹೃದಯಾಘಾತ ಆಗುತ್ತಿದೆ. ಸ್ಮೋಕಿಂಗ್, ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು.

ನಮ್ಮ ಸುತ್ತಮುತ್ತಲಿನ ವಾತಾವರಣ ಹಾಗೂ ಜೀವನಶೈಲಿ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಭಾರತದಲ್ಲಿ ವಾಯು ಮಾಲಿನ್ಯದಿಂದ 20 ಲಕ್ಷ ಜನ ನಾನಾ ಕಾಯಿಲೆಗೆ ತುತ್ತಾಗಿ ಮೃತ ಪಟ್ಟಿದ್ದಾರೆ. 45 ವರ್ಷದಿಂದ 60 ವರ್ಷದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಫ್ಯಾಮಿಲಿ ಹಿಸ್ಟರಿ ಇದ್ದರೆ ಎಚ್ಚರಿಕೆ ಇರಬೇಕು. ಆಗ್ಗಿಂದಾಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇನ್ನು ಜಿಮ್, ವ್ಯಾಯಾಮವನ್ನು ದೇಹ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಬೇಕು. ಒತ್ತಡ, ಭಾರದ ವ್ಯಾಯಾಮಗಳನ್ನು ಮಾಡುವ ಮುಂಚೆ ಮೊದಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ಕ್ರಮೇಣ ವ್ಯಾಯಾಮವನ್ನು ಹೆಚ್ಚಿಸಬೇಕು. ಹೆಚ್ಚು ಆಹಾರ ಸೇವನೆ ಮಾಡಿದ್ದೇನೆ ಎಂಬ ಕಾರಣಕ್ಕೆ ಒಮ್ಮೆಲೆ ಹೆಚ್ಚು ವ್ಯಾಯಾಮ ಮಾಡುವುದು ಅಪಾಯಕಾರಿ ಎಂದರು.

 ಸಂಶೋಧನೆ ಹಾಗೂ ಪ್ರಯೋಗಗಳು ನೆರವು ಅಗತ್ಯ

ಸಂಶೋಧನೆ ಹಾಗೂ ಪ್ರಯೋಗಗಳು ನೆರವು ಅಗತ್ಯ

ವಿಜ್ಞಾನ ಕ್ಷೇತ್ರದಲ್ಲಿ ನಿಯಮಿತವಾಗಿ ಸಂಶೋಧನೆ ಹಾಗೂ ಪ್ರಯೋಗಗಳು ನಡೆಯಬೇಕು. ಸಂಶೋಧನೆಗೆ ನಿಗದಿಪಡಿಸಿದ ಅನುದಾನ ಸರಕಾರದಿಂದ ಸಿಗುತ್ತಿಲ್ಲ. ಸರಕಾರ ಹೆಚ್ಚಿನ ನೆರವು ನೀಡಿದರೆ ಹಲವು ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. ಇದಕ್ಕಾಗಿ ಕಾರ್ಪೋರೇಟ್ ಹಾಗೂ ಇಂಡಸ್ಟ್ರಿ ಫಂಡ್‌ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಗುಣಮಟ್ಟದ ಜೀವನ ಸುಧಾರಿಸಬಹುದು ಎಂದು ಆಶಿಸಿದರು.

 ಹಳ್ಳಿಗಳಲ್ಲಿ ವೈದ್ಯರಿಗೆ ಪೂರಕ ವಾತಾವರಣವಿಲ್ಲ

ಹಳ್ಳಿಗಳಲ್ಲಿ ವೈದ್ಯರಿಗೆ ಪೂರಕ ವಾತಾವರಣವಿಲ್ಲ

ಕೇವಲ ಕಟ್ಟಡಗಳನ್ನು ಕಟ್ಟುವುದರಿಂದ ವೈದ್ಯಕೀಯ ವ್ಯವಸ್ಥೆ ಸುಧಾರಣೆಯಾಗದು. ವೈದ್ಯಕೀಯ ಕಾಲೇಜು, ಆಸ್ಪತ್ರೆ ಸ್ಥಾಪನೆಯ ಜತೆ ಮಾನವ ಸಂಪನ್ಮೂಲ, ಸಲಕರಣೆಗಳ ಖರೀದಿ ಸೇರಿದಂತೆ ಇನ್ನಿತರ ಕೆಲಸಗಳಿಗೆ ಹಣ ವ್ಯಯಿಸಬೇಕು. ಇವುಗಳ ಸ್ಥಾಪನೆಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆಯಬೇಕು. ಅದರಿಂದ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.

ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ಇಲ್ಲ. ಜಿಲ್ಲಾಸ್ಪತ್ರೆ- ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಮಾನವ ಸಂಪನ್ಮೂಲ ಭರ್ತಿಯಾದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಹಳ್ಳಿಗಳಲ್ಲಿ ವೈದ್ಯರಿಗೆ ಪೂರಕ ವಾತಾವರಣವಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಒತ್ತಡವೂ ಹೆಚ್ಚಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇನ್ಫೋಸಿಸ್ ಫೌಂಡೇಶನ್ ಜಯದೇವ ಸಂಸ್ಥೆಗೆ 350 ಹಾಸಿಗೆ ಸಾಮರ್ಥ್ಯದ ವಿಶ್ವದರ್ಜೆಯ ಕಟ್ಟಡ ಕಟ್ಟಿಸಿಕೊಟ್ಟಿದೆ. ಅದರಿಂದ ಆಸ್ಪತ್ರೆ ಸಾಮರ್ಥ್ಯ 1,000 ಹಾಸಿಗೆಗಳಿಗೆ ಹೆಚ್ಚಾಗಿದೆ. ಇಷ್ಟು ಸಾಮರ್ಥ್ಯದ ದೇಶದ ಮೊದಲ ಹೃದ್ರೋಗ ಸಂಸ್ಥೆ ಎಂಬ ಶ್ರೇಯ ರಾಜ್ಯ ಪಾತ್ರವಾಗಿದ್ದು, ಏಮ್ಸ್‌ಗಿಂತಲೂ ತಿಂಗಳಿಗೆ 3 ಸಾವಿರ ಮಂದಿ ಹೃದಯ ಸಂಬಂಧಿ ಶಸಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

 ಹೃದ್ರೋಗ ಸಂಸ್ಥೆಗಳು ಹೆಚ್ಚಾಗಬೇಕು

ಹೃದ್ರೋಗ ಸಂಸ್ಥೆಗಳು ಹೆಚ್ಚಾಗಬೇಕು

ಜಯದೇವ ಹೃದ್ರೋಗ ಸಂಸ್ಥೆಯು ರಾಜ್ಯದ ಎಲ್ಲಾ ಕಂದಾಯ ವಲಯ ಕೇಂದ್ರದಲ್ಲಿ ಇರಬೇಕು. ಮೈಸೂರು, ಬೆಂಗಳೂರು, ಗುಲ್ಬರ್ಗಾದಲ್ಲಿ ಸ್ಥಾಪಿಸಲಾಗಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸ್ಥಾಪಿಸುವ ಪ್ರಸ್ತಾವವಿತ್ತು. ಶೀಘ್ರವೇ ಹುಬ್ಬಳ್ಳಿಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದು ಮಂಜುನಾಥ್ ಹೇಳಿದರು.

 ಹೆಚ್ಚಾಗುತ್ತಿರುವ ಲೋನ್ಲಿ ಸಿಂಡ್ರೋಮ್

ಹೆಚ್ಚಾಗುತ್ತಿರುವ ಲೋನ್ಲಿ ಸಿಂಡ್ರೋಮ್

ವೈದ್ಯರು ನೀಡುವ ಚಿಕಿತ್ಸೆ ಕಾಯಿಲೆಗಿಂತ ಹೆಚ್ಚು ಸಮಸ್ಯೆ ತಂದೊಡ್ಡುವಂತಾಗಬಾರದು. ಅಗತ್ಯವಿದ್ದರೆ ಮಾತ್ರ ಅದರಲ್ಲಿಯೂ ರೋಗಿಗಳ ಆರ್ಥಿಕತೆಯನ್ನು ಆಧರಿಸಿ ಚಿಕಿತ್ಸೆ ನೀಡಬೇಕು. 30 ರಿಂದ 40 ಲಕ್ಷ ರೂ. ಬಿಲ್ ಮಾಡಿ ರೋಗಿಯನ್ನೂ ಬದುಕಿಸಲಾಗದೇ ಕೊನೆಗೆ ಸಂಬಂಧಿಕರನ್ನು ಆರ್ಥಿಕವಾಗಿ ಸಾಯುವಂತಹ ಸ್ಥಿತಿಗೆ ತರಬಾರದು ಎಂದು ತಿಳಿ ಹೇಳಿದರು.

ಇತ್ತೀಚೆಗೆ ಸ್ಕ್ರೀನ್ ಅಡಿಕ್ಷನ್, ಲೋನ್ಲಿ ಸಿಂಡ್ರೋಮ್ ಹೆಚ್ಚಾಗುತ್ತಿದೆ. ಇದಲ್ಲದೇ ಟೈಪ್ ಎ ಪರ್ಸನಾಲಿಟಿ ಹೊಂದಿರುವವರು ಹೆಚ್ಚಾಗುತ್ತಿದ್ದಾರೆ. ಅಂದರೆ ಯಾರನ್ನೂ ನಂಬದಿರುವುದು, ಬೇರೆಯವರ ಏಳಿಗೆಯನ್ನು ಸಹಿಸದಿರುವುದು, ವಿಚಿತ್ರ ಅಸಹನೆ, ಚಡಪಡಿಕೆಯಂತಹ ವರ್ತನೆ ಜನರಲ್ಲಿ ಹೆಚ್ಚಾಗಿ ಕಂಡುವರುತ್ತಿದೆ. ಈ ಎಲ್ಲಾ ಬದಲಾದ ಸಂದರ್ಭ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+