ಕುಮಾರಸ್ವಾಮಿಯಿಂದ ಒಕ್ಕಲಿಗ ಸಮಾಜಕ್ಕೆ ಕೆಟ್ಟ ಹೆಸರು: ತೇಜಸ್ವಿನಿ ರಮೇಶ್

ಸುತ್ತೂರು (ಮೈಸೂರು ಜಿಲ್ಲೆ), ಜನವರಿ 24: ಜೆಡಿಎಸ್ ಅಂದರೆ ಯಡಿಯೂರಪ್ಪ ಅವರಿಗೆ ತೊಂದರೆ ನೀಡುವ ಸಲುವಾಗಿಯೇ ಇರುವ ಪಕ್ಷ ಎಂದು ಬಿಜೆಪಿ ಮುಖಂಡರಾದ ತೇಜಸ್ವಿನಿ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಸುತ್ತೂರಿನಲ್ಲಿ ನಡೆ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಎಚ್.ಡಿ.ಕುಮಾರಸ್ವಾಮಿ ಅವರಿಂದ ಒಕ್ಕಲಿಗ ಸಮಾಜಕ್ಕೆ ಕೆಟ್ಟ ಹೆಸರು. ಕುಮಾರಸ್ವಾಮಿ ಅವರು ತಪ್ಪಿ ಒಕ್ಕಲಿಗ ಸಮಾಜದಲ್ಲಿ ಹುಟ್ಟಿದ್ದಾರೆ. ಒಕ್ಕಲಿಗರು ಅಂದರೆ ನಾಲಗೆ ಉಳಿಸಿಕೊಳ್ಳುವವರು. ಆದರೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ಮಾತು ತಪ್ಪಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು ತೇಜಸ್ವಿನಿ.

ಈ ಹಿಂದೆ ಬಿಜೆಪಿ ಜತೆ ಸೇರಿ ಜೆಡಿಎಸ್ ಸರಕಾರ ರಚನೆ ಮಾಡಿತ್ತು. ಬಾಕಿಯಿದ್ದ ನಲವತ್ತು ತಿಂಗಳ ಅಧಿಕಾರಾವಧಿಯಲ್ಲಿ ಇಪ್ಪತ್ತು ತಿಂಗಳು ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಬಾಕಿ ಇಪ್ಪತ್ತು ತಿಂಗಳು ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿ ಎಂದು ಮಾತುಕತೆ ಆಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ಆ ಸರಕಾರ ಬಿದ್ದುಹೋಗಿತ್ತು.

HDK spoiled Vokkaliga community pride, alleged Tejaswini Ramesh

ಆ ಸಂದರ್ಭದ ನಂತರ ಜೆಡಿಎಸ್ ಪಕ್ಷವನ್ನು ಹಾಗೂ ಕುಮಾರಸ್ವಾಮಿ ಅವರನ್ನು ವಚನಭ್ರಷ್ಟರು ಎಂದು ಆರೋಪ ಮಾಡುತ್ತಿದೆ ಬಿಜೆಪಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+