ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿಯ ದಸರೆಯಲ್ಲಿ ಭಾಗವಹಿಸಲಿದೆ 42 ಸ್ತಬ್ದ ಚಿತ್ರಗಳು

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 7 : ನಾಡಹಬ್ಬ ದಸರಾ ಅಂಗವಾಗಿ ನಗರದ 20 ಪ್ರಮುಖ ರಸ್ತೆಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ . ಈ ಕುರಿತಾಗಿ ಮಾಹಿತಿ ನೀಡಿದ ಡಾ ಹೆಚ್. ಸಿ . ಮಹದೇವಪ್ಪ, ನಗರದ ಪ್ರಮುಖ 20 ವರ್ಷಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ಬಾರಿ ದಸರಾ ಅಂಬಾರಿ ಅಶೋಕ ಸ್ತಂಭ ಇಂಡಿಯಾ ಗೇಟ್, ಕೆಆರ್ಎಸ್ ಅಣೆಕಟ್ಟೆ , ಕಲ್ಲಿನ ರಥ, ಬೇಲೂರಿನ ದರ್ಪಣ, ಸುಂದರಿ ಶಿಲಾ ಬಾಲಿಕೆ ಪ್ರತಿಕೃತಿಗಳನ್ನು ವಿದ್ಯುದ್ದೀಪಗಳಿಂದ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ .

ಹೆಚ್ಚು ಎಲ್ಇಡಿ ಬಲ್ಬ್ ಬಳಕೆ ಮಾಡುತ್ತಿರುವುದರಿಂದ ಹತ್ತನೇ ಒಂದು ಭಾಗದಷ್ಟು ವಿದ್ಯುತ್ ಬಳಕೆಯಾಗುತ್ತಿದೆ . ದಸರಾ ವಸ್ತು ಪ್ರದರ್ಶನ ಮುಖ್ಯ ದ್ವಾರದ ಬಳಿ 3 ಡಿ ಪರದೆ ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈ ಬಾರಿಯ ದಸರಾ ಮಹೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

HC Mahadevappa organises a meeting in Mysuru on Dasara preparation.

ಚಾಮುಂಡೇಶ್ವರಿ ದೇವಾಲಯ ಪ್ರವೇಶ ಹಾಗೂ ಇನ್ನಿತರ ಸೇವೆಗಳಿಗಾಗಿ ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಇದೇ ವೇಳೆ ಲೋಕೋಪಯೋಗಿ ಸಚಿವ ಮಹದೇವಪ್ಪ ಉದ್ಘಾಟಿಸಿದರು ಇನ್ನು ದಸರಾ ಕವಿಗೋಷ್ಠಿ ಕುರಿತು ಮಾತನಾಡಿದ ಅವರು, ಈ ಬಾರಿ ಕವಿಗೋಷ್ಠಿಯಲ್ಲಿ ಒಂದು ಸಾಹಿತ್ಯವನ್ನು ಸಹ ಪರಿಚಯಿಸಲಾಗುವುದು. ಇದಕ್ಕಾಗಿ ಒಂದು ದಿನ ಉರ್ದು ಮೈರ ನಡೆಸಲಾಗುವುದು ಎಂದು ತಿಳಿಸಿದರು.

ಜಂಬೂ ಸವಾರಿಯಲ್ಲಿ 42 ಸ್ತಬ್ದ ಚಿತ್ರ :
ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 42 ಸ್ತಬ್ಧಚಿತ್ರಗಳು ಭಾಗವಹಿಸಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಇದೇ ವೇಳೆ ತಿಳಿಸಿದ್ದಾರೆ ಈಗಾಗಲೇ ಮೂವತ್ತೈದು ಸ್ತಬ್ಧ ಚಿತ್ರಗಳನ್ನು ಅಂತಿಮಗೊಳಿಸಲಾಗಿದ್ದು 30 ಜಿಲ್ಲಾ ಪಂಚಾಯ್ತಿಗಳಿಂದ ತಲಾ ಒಂದೊಂದು ಸ್ತಬ್ಧ ಚಿತ್ರಗಳು , ರಾಜ್ಯ ವಲಯದಿಂದ ಕೌಶಲ ಕರ್ನಾಟಕ, ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ , ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತಲಾ ಒಂದೊಂದು ಸ್ತಬ್ಧಚಿತ್ರಗಳು ಭಾಗವಹಿಸಲಿವೆ ಎಂದರು.

HC Mahadevappa organises a meeting in Mysuru on Dasara preparation.

ಸೆಪ್ಟೆಂಬರ್ 11ರಿಂದ ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸ್ತಬ್ಧ ಚಿತ್ರಗಳ ಕೆಲಸ ಪ್ರಾರಂಭಿಸಲಾಗುತ್ತಿದೆ. 25 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ತಬ್ಧ ಚಿತ್ರಗಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು. 28 ರಂದು ಸ್ತಬ್ದಚಿತ್ರಗಳ ಪೂರ್ವಭಾವಿ ಮೆರವಣಿಗೆ ನಡೆಸಲಾಗುವುದು . 30ರಂದು ನಡೆಯುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ತಯಾರಿಸುವ ಎಲ್ಲ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು .
ಇದೇ ವೇಳೆ ಅಗ್ನಿ ದುರಂತಗಳು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಅದು ಸ್ತಬ್ದಚಿತ್ರಗಳ ಹಿಂದೆ ಒಂದೊಂದು ಅಗ್ನಿಶಾಮಕ ವಾಹನ ನಿಯೋಜಿಸಲಾಗುವುದುಎಂಬ ಮಾಹಿತಿ ನೀಡಿದರು.

ಸೆಪ್ಟೆಂಬರ್ 12 ರಿಂದ ಹದಿನೆಂಟು ರವರೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ನಡೆಯಲಿದ್ದು, ನಟಿ ಕಾರುಣ್ಯ ರಾಮ್ ಅವರು ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. 128 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ . ಇದರಲ್ಲಿ ಆಯ್ಕೆಯಾಗುವ ಅತ್ಯುತ್ತಮ ತಂಡಗಳು ಯುವ ದಸರೆಯಲ್ಲಿ ಭಾಗವಹಿಸಲಿವೆ.

English summary
The Mysuru district incharge H.C.Mahadevappa attended a meeting in Mysuru on Sep 9th. The minister with Mysuru DC Randeep discussed so many issues in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X