• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವರಾಜು ಅರಸು ಬೆನ್ನಿಗೆ ಚೂರಿ ಹಾಕಿದ್ದ ವಿಶ್ವನಾಥ್: ಸಿದ್ದರಾಮಯ್ಯ

|

ಹುಣಸೂರು, ಡಿಸೆಂಬರ್ 03: 'ಎಚ್.ವಿಶ್ವನಾಥ್ ದೇವರಾಜ ಅರಸು ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದರು. ಆದರೆ ಈಗ 'ನಾನು ಅರಸು ಶಿಷ್ಯ' ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದರು.

ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ, ಎಚ್.ವಿಶ್ವನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜೆಡಿಎಸ್ ನವರೆಲ್ಲ ಕಾಂಗ್ರೆಸ್ ಗೆ ಮತ ಹಾಕಿ ಎಂದಿದ್ದೇಕೆ ಸಿದ್ದು?ಜೆಡಿಎಸ್ ನವರೆಲ್ಲ ಕಾಂಗ್ರೆಸ್ ಗೆ ಮತ ಹಾಕಿ ಎಂದಿದ್ದೇಕೆ ಸಿದ್ದು?

ಪ್ರಚಾರಕ್ಕೂ ಮುನ್ನಾ ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿದ್ದರಾಮಯ್ಯ, 'ಪಕ್ಷಾಂತರ ನಿಷೇಧ ಕಾಯ್ದೆ ಅಡಿ, ಸಂವಿಧಾನಾತ್ಮಕವಾಗಿ ರಮೇಶ್ ಕುಮಾರ್ ಅವರು ವಿಶ್ವನಾಥ್ ಅನ್ನು ಅನರ್ಹ ಮಾಡಿದ್ದಾರೆ. ಜನತಾ ನ್ಯಾಯಾಲಯದಲ್ಲಿಯೂ ವಿಶ್ವನಾಥ್ ನಾಲಾಯಕ್ ಎಂದು ತೀರ್ಮಾನ ಆಗಬೇಕು' ಎಂದು ಸಿದ್ದರಾಮಯ್ಯ ಗುಡುಗಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ಎಚ್.ವಿಶ್ವನಾಥ್ ಜೆಡಿಎಸ್‌ ನಿಂದ ಗೆದ್ದು ನಂತರ ಆ ಪಕ್ಷಕ್ಕೇ ಬೆನ್ನಿಗೆ ಚೂರಿ ಹಾಕಿದರು. ಟಿಕೆಟ್ ನೀಡಿದ ಪಕ್ಷಕ್ಕೆ ಮೋಸ ಮಾಡಿ, ಪಲಾಯನ ಮಾಡಿದ್ದಾರೆ' ಎಂದರು.

'ನಿಮಗೆ (ಜೆಡಿಎಸ್‌ ನವರಿಗೆ) ಮೋಸ ಮಾಡಿದ ಎಚ್‌.ವಿಶ್ವನಾಥ್‌ ಗೆ ಪಾಠ ಕಲಿಸುವುದು, ಅವರನ್ನು ಸೋಲಿಸುವುದು ನಿಮ್ಮ ಆಸೆಯಾಗಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಜೆಡಿಎಸ್‌ ನವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದರು.

English summary
Former CM Siddaramaiah said, H Vishwanath back stabbed Devraj Urs. But he is now saying that he is Devraj Urs follower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X