ಪಂಚಾಯತ್ ಆಡಳಿತ ಸಮಿತಿ ರಚನೆಗೆ ದೇವೇಗೌಡರ ಆಕ್ಷೇಪ
ಮೈಸೂರು, ಮೇ 28: ಗ್ರಾಮ ಪಂಚಾಯತಿ ಗಳಿಗೆ ಆಡಳಿತ ಸಮಿತಿ ರಚಿಸಿದರೆ ಪ್ರಜಾಪ್ರಭುತ್ವದ ಆಶಯವೇ ಬುಡಮೇಲಾಗುತ್ತದೆ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
Recommended Video
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಾಯತಿಗಳಿಗೆ ಸಮಿತಿ ರಚನೆ ಮಾಡುವುದರಿಂದ ಬಿಜೆಪಿ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುವುದಿಲ್ಲ, ಗ್ರಾಮ ಸ್ವರಾಜ್ ದೃಷ್ಠಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಯಾವುದೇ ಒಂದು ಪಕ್ಷದ ಪಂಚಾಯತ್ ಆಗದೆ, ಸರ್ವರ ಪಂಚಾಯತ್ ಆಗಬೇಕು. ಆಡಳಿತ ಸಮಿತಿ ರಚಿಸಿದರೆ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ರಿಯಲ್ ಎಸ್ಟೇಟ್‌ನವರು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಪಂಚಾಯತ್ ಪ್ರವೇಶ ಮಾಡುತ್ತಾರೆ ಎಂದು ತಿಳಿಸಿದರು.

ಪಂಚಾಯತ್ ಚುನಾವಣೆಯನ್ನು ಯಾವಾಗಲಾದರೂ ಮಾಡಿ, ಈಗಿರುವ ಸದಸ್ಯರನ್ನೇ ಮುಂದುವರೆಸಿ. ಸಿದ್ದರಾಮಯ್ಯನವರನ್ನು ಇದೇ ಕಾರಣಕ್ಕಾಗಿ ಭೇಟಿ ಮಾಡಿದ್ದೇನೆ. ಒಂದು ವೇಳೆ ಆಡಳಿತ ಸಮಿತಿ ರಚಿಸಿದರೆ ಪಂಚಾಯತ್ ಮಟ್ಟದಿಂದ ಹೋರಾಟ ಶುರುವಾಗುತ್ತದೆ ಎಂದು ಎಚ್ಚರಿಸಿದರು.
ಇಂದು ದೇಶದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ಉಳಿದಿರುವುದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾತ್ರ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಮೊದಲು ವಿಧಾನಸಭೆಗೆ ಟಿಕೆಟ್ ಕೊಟ್ಟವರು ದೇವೇಗೌಡರು. ಅವರು ರಾಷ್ಟ್ರ ರಾಜಕಾರಣದಲ್ಲಿ ಇರಬೇಕು. ಅವರು ರಾಜ್ಯಸಭೆಗೆ ಸ್ಪರ್ಧೆ ಮಾಡಿದರೆ ಫಸ್ಟ್ ಓಟು ನಾನೇ ಹೋಗಿ ಹಾಕ್ತೀನಿ ಎಂದರು.












Click it and Unblock the Notifications