ಮೈಸೂರು ಹೊರವಲಯದಲ್ಲಿ ಕಾಡಾನೆಗಳು ಪ್ರತ್ಯಕ್ಷ

ಮೈಸೂರು, ಡಿ. 2 : ಆನೆ ಮತ್ತು ಮಾನವನ ನಡುವಿನ ಸಂಘರ್ಷ ಎಲ್ಲೆ ಮೀರಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ 7-8 ಆನೆಗಳು ಬೀಡು ಬಿಟ್ಟಿವೆ. ನಗರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದಸರಾ ಆನೆಗಳನ್ನು ಕಾರ್ಯಾಚರಣೆಗಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಮೈಸೂರು ರಿಂಗ್ ರಸ್ತೆಯಿಂದ ಎರಡು ಕಿ.ಮೀ.ದೂರವಿರುವ ಎಚ್.ಡಿ.ಕೋಟೆ ರಸ್ತೆಯಲ್ಲಿನ ಪಬ್ಲಿಕ್ ಶಾಲೆ ಹಿಂಭಾಗದಲ್ಲಿರುವ ಕಬೀರ್ ಎಂಬುವವರಿಗೆ ಸೇರಿದ ಚಿತ್ರವನ ರೆಸಾರ್ಟ್ ತೋಟದಲ್ಲಿ 7-8 ಆನೆಗಳು ಕಾಣಿಸಿಕೊಂಡಿವೆ. ಕಾಡಾನೆಗಳನ್ನು ಕಂಡು ಗಾಬರಿಯಾದ ಕಬೀರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

elephant

ಡಿಎಫ್‌ಒ ಸೇರಿದಂತೆ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಆನೆಗಳು ಮೈಸೂರು ನಗರದತ್ತ ಆಗಮಿಸಿದಂತೆ ನಾಕಾ ಬಂದಿ ವ್ಯವಸ್ಥೆ ಮಾಡಿದ್ದಾರೆ. ಆನೆಯ ಹಿಂಡಿನೊಂದಿಗೆ ಎರಡು ಮರಿಗಳು ಇರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಆದ್ದರಿಂದ ಜಾಗೃತವಾಗಿ ಕಾರ್ಯಚರಣೆ ನಡೆಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. (ಮೈಸೂರು ರೌಡಿ ಆನೆಗಳ ಪುಂಡಾಟಿಕೆ)

ಮೂರು ವರ್ಷಗಳ ಹಿಂದೆ ಮೈಸೂರು ನಗರಕ್ಕೆ ದಾರಿ ತಪ್ಪಿ ಬಂದಿದ್ದ ಒಂಟಿ ಸಲಗವೊಂದು ಒಬ್ಬನನ್ನು ಬಲಿ ಪಡೆದಿತ್ತು. ಆದ್ದರಿಂದ ಹೊರವಲಯದಲ್ಲಿರುವ ಆನೆಗಳು ನಗರದತ್ತ ಧಾವಿಸದಂತೆ ಅಗತ್ಯ ಎಚ್ಚರಿಕೆಯನ್ನು ಸಿಬ್ಬಂದಿ ಕೈಗೊಂಡಿದ್ದಾರೆ. ಸಂಜೆಯವರೆಗೂ ಕಾದು ನಂತರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಸೂಚನೆ : ತಲಕಾಡು ಪಂಚಲಿಂಗ ದರ್ಶನ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮೈಸೂರು ಹೊರವಲಯದಲ್ಲಿ ಆನೆಗಳು ಬೀಡು ಬಿಟ್ಟಿರುವ ಮಾಹಿತಿ ಪಡೆದಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಅವರು, ನಗರದೊಳಕ್ಕೆ ಆನೆಗಳು ಬರದಂತೆ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಬೇಕು ಎಂದು ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+