ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಆತಿಥ್ಯದ ಮನೆಗೆ ವಿದೇಶಿಗರೇ ಅತಿಥಿಗಳು!

By ಬಿ. ಎಂ. ಲವಕುಮಾರ್
|
Google Oneindia Kannada News

ದೂರದಿಂದ ಬರುವ ವಿದೇಶಿಗರಿಗೆ ಮೈಸೂರಿನ ವಿಶೇಷ ತಿನಿಸುಗಳನ್ನು ಉಣಬಡಿಸುವುದು ಮಾತ್ರವಲ್ಲದೆ ಸಂಪ್ರದಾಯ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕೆಲಸವನ್ನು ಮೈಸೂರು ನಗರದ ಗೋಕುಲಂ ನಿವಾಸಿ ಶಶಿಕಲಾ ಮತ್ತು ಅಶೋಕ್ ದಂಪತಿ ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.

ಅರಮನೆ ನಗರಿ, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ಹಲವು ಹಿರಿಮೆಗಳನ್ನು ಹೊಂದಿರುವ ಮೈಸೂರು ಸದಾ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತದೆ. ಅದರಲ್ಲೂ ದಸರಾ ಸಮಯದಲ್ಲಂತು ಪ್ರವಾಸಿಗರ ದಂಡೇ ನೆರೆಯುತ್ತದೆ.

 ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ! ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ!

ಮೈಸೂರನ್ನು ದೇಶಿಯರು ಮಾತ್ರವಲ್ಲದೆ, ವಿದೇಶಿಯರು ಇಷ್ಟಪಡುತ್ತಾರೆ. ಹೊರದೇಶಗಳಿಂದ ಪ್ರವಾಸ ಬರುವ ವಿದೇಶಿಗರು. ಇಲ್ಲಿನ ಪ್ರವಾಸಿ ತಾಣಗಳನ್ನು ಮಾತ್ರವಲ್ಲದೇ, ಊಟ, ತಿಂಡಿ, ತಿನಿಸು, ಕಲೆ ಸಂಸ್ಕೃತಿಯ ಬಗ್ಗೆಯೂ ತಿಳಿದು ಕೊಳ್ಳುವ ಆಸಕ್ತಿ ತೋರುತ್ತಾರೆ. ಜತೆಗೆ ಮೈಸೂರಿನ ತಿನಿಸುಗಳ ರುಚಿ ನೋಡುವ ಪ್ರಯತ್ನ ಮಾಡುತ್ತಾರೆ.

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್ ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿ ತಮಗೆ ಇಷ್ಟಬಂದುದನ್ನು ಸೇವಿಸಿ, ಪ್ರವಾಸಿ ತಾಣಗಳನ್ನು ವೀಕ್ಷಿಸಿ ತಮ್ಮ ದೇಶದತ್ತ ಹಿಂತಿರುಗುವ ವಿದೇಶಿ ಪ್ರವಾಸಿಗರ ದೊಡ್ಡ ದಂಡೇ ಇದೆ. ಆದರೆ ಇವರ ನಡುವೆಯೂ ಕೇವಲ ಪ್ರವಾಸಿ ತಾಣಗಳನ್ನಷ್ಟೆ ವೀಕ್ಷಿಸುವುದಲ್ಲದೆ, ತಿನಿಸು, ಸಂಸ್ಕೃತಿ, ಇತಿಹಾಸಗಳ ಬಗ್ಗೆ ಅರಿಯುವ ಕುತೂಹಲದಿಂದ ಬರುವ ವಿದೇಶಿ ಪ್ರವಾಸಿಗರು ಇಲ್ಲದಿಲ್ಲ.

ಚಾಮರಾಜನಗರ ದಸರಾ 2022: ಅದ್ಧೂರಿ ಆಚರಣೆಗೆ ಸಚಿವ ವಿ.ಸೋಮಣ್ಣ ಸೂಚನೆ ಚಾಮರಾಜನಗರ ದಸರಾ 2022: ಅದ್ಧೂರಿ ಆಚರಣೆಗೆ ಸಚಿವ ವಿ.ಸೋಮಣ್ಣ ಸೂಚನೆ

ಆತಿಥ್ಯ ನೀಡುವ ಶಶಿಕಲಾ ದಂಪತಿ

ಆತಿಥ್ಯ ನೀಡುವ ಶಶಿಕಲಾ ದಂಪತಿ

ಅವರೆಲ್ಲರೂ ಮೊದಲೆಲ್ಲ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಆದರೆ ಈಗ ಹಾಗಿಲ್ಲ. ಖುಷಿಯಿಂದ ಥೇಟ್ ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂಬ ಭಾವನೆಯಲ್ಲಿ ಒಂದೊಳ್ಳೆಯ ನೆನಪುಗಳನ್ನು ಹೊತ್ತುಕೊಂಡು ತಮ್ಮೂರಿಗೆ ಪಯಣ ಬೆಳೆಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಶಶಿಕಲಾ ದಂಪತಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ವಿದೇಶಿ ಪ್ರವಾಸಿಗರ ಕೊರಗನ್ನು ನೀಗಿಸಿ ಅತಿಥಿಗಳಿಗೆ ಒಂದೊಳ್ಳೆಯ ಸಂಸ್ಕಾರದ ವಾತಾವರಣವನ್ನು ಕಟ್ಟಿಕೊಡುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಸದ್ದಿಲ್ಲದೆ ಶಶಿಕಲಾ ದಂಪತಿ ಮಾಡುತ್ತಾ ಬಂದಿದ್ದಾರೆ. ಭಾರತದ ಸಂಸ್ಕೃತಿ ಅದರಲ್ಲೂ ಮೈಸೂರಿನ ಸಂಸ್ಕೃತಿ ಮತ್ತು ಇಲ್ಲಿನ ತಿನಿಸುಗಳನ್ನು ಇಷ್ಟಪಡುವ ವಿದೇಶಿಗರಿಗೆ ಅದನ್ನು ಮಾಡಿ ಬಡಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಅಕ್ಕರೆಯ ಅತಿಥ್ಯ ಲಭ್ಯ

ಅಕ್ಕರೆಯ ಅತಿಥ್ಯ ಲಭ್ಯ

ವಿದೇಶಿಗರೇ ಇವರ ಮನೆಯ ಖಾಯಂ ಅತಿಥಿಗಳಾಗಿರುವುದು ಮತ್ತೊಂದು ವಿಶೇಷವಾಗಿದೆ. ಯಾರೇ ಆಗಲಿ ಶಶಿಕಲಾ ಅವರ ಮನೆಗೆ ತೆರಳಿದ್ದೇ ಆದರೆ ಮೈಸೂರು ಪಾಕದಿಂದ ಆರಂಭವಾಗಿ (ಮೈಸೂರು ವೀಳ್ಯದೆಲೆ) ತಾಂಬೂಲದವರೆಗೆ ವಿವಿಧ ಬಗೆಯ ತಿನಿಸುಗಳನ್ನು ಬಾಳೆಲೆಯಲ್ಲಿ ಸವಿಯುವ ಅವಕಾಶದೊಂದಿಗೆ ಅಕ್ಕರೆಯ ಅತಿಥ್ಯ ಲಭ್ಯವಾಗುತ್ತದೆ. ಹೀಗಾಗಿ ಒಮ್ಮೆ ಬಂದವರು ಮತ್ತೊಮ್ಮೆ ಇಲ್ಲಿಗೆ ಬರಲು ಹಾತೊರೆಯುತ್ತಾರೆ. ಜತೆಗೆ ವಿಭಿನ್ನ ಅನುಭವದ, ಆತ್ಮೀಯ ಸಂಬಂಧದ ನೆನಪುಗಳ ಬುತ್ತಿ ಹೊತ್ತು ನಡೆಯುತ್ತಾರೆ.

ಶಶಿಕಲಾ ಅವರಿಗೆ ಇಂತಹವೊಂದು ಆಲೋಚನೆ ಬಂದಿರುವುದು ಕೂಡ ಆಕಸ್ಮಿಕ ಸಂದರ್ಭದಲ್ಲಿ ಎನ್ನುವುದು ಅಷ್ಟೇ ಸತ್ಯ. ಅದು ಹಲವು ವರ್ಷಗಳ ಹಿಂದಿನ ಕಥೆ. ಶಶಿಕಲಾ ಅವರ ಪತಿ ಅಶೋಕ್ ಅವರು ಟ್ರಾವೆಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ವಿದೇಶಿ ಪ್ರವಾಸಿಗರ ಸಂಪರ್ಕವೂ ಇತ್ತು. ಒಮ್ಮೆ ಮೈಸೂರಿಗೆ ಬಂದ ವಿದೇಶಿ ಪ್ರವಾಸಿ ದಂಪತಿ ನಗರವನ್ನೆಲ್ಲಾ ಸುತ್ತಾಡಿ ಇಲ್ಲಿನ ಪಾರಂಪರಿಕ ಕಟ್ಟಡ, ಪ್ರವಾಸಿ ತಾಣಗಳನ್ನೆಲ್ಲಾ ವೀಕ್ಷಿಸಿದ ಬಳಿಕ ಅವರಿಗೆ ಇಲ್ಲಿನ ಸಾಂಪ್ರದಾಯಿಕ ತಿನಿಸುಗಳನ್ನು ಸವಿಯುವ ಮನಸ್ಸಾಯಿತು.

ಆದರೆ ಹೋಟೆಲ್ ಗೆ ಹೋದವರಿಗೆ ಅಲ್ಲಿ ಕೂಡ ಮೈಸೂರಿನ ಸಾಂಪ್ರದಾಯಿಕ ತಿನಿಸುಗಳು ಕಾಣದಿದ್ದಾಗ ಬೇಸರವಾಯಿತು. ಆದರೆ ಇಲ್ಲಿಯ ತಿನಿಸುಗಳ ಬಗ್ಗೆ ಓದಿ ತಿಳಿದಿದ್ದ ಅವರಿಗೆ ಅದನ್ನೊಮ್ಮೆ ಸವಿಯಲೇ ಬೇಕೆಂಬ ಹಂಬಲ ಮಾತ್ರ ಕಡಿಮೆಯಾಗಿರಲಿಲ್ಲ. ಆಗ ಅವರು ತಮ್ಮ ಬಯಕೆಯನ್ನು ಅಶೋಕ್ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೆ ತಮಗೆ ಊಟದ ವ್ಯವಸ್ಥೆ ಮಾಡಿಕೊಡುವಂತೆ ದುಂಬಾಲು ಬಿದ್ದರು.

ವಿದೇಶಿ ದಂಪತಿಗೆ ಬಾಳೆಲೆ ಊಟ

ವಿದೇಶಿ ದಂಪತಿಗೆ ಬಾಳೆಲೆ ಊಟ

ಆಗ ಅನ್ಯ ಮಾರ್ಗವಿಲ್ಲದೆ ಅಶೋಕ್ ಅವರು ತಮ್ಮ ಮನೆಗೆ ಕರೆದೊಯ್ದು ಪತ್ನಿ ಶಶಿಕಲಾರವರ ಮೂಲಕ ಮೈಸೂರಿನ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ ಬಾಳೆಲೆಯಲ್ಲಿ ಬಡಿಸಿದರು. ಮೊದಲ ಬಾರಿಗೆ ಮೈಸೂರು ಶೈಲಿಯ ಉಪ್ಪಿನಕಾಯಿ, ಚಟ್ನಿ, ಪುಳಿಯೋಗರೆ, ಪಲ್ಯ, ಚಪಾತಿ. ಮಜ್ಜಿಗೆ ಹುಳಿ, ಬೇಳೆ ತೊವ್ವೆ, ಅನ್ನ ಸಾಂಬಾರ್, ಮೈಸೂರು ಪಾಕ್, ಹೋಳಿಗೆ, ಮೈಸೂರು ವೀಳ್ಯದೆಲೆ ಹೀಗೆ ವಿವಿಧ ತಿನಿಸುಗಳನ್ನು ಬಾಳೆಲೆಯಲ್ಲಿ ಸವಿದ ಅವರಿಗೆ ಖುಷಿಯೋ ಖುಷಿ. ಇತ್ತ ಅಶೋಕ್ ಹಾಗೂ ಶಶಿಕಲಾ ದಂಪತಿಗಳ ಮುಖದಲ್ಲಿ ತೃಪ್ತಿ ಅಲೆಯಾಡಿತ್ತು.

ವಿದೇಶಕ್ಕೆ ಪಸರಿಸಿದ ಆತಿಥ್ಯ

ವಿದೇಶಕ್ಕೆ ಪಸರಿಸಿದ ಆತಿಥ್ಯ

ಹೀಗೆ ಆರಂಭವಾದ ಅತಿಥ್ಯದ ಮನೆಗೆ ಇಲ್ಲಿಯವರೆಗೆ ಸಾವಿರಾರು ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿ ಆತಿಥ‍್ಯ ಸ್ವೀಕರಿಸಿ ಹೋಗಿದ್ದಾರೆ ಬಾಳೆ ಎಲೆಯಲ್ಲಿ ಊಟ ಮಾಡುವುದು ವಿದೇಶಿಗರಿಗೆ ಹೊಸ ಅನುಭವ ಹೀಗಾಗಿ ಅದೆಲ್ಲವನ್ನು ಹೇಳಿಕೊಡುವ ಶಶಿಕಲಾ ಅವರಿಗೆ ಹಲವು ರೀತಿಯ ಅನುಭವಗಳಾಗಿವೆ.

ಇಲ್ಲಿನ ಸೀರೆಯ ಬಗ್ಗೆ ಆಸಕ್ತಿ ತಾಳುವ ವಿದೇಶಿ ಮಹಿಳೆಯರು ಸೀರೆಯುಟ್ಟು ಸಂಭ್ರಮಿಸುತ್ತಾರೆ. ಒಟ್ಟಾರೆಯಾಗಿ ವಿದೇಶಿಗರೇ ಅತಿಥಿಗಳಾಗಿರುವ ಈ ಆತಿಥ‍್ಯದ ಮನೆಯಿಂದ ವಿದೇಶಗಳಿಗೆ ಮೈಸೂರಿನ ಸಂಸ್ಕೃತಿ ಸಂಪ್ರದಾಯ ಪಸರಿಸುತ್ತಿರುವುದಂತು ಸತ್ಯ.

English summary
Mysuru city Gokulam couple Shashikala and Ashok serving traditional Mysuru food for foreign tourist during dasara. Foreign tourist enjoying food and appreciated the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X