Chunchanakatte waterfall: ಚುಂಚನಕಟ್ಟೆಯ ನೀರಿನಲ್ಲಿ ಸ್ನಾನ ಮಾಡಿದ್ದ ಸೀತಾ ಮಾತೆ....
ಚುಂಚನಕಟ್ಟೆ ಜಲಪಾತ... ಈ ಜಲಪಾತದ ಬಗ್ಗೆ ನೀವು ಕೇಳಿರುತ್ತೀರಿ. ಜೊತೆಗೆ ಇದಕ್ಕೆ ಭೇಟಿ ಕೂಡ ನೀಡಿರುತ್ತೀರಿ. ಮೈಸೂರು, ಹಾಸನ, ಬೆಂಗಳೂರಿನಲ್ಲಿ ವಾಸವಾಗಿರುವವರಿಗೆ ಈ ಜಲಪಾತ ತುಂಬಾ ಹತ್ತಿರ. ವಾರಾಂತ್ಯ ಹಾಗೂ ವಿಶೇಷ ರಜೆ ದಿನಗಳಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವವರು ಹೆಚ್ಚು. ಈ ಜಲಪಾತದ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳಿವೆ. ಅವು ಶ್ರೀರಾಮನಿಗೆ ಸಂಬಂಧಿಸಿದ ವಿಚಾರಗಳು.
ಹೌದು.. ಈ ಜಲಪಾತಕ್ಕೂ ಶ್ರೀರಾಮನಿಗೂ ಒಂದು ಸಂಬಂಧವಿದೆ. ಅದನ್ನು ತಿಳಿದರೆ ಈ ಜಲಪಾತಕ್ಕೆ ಭೇಟಿ ನೀಡುವ ಮನಸ್ಸಾಗದೇ ಇರದು. ಈ ನೈಸರ್ಗಿಕ ವಿಸ್ಮಯ ಸ್ಥಳವು ಶ್ರೀಮಂತ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸುಂದರವಾದ ಭೂದೃಶ್ಯದಲ್ಲಿ ನೆಲೆಗೊಂಡಿದೆ ಈ ಚುಂಚನಕಟ್ಟೆ ಜಲಪಾತ. ನೋಡುಗರ ಮನಸೂರೆಗೊಳಿಸುವ ಈ ಸುಂದರ ಜಲಪಾತವಿರುವ ಸ್ಥಳಕ್ಕೆ ಶ್ರೀರಾಮನು ಆಗಮಿಸಿದ್ದನೆನ್ನಲಾಗುತ್ತದೆ.

ಸ್ಥಳೀಯ ಪುರಾಣಗಳ ಪ್ರಕಾರ ಈ ಜಲಪಾತಕ್ಕೆ ಶ್ರೀರಾಮ ಭೇಟಿ ನೀಡಿದ್ದನು. ರಾಮ, ಲಕ್ಷ್ಮಣ ಮತ್ತು ಸೀತೆ ಮೂವರ ವಿಶ್ರಾಂತಿ ಸ್ಥಳ ಇದಾಗಿತ್ತು. ಪುಣ್ಯ ಮತ್ತು ಭಕ್ತಿಯ ಅಧಿದೇವತೆಯಾದ ಸೀತೆ ಚುಂಚನಕಟ್ಟೆಯ ನೀರಿನಲ್ಲಿ ಸ್ನಾನ ಮಾಡಿ, ಆ ಸ್ಥಳದ ಮೇಲೆ ಅಳಿಸಲಾಗದ ಗುರುತು ಹಾಕಿದಳು ಎಂದು ಪುರಾಣಗಳು ಹೇಳುತ್ತವೆ. ನೀರಿನ ಹಳದಿ ಬಣ್ಣವು ಈ ದೈವಿಕ ಘಟನೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ನಂಬುತ್ತಾರೆ. ಸೀತಾ ಸ್ನಾನ ಮಾಡಿದ ನಿರ್ದಿಷ್ಟ ಸ್ಥಳವನ್ನು 'ಸೀತಾ ಮಧು' ಎಂದು ಕರೆಯಲಾಗುತ್ತದೆ.
ಪುರಾಣ ಪ್ರಸಿದ್ಧ ಸ್ಥಳ
ಚುಂಚನಕಟ್ಟೆ ಜಲಪಾತ ಕಾವೇರಿ ನದಿಯಿಂದ ರೂಪಗೊಂಡಿದೆ. ಮೈಸೂರಿನ ಕೃಷ್ಣರಾಜನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಈ ಜಲಪಾತವಿದೆ. ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವುದೇ ಒಂದು ರೀತಿಯ ಆನಂದ. ಇಲ್ಲಿ ಶ್ರೀರಾಮ ವನವಾಸಕ್ಕೆ ಬಂದಿದ್ದಾಗ ಚುಂಚಿ ಎಂಬ ಆದಿವಾಸಿ ಕುಟುಂಬದ ಆತಿಥ್ಯ ಸ್ವೀಕರಿಸಿದ್ದನಂತೆ.

ಈ ಸ್ಥಳದಲ್ಲಿ ಶ್ರೀರಾಮನಿಗೆ ಮುಡಿಪಾದ ಕೋದಂಡ ರಾಮನ ದೇವಾಲಯವಿದೆ. ಇದು ತುಂಬಾ ಹಳೆಯದಾಗಿದ್ದು ವಿಶೇಷ ಅಂದರೆ ಇದರ ಒಳಗೆ ಜಲಪಾತದ ಶಬ್ಧ ಕೇಳಿಸುವುದಿಲ್ಲ. ಇದಕ್ಕೆ ಒಂದು ಪೌರಾಣಿಕ ಕಾರಣವೂ ಇದೆ. ಶ್ರೀರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಯ ನಿರಂತರ ಮಾತುಗಳಿಂದ ಬೇಸರಗೊಂಡು ಹೆಣ್ಣುಮಕ್ಕಳ ನಾಲಿಗೆಯು ನಿಯಂತ್ರಣದಲ್ಲಿರಬೇಕೆಂದು ಶಪಿಸಿದ್ದನಂತೆ. ಕಾವೇರಿಯನ್ನು ಒಂದು ಹೆಣ್ಣಾಗಿ ಭಾವಿಸುವುದರಿಂದ ರಾಮನ ದೇವಾಲಯದ ಗರ್ಭ ಗೃಹದಲ್ಲಿದ್ದಾಹ ಹರಿಯುವ ನದಿಯ ಶಬ್ದವು ಕೇಳುವುದಿಲ್ಲವೆಂದು ಪುರಾಣಗಳು ಹೇಳುತ್ತವೆ.
ಸೀತಾ ಮಾತೆ ಸ್ನಾನ ಮಾಡಿದ ಸ್ಥಳ
ರಾಮ, ಲಕ್ಷ್ಮಣ ಹಾಗೂ ಸೀತೆ ವನವಾಸಕ್ಕೆ ಹೋದಾಗ ಸೀತಾ ಮಾತೆ ಸುಸ್ತಾಗಿ ಸ್ನಾನ ಮಾಡಲು ಬಯಸಿದಳಂತೆ. ಆಗ ಶ್ರೀರಾಮ ಲಕ್ಷ್ನಣನಿಗೆ ಒಂದು ಬಾಣಬಿಡಲು ಹೇಳುತ್ತಾನೆ. ಬಾಣಬಿಟ್ಟಾಗ ಭೂಮಿಯಿಂದ ಅರಿಶಿನ, ಎಣ್ಣೆ ಮತ್ತು ಸೀಗೆಕಾಯಿಯ ಅಂಶವಿರುವ ಮೂರು ಬಣ್ಣದ ನೀರು ಹೊಮ್ಮಿತೆಂದು ಹೇಳಲಾಗುತ್ತದೆ.
ಆಗ ಸೀತಾ ಮಾತೆ ಈ ನೀರಿನಲ್ಲಿ ಸ್ನಾನ ಮಾಡಿದಳೆಂದು ಸ್ಥಳೀಯ ಪುರಾಣಗಳು ಹೇಳುತ್ತವೆ. ಈ ಬಣ್ಣವನ್ನು ಮಳೆಗಾಲದ ಸಮಯದಲ್ಲಿ ಹೆಚ್ಚು ನೀರಿರುವಾಗ ಈಗಲೂ ಕಾಣಬಹುದು. ಹೀಗೆ ಈ ಜಲಪಾತ ಪ್ರಾಚೀನ ಪುರಾಣದೊಂದಿಗೆ ಸಂಪರ್ಕವನ್ನು ಹೊಂದಿದೆ.

ರಜಾ ದಿನಗಳಲ್ಲಿ ಪ್ರವಾಸಿಗರ ದಂಡು
ಮಳೆಗಾಲ ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೆ ಇಲ್ಲಿಗೆ ಹರಿದು ಬರುತ್ತದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಚಿತ್ರೀಕರಣಗೊಂಡಿದ್ದು ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಪ್ರವಾಸಿಗರ ಹೃದಯ ಕದಿಯುವ ಈ ಜಲಪಾತ ವರ್ಣಿಸಲಾಗದಷ್ಟು ಚಂದವಿದೆ.
ಮೈಸೂರಿನಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ಚುಂಚನಕಟ್ಟೆ ಜಲಪಾತವಿದೆ. ಮಳೆಗಾಲದಲ್ಲಿ ಈ ಜಲಪಾತಕ್ಕೆ ಜೀವಕಳೆ ತುಂಬಿರುತ್ತದೆ. 40 ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ರಜಾ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications